Nominee: ಬ್ಯಾಂಕ್ ಖಾತೆಗೆ ನಾಮಿನಿ ಇಲ್ಲದಿದ್ದರೆ ವ್ಯಕ್ತಿ ಸತ್ತ ನಂತರ ಖಾತೆಯಲ್ಲಿನ ಹಣ ಯಾರಿಗೆ ಹೋಗುತ್ತೆ…? ಕಾನೂನು ಹೇಳುವುದೇನು.
ಖಾತೆದಾರರು ಮರಣ ಹೊಂದಿದ ಬಳಿಕ ಬ್ಯಾಂಕ್ ಖಾತೆಯ ಹಣ ಯಾರಿಗೆ ಸೇರುತ್ತದೆ...?
Bank Account Nominee Importance: ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಜನರಿಗೆ ಅನೇಕ ರೀತಿಯ Bank Account ತೆರೆಯುವ ಆಯ್ಕೆಯನ್ನು ನೀಡುತ್ತದೆ. ಉಳಿತಾಯ ಖಾತೆ, ಜಂಟಿ ಖಾತೆ, ಚಾಲ್ತಿ ಖಾತೆ, ಸಂಬಳ ಖಾತೆ ಸ್ಥಿರ ಠೇವಣಿ ಖಾತೆ, ಮರುಕಳಿಸುವ ಠೇವಣಿ ಖಾತೆ ಹೀಗೆ ಇನ್ನಿತರ ಖಾತೆಗಳ ಆಯ್ಕೆಗಳು ಜನರಿಗೆ ಲಭ್ಯವಿರುತ್ತದೆ.
ಇನ್ನು ಬ್ಯಾಂಕ್ ಖಾತೆಯಲ್ಲಿನ ಹೂಡಿಕೆಯಿಂದಾಗಿ ನೀವು ಲಾಭವನ್ನು ಪಡೆಯಬಹದು. ಬ್ಯಾಂಕ್ ಖಾತೆಯಲ್ಲಿ ನೀವು ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವ ಮುನ್ನ ಬ್ಯಾಂಕ್ ಖಾತೆಯ ನಿಯಮಗಳನ್ನು ಮೊದಲು ತಿಳಿದಿರಬೇಕು. ನೀವು ಬ್ಯಾಂಕ್ ಖಾತೆ ತೆರಯುವ ಮುನ್ನ ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.
![Nominee For Bank Account](https://nadunudi.in/wp-content/uploads/2023/12/Nominee-For-Bank-Account.jpg)
ಬ್ಯಾಂಕ್ ಖಾತೆಯನ್ನು ತೆರೆಯುವಾಗ ನಾಮಿನಿ ಆಯ್ಕೆ ಮುಖ್ಯ
ನೀವು ಬ್ಯಾಂಕ್ ಖಾತೆಯನ್ನು ತೆರೆಯುವಾಗ ನಿಮ್ಮ ಖಾತೆಗೆ ಒಬ್ಬರನ್ನು ನಾಮಿನಿಯನ್ನಾಗಿ ಆಯ್ಕೆ ಮಾಡಬೇಕಾಗುತ್ತದೆ. ನಾಮಿನಿಯಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ಆಯ್ಕೆ ಮಾಡಿಕೊಳ್ಳಬಹದು. ನೀವು ಮರಣ ಹೊಂದಿದರೆ ಬ್ಯಾಂಕ್ ನಿಯಮಾನುಸಾರ ಪರಿಶೀಲನೆ ನಡೆಸಿ ನಾಮಿನಿಗೆ ಮೊತ್ತವನ್ನು ನೀಡಲಾಗುತ್ತದೆ. ಇನ್ನು ಜಂಟಿ ಖಾತೆಯಲ್ಲಿ ನಾಮಿನಿಯನ್ನು ಸೇರಿಸಲು ಎಲ್ಲರಿಂದಲೂ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ. ಇನ್ನು Online Banking ನ ಮೂಲಕ ನೀವು ನಾಮಿನಿಯನ್ನು ಬದಲಾಯಿಸುವ ಅವಕಾಶ ಕೂಡಾ ಇರುತ್ತದೆ.
ಖಾತೆದಾರರು ಮರಣ ಹೊಂದಿದ ಬಳಿಕ ಬ್ಯಾಂಕ್ ಖಾತೆಯ ಹಣ ಯಾರಿಗೆ ಸೇರುತ್ತದೆ…?
ಇನ್ನು ಬ್ಯಾಂಕ್ ನಲ್ಲಿ ಮಾಡಿರುವ ಹಣದ ಡೆಪಾಸಿಟ್ ಮೊತ್ತವು ನಿಮ್ಮ ಮರಣದ ನಂತರ ಏನಾಗುತ್ತದೆ ಎನ್ನುವ ಬಗ್ಗೆ ಪ್ರಶ್ನೆಗಳು ನಿಮಗೆ ಬಂದಿರಬಹುದು. ನಿಮ್ಮ ಮರಣದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಜವಾಬ್ದಾರರು Nominee ಆಗಿರುತ್ತಾರೆ ಎನ್ನುವ ವಿಚಾರ ನಿಮಗೆ ತಿಳಿದಿರಲಿ. ಹೌದು ನೀವು ಬ್ಯಾಂಕ್ ಖಾತೆಯನ್ನು ತೆರೆಯುವಾಗ ಯಾರನ್ನು ನಾಮಿನಿಯಾಗಿ ಸೇರಿಸಿರುತ್ತೀರೋ ಅವರು ನಿಮ್ಮ ಮರಣದ ನಂತರ ನಿಮ್ಮ ಬ್ಯಾಂಕ್ ಖಾತೆಯ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.
![Bank Account Nominee Importance](https://nadunudi.in/wp-content/uploads/2023/12/Bank-Account-Nominee-Importance.jpg)
ಬ್ಯಾಂಕ್ ಖಾತೆಗೆ ನಾಮಿನಿ ಇಲ್ಲದಿದ್ದರೆ ವ್ಯಕ್ತಿ ಸತ್ತ ನಂತರ ಖಾತೆಯಲ್ಲಿನ ಹಣ ಯಾರಿಗೆ ಹೋಗುತ್ತೆ…?
ಒಂದು ವೇಳೆ ಬ್ಯಾಂಕ್ ಖಾತೆದಾರರು ಖಾತೆಯನ್ನು ತೆರೆಯುವಾಗ ನಾಮಿನಿ ಆಯ್ಕೆಯನ್ನು ನೀಡದೆ ಮರಣ ಹೊಂದಿದರೆ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಬ್ಯಾಂಕ್ ಖಾತೆಗೆ ನಾಮಿನಿಯೇ ಇಲ್ಲದಿದ್ದರೆ ಮರಣ ಹೊಂದಿದ ವ್ಯಕ್ತಿಯ ವಾರಸುದಾರರು ಖಾತೆಯಲ್ಲಿನ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ವಾರಸುದಾರರ ಪ್ರಮಾಣ ಪತ್ರ, ಸೇರಿದಂತೆ ವಿವಿಧ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಪತ್ರಿಕೆಗಳಲ್ಲಿ ನೋಟೀಸ್ ಮುದ್ರಿಸಬೇಕು. ವಿವಾದಿತ ಪ್ರಕರಣಗಳಲ್ಲಿ ವಾರಸುದಾರರು ಪ್ರೊಬೇಟ್ ಪಡೆಯಬೇಕು. ಕೆಲವೊಮ್ಮೆ ಇಂತಹ ಪ್ರೊಬೇಟ್ಗಳನ್ನು ಪಡೆಯಲು 50,000 ರೂ. ಖರ್ಚಾಗುತ್ತದೆ. ಹೀಗಾಗಿ ಬ್ಯಾಂಕ್ ಖಾತೆ ತೆರೆಯುವ ಪ್ರತಿಯೊಬ್ಬರೂ ನಾಮಿನಿಯ ಆಯ್ಕೆಯನ್ನು ಖಾತೆ ತೆರೆಯುವಾಗಲೇ ನೀಡುವುದು ಉತ್ತಮ.