Tax Saving: ತೆರಿಗೆ ನಿಯಮದಲ್ಲಿ ದೊಡ್ಡ ಬದಲಾವಣೆ, 12 ಲಕ್ಷದ ಈ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ

ಇನ್ನುಮುಂದೆ 12 ಲಕ್ಷದ ಈ ಆದಾಯಕ್ಕೆ ಯಾವುದೇ ತೆರಿಗೆ ಕಟ್ಟುವ ಇಲ್ಲ

No Income Tax On Salary: ಸದ್ಯ ದೇಶದಲ್ಲಿ ಹೊಸ ವರ್ಷದ ಆರಂಭವು ಆನೇಕ ಹೊಸ ಹೊಸ ತೆರಿಗೆ ನಿಯಮಗಳ (Income Tax Rules) ಜಾರಿಗೊಳಿಸುವಿಕೆಗೆ ಕಾರಣವಾಗಿದೆ. ಆದಾಯ ಇಲಾಖೆಯು ದಿನೇ ದಿನೇ ತೆರಿಗೆ ನಿಯಮಗಳನ್ನು ಕಠಿಣಗೊಳಿಸುತ್ತದೆ. ಆದಾಯ ಇಲಖೆಯ ಮಿತಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದರೆ ಅಂತವರು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಇನ್ನು ತೆರಿಗೆ ಪಾವತಿಯಲ್ಲಿ ನಕಲಿ ಮಾಹಿತಿ ನೀಡಿ ತೆರಿಗೆ ಉಳಿತಾಯ ಮಾಡಲು ಸಾಧ್ಯವಿಲ್ಲ. ಆದರೆ ನೀವು ಕೆಲವು ಸಂದರ್ಭದಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದೀಗ ನಾವು ತೆರಿಗೆ ವಿನಾಯಿತಿಯನ್ನು ಯಾವ ಯಾವ ಸಮಯದಲ್ಲಿ ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Income Tax Latest Update
Image Credit: Fortuneindia

ಇನ್ನುಮುಂದೆ 12 ಲಕ್ಷದ ಈ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ
ತೆರಿಗೆ ವಿನಾಯಿತಿ ಹಾಗೂ ಕನಿಷ್ಠ ತೆರಿಗೆ ಪಾವತಿಯ ಬಗ್ಗೆ ಹೆಚ್ಚಿನ ಜನರು ಯೋಚಿಸುತ್ತಾರೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 87A ಅಡಿಯಲ್ಲಿ ರೂ.12,500 ತೆರಿಗೆ ವಿನಾಯಿತಿ ಲಭ್ಯವಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ ಹಲವು ಹೂಡಿಕೆ ಆಯ್ಕೆಗಳಿವೆ. ನಿಮ್ಮ ಸಂಬಳ 12 ಲಕ್ಷ ರೂಪಾಯಿ ಆಗಿದ್ದರೂ, ನೀವು 1 ರೂಪಾಯಿ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ಆದಾಯ ತೆರಿಗೆ ಉಳಿಸಲು, ನಿಮ್ಮ ಉಳಿತಾಯವನ್ನು ಸರಿಯಾಗಿ ಯೋಜಿಸಬೇಕು. ಇದಕ್ಕಾಗಿ ನೀವು ಯಾವುದೇ ತಜ್ಞರ ಸಲಹೆ ಪಡೆದುಕೊಳ್ಳಬಹುದು. ಕಂಪನಿಯು ನಿಮ್ಮ ತೆರಿಗೆಯನ್ನು ಕಡಿತಗೊಳಿಸಿದ್ದರೆ, ನೀವು ITR ಸಲ್ಲಿಸುವ ಮೂಲಕ ಕಡಿತಗೊಳಿಸಿದ ಹಣವನ್ನು ಮರಳಿ ಪಡೆಯಬಹುದು. ರೂ. 12 ಲಕ್ಷ ಸಂಬಳದ ಮೇಲೆ ನೀವು ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ 30 ಪ್ರತಿಶತ ತೆರಿಗೆ ಬ್ರಾಕೆಟ್ ಅಡಿಯಲ್ಲಿ ಬರುತ್ತೀರಿ. ಈ ಸಂಬಳದಲ್ಲಿ ನೀವು ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವುದು ಉತ್ತಮ.

No income tax On Salary
Image Credit: Paytm

ತೆರಿಗೆ ನಿಯಮದಲ್ಲಿ ದೊಡ್ಡ ಬದಲಾವಣೆ
ಯಾವುದೇ ಕಂಪನಿಯು ತನ್ನ ಉದ್ಯೋಗಿಗಳ ಸಂಬಳವನ್ನು ಎರಡು ಭಾಗಗಳಲ್ಲಿ ಪಾವತಿಸುತ್ತದೆ. ಇದರಲ್ಲಿ ಮೊದಲನೆಯದನ್ನು ಭಾಗ-ಎ, ಎರಡನೆಯದನ್ನು ಭಾಗ-ಬಿ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ, 12 ಲಕ್ಷ ರೂಪಾಯಿ ಸಂಬಳದಲ್ಲಿ, 3 ಲಕ್ಷ ರೂಪಾಯಿಗಳನ್ನು ಭಾಗ-ಬಿ ಅಥವಾ ಭಾಗ-2 ನಲ್ಲಿ ಇರಿಸಲಾಗುತ್ತದೆ. ಈ ರೀತಿಯಾಗಿ ನಿಮ್ಮ ತೆರಿಗೆಯ ಆದಾಯವು ರೂ 9 ಲಕ್ಷಕ್ಕೆ ಕಡಿಮೆಯಾಗುತ್ತದೆ.

Join Nadunudi News WhatsApp Group

ನಿಮ್ಮ ಸಂಬಳ ಹೆಚ್ಚು ಇದ್ದರೆ, ಆದಾಯ ತೆರಿಗೆಯನ್ನು ಶೂನ್ಯ ಮಾಡಲು (0), ನೀವು 80CCD (1B) ಅಡಿಯಲ್ಲಿ NPS ನಲ್ಲಿ 50 ಸಾವಿರ ರೂ. ಹೂಡಿಕೆ ಮಾಡಬೇಕಾಗುತ್ತದೆ. ಇದರ ಹೊರತಾಗಿ, ಸೆಕ್ಷನ್ 80D ಅಡಿಯಲ್ಲಿ, ನೀವು ಮಕ್ಕಳು, ಹೆಂಡತಿ ಮತ್ತು ಪೋಷಕರ ಆರೋಗ್ಯ ವಿಮೆಗಾಗಿ ಪ್ರೀಮಿಯಂ ಅನ್ನು ಕ್ಲೈಮ್ ಮಾಡಬಹುದು. ಮಗು ಮತ್ತು ಹೆಂಡತಿಗೆ 25 ಸಾವಿರ ರೂ. ವರೆಗೆ ಪ್ರೀಮಿಯಂ ಕ್ಲೈಮ್ ಮಾಡಬಹುದು. ನೀವು ಪೋಷಕರಿಗೆ ಪ್ರತ್ಯೇಕವಾಗಿ 25000 ರೂ.ಗಳನ್ನು ಕ್ಲೈಮ್ ಮಾಡಬಹುದು. ನಿಮ್ಮ ಪೋಷಕರು ಹಿರಿಯ ನಾಗರಿಕರಾಗಿದ್ದರೆ ನೀವು ಪ್ರೀಮಿಯಂ ಆಗಿ 50,000 ರೂ. ಕ್ಲೈಮ್ ಮಾಡಬಹುದು.

Join Nadunudi News WhatsApp Group