Toll Plaza: ಟೋಲ್ ಕಟ್ಟುವವರಿಗೆ ಹೊಸ ನಿಯಮ, ಎರಡು ವಿಧದಲ್ಲಿ ಟೋಲ್ ಕಟ್ಟಬೇಕು.

ಟೋಲ್ ಶುಲ್ಕಗಳಿಗೆ ಸಂಬಂಧಿಸಿದಂತೆ ಎರಡು ಹೊಸ ನಿಯಮಗಳನ್ನ ಜಾರಿಗೆ ತಂದಿದ್ದಾರೆ ನಿತಿನ್ ಗಡ್ಕರಿ.

Toll Plaza New Rules: ಹೊಸ ಹಣಕಾಸು ವರ್ಷದ (New Financial Year) ಆರಂಭದಿಂದ ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ಆಗಿದೆ. ಇನ್ನು ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತಲೇ ಇದೆ. ಇನ್ನು ವಾಹನಗಳ ಟೋಲ್ ತೆರಿಗೆಯ (Toll Tax) ವಿಚಾರವಾಗಿ ಸಾಕಷ್ಟು ನಿಯಮಗಳು ಜಾರಿಗೊಳ್ಳಲಿದೆ. ಇ

ದೀಗ ಟೋಲ್ ತೆರಿಗೆ ವಸೂಲಾತಿಯಲ್ಲಿ ಸರ್ಕಾರ ಮಹತ್ವದ ನಿರ್ಧಾರವನ್ನು ಮಾಡಿದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಮಾಹಿತಿ ನೀಡಿದ್ದಾರೆ.

Toll Plaza New Rules
Image Source: News18

ಟೋಲ್ ತೆರಿಗೆ ವಸೂಲಾತಿ ನಿಯಮದಲ್ಲಿ ಬದಲಾವಣೆ
ಇದೀಗ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಟೋಲ್ ವಿಷಯವಾಗಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಟೋಲ್ ತೆರಿಗೆಯ ವಸೂಲಾತಿ ವಿಚಾರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.

ಟೋಲ್ ತೆರಿಗೆಯ ಬದಲಾವಣೆಯಿಂದಾಗಿ ಸಾಕಷ್ಟು ವಾಹನ ಮಾಲೀಕರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀಳಲಿದೆ. ಗ್ರೀನ್ ಎಕ್ಸ್ ಪ್ರೆಸ್ ವೇ ಗಳಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸುವಂತೆ ಕೇಂದ್ರ ಸಚಿವರು ಸೂಚನೆ ನೀಡಿದ್ದಾರೆ.

Toll Plaza New Rules
Image Source: Vijay Karnataka

ಟೋಲ್ ತೆರಿಗೆ ವಸೂಲಾತಿಯಲ್ಲಿ 2 ಆಯ್ಕೆಗಳನ್ನು ನೀಡಲಿರುವ ಸರ್ಕಾರ
ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಗೆ ಸಂಬಂದಿಸಿದ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಲಿದೆ. ಟೋಲ್ ವಸೂಲಾತಿ ಪ್ರಕ್ರಿಯೆಗೆ ಎರಡು ಆಯ್ಕೆಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಎರಡು ಆಯ್ಕೆಗಳನ್ನು ನೀಡುವ ಮೂಲಕ ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಯನ್ನು ಎರಡು ವಿಭಿನ್ನ ರೀತಿಯಲ್ಲಿ ಮಾಡಲಾಗುತ್ತದೆ.

Join Nadunudi News WhatsApp Group

Toll Plaza New Rules
Image Source: News18

ಕಾರುಗಳಲ್ಲಿ GPS ವ್ಯವಸ್ಥೆಗಳನ್ನು ಸ್ಥಾಪಿಸುವುದು ಮೊದಲ ಆಯ್ಕೆ, ಆದರೆ ನಂಬರ್ ಪ್ಲೇಟ್ ಗೆ ಸಂಬಂಧಿಸಿದಂತೆ ಎರಡನೇ ಆಯ್ಕೆಯಲ್ಲಿ ತೆರಿಗೆ ವಸೂಲಾತಿ ಪ್ರಕ್ರಿಯೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಟೋಲ್ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಾಗಿ ತಂತ್ರಜ್ಞಾನದ ಬಳಕೆಯಾಗುತ್ತಿದೆ. ಟೋಲ್ ತೆರಿಗೆ ವಸೂಲಾಯಿತು ನಿಮ್ಮ ಖಾತೆಯಿಂದ ನೇರವಾಗಿ ಆಗಲಿದೆ.

Toll Plaza New Rules
Image Source: News18

Join Nadunudi News WhatsApp Group