Ethanol Fuel: ಹೊಸ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್ ನೀಡಿದ ನಿತಿನ್ ಗಡ್ಕರಿ, ಪೆಟ್ರೋಲ್ ಡೀಸೆಲ್ ಅಗತ್ಯ ಇಲ್ಲ

ನಿತಿನ್ ಗಡ್ಕರಿ ಎಥನಾಲ್ ಇಂಧನ ಕೇಂದ್ರಗಳನ್ನು ತೆರೆಯುವ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ್ದಾರೆ.

Nitin Gadkari About Ethanol Fuel Station: ಸದ್ಯ ಕೇಂದ್ರ ಸರ್ಕಾರ ಮಾಲಿನ್ಯ ತಡೆಗಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭವಿಷ್ಯದಲ್ಲಿಈ ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಸರ್ಕಾರ ಈಗಾಗಲೇ ಯೋಜನೆ ಹೂಡುತ್ತಿದೆ. ವಾಯುಮಾಲಿನ್ಯ ತಡೆಗಾಗಿ ಸರ್ಕಾರ ಈಗಾಗಲೇ ಪರ್ಯಾಯ ಮಾರ್ಗವನ್ನು ಕೂಡ ಕಂಡುಕೊಂಡಿದೆ.

ಇದಕ್ಕಾಗಿಯೇ ದೇಶದ್ಲಲಿ ಎಲೆಕ್ಟ್ರಿಕ್ ಚಾಲಿತ ವಾಹನಗಳು, ಹಾಗೆಯೆ ಎಥನಾಲ್ ಚಾಲಿತ ವಾಹನಗಳನ್ನು ಪರಿಚಯಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ Toyota ಈಗಾಗಲೇ ಎಥನಾಲ್ ಚಾಲಿತ ವಾಹನಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಸದ್ಯ ಕೇಂದ್ರ ರಸ್ತೆ ಸಾರಿಗೆ ಸಚಿವರಾದ Nitin Gadkari ಅವರು ಎಥನಾಲ್ ಚಾಲಿತ ವಾಹನಗಳ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ್ದಾರೆ.

Nitin Gadkari About Ethanol Fuel Station
Image Credit: Ruralvoice

ದೇಶದಲ್ಲಿ ಶೀಘ್ರದಲ್ಲೇ ಎಥನಾಲ್ ಇಂಧನ ಕೇಂದ್ರಗಳನ್ನು ತೆರೆಯಲಾಗುವುದು
ಪುಣೆಯ ಪಶ್ಚಿಮ ನಗರದಲ್ಲಿ ನಡೆದ ಚೀನಾ ಸಮಾವೇಶದ ನೇಪಥ್ಯದಲ್ಲಿ ಮಾತನಾಡಿದ ಗಡ್ಕರಿ, ಎಥೆನಾಲ್ ಪಂಪ್‌ ಗಳನ್ನು ತೆರೆಯುವ ನನ್ನ ಬೇಡಿಕೆಯನ್ನು ಪೆಟ್ರೋಲಿಯಂ ಸಚಿವರು ಒಪ್ಪಿಕೊಂಡಿದ್ದಾರೆ. ದೇಶದಲ್ಲಿ 300 ಎಥೆನಾಲ್ ಪಂಪ್‌ ಗಳನ್ನು ಪ್ರಾರಂಭಿಸಲು ಇಂಡಿಯನ್ ಆಯಿಲ್ ನಿರ್ಧರಿಸಿದೆ ಎಂದು ಅವರು ಹೇಳಿದರು.

ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ. ಅದೇ ಸಮಯದಲ್ಲಿ, ತನ್ನ 2070 ನಿವ್ವಳ ಶೂನ್ಯ ಕಾರ್ಬನ್ ಗುರಿಯನ್ನು ಪೂರೈಸಲು ಅದರ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಉತ್ಸುಕವಾಗಿದೆ. ಜಪಾನಿನ ವಾಹನ ತಯಾರಕರ ಬೇಡಿಕೆಯನ್ನು ಅನುಸರಿಸಿ, ಭಾರತದ ವಾಣಿಜ್ಯ ಇಲಾಖೆಯು ಹೈಬ್ರಿಡ್ ವಾಹನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಒಲವು ತೋರಿದ್ದು, ಶುದ್ಧ ಇಂಧನ ಮೂಲಗಳತ್ತ ಸಾಗಲು ಸಹಾಯ ಮಾಡಿದೆ.

Ethanol Fuel Station
Image Credit: Chinimandi

ನಿತಿನ್ ಗಡ್ಕರಿ ಘೋಷಣೆ
ವಾಯುಮಾಲಿನ್ಯವನ್ನು ನಿಗ್ರಹಿಸಲು ಮತ್ತು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಭಾರತದ ಅವಲಂಭನೆಯನ್ನು ಕಡಿಮೆ ಮಾಡಲು ಶುದ್ಧ ಮತ್ತು ಪರ್ಯಾಯ ಇಂಧನಗಳ ಉತ್ಪಾಧನೆ ಮತ್ತು ಬಳಕೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದು ನಿತಿನ್ ಗಡ್ಕರಿ ಅವರು ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

ಸಚಿವರು ಹೇಳಿದಂತೆ ಶೀಘ್ರದಲ್ಲೇ ಎಥನಾಲ್ ಇಂಧನ ಕೇಂದ್ರಗಳು ದೇಶದಲ್ಲಿ ಸ್ಥಾಪನೆಯಾಗಲಿದೆ. ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬಂದನಂತರ ಇಂಧನ ಚಾಲಿತ ವಾಹನಗಳು ಬೇಡಿಕೆ ಕಳೆದುಕೊಂಡಂತೆ ಎಥನಾಲ್ ಚಾಲಿತ ವಾಹನಗಳ ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ ಅದರ ಬೇಡಿಕೆ ಹೆಚ್ಚುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

Join Nadunudi News WhatsApp Group