Nothing Phone 2a: ಲೀಕ್ ಆಯಿತು 2024 ರಲ್ಲಿ ಬಿಡುಗಡೆ ಆಗುವ ನಥಿಂಗ್ ಫೋನ್ ಫೀಚರ್, ನೇರವಾಗಿ ಐಫೋನ್ ಗೆ ಪೈಪೋಟಿ

ಮುಂದಿನ ವರ್ಷದ ಬಿಡುಗಡೆ ಆಗಲಿರುವ ನಥಿಂಗ್ ಫೋನ್ ಫೀಚರ್ ಲೀಕ್ ಆಗಿದೆ

Nothing Phone 2a Feature: ಭಾರತೀಯ ಮಾರುಕಟ್ಟೆಯಲ್ಲಿ ದಿನೇ ದಿನೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಪರಿಚಯವಾಗುತ್ತಿದೆ. ಇದೀಗ ಸ್ಮಾರ್ಟ್ ಫೋನ್ ಗಳ ವಿಭಾಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ನಥಿಂಗ್ ಫೋನ್ ಗಳು (Nothing Phone) ಜಾಗತಿಕವಾಗಿ ಅತಿ ಹೆಚ್ಚು ಬಳಕೆದಾರರನ್ನು ಪಡೆದುಕೊಂಡಿವೆ.

ಹೌದು ಭಾರತವು ಸೇರಿದಂತೆ ನಥಿಂಗ್ ಫೋನ್ ಗಳಿಗೆ ಜಾಗತಿಕವಾಗಿ ಅತಿ ಹೆಚ್ಚು ಬೇಡಿಕೆ ಇದೆ. ಈ ನಥಿಂಗ್ ಫೋನ್ (Nothing Phone) ಗಳು ಆಪಲ್ ಹಾಗೂ ಸ್ಯಾಮ್ ಸಂಗ್ ಮತ್ತು iPhoneಗಳ ಜೊತೆ ನೇರವಾಗಿ ಸ್ಪರ್ದಿಸುತ್ತವೆ. ಇದೀಗ ನಾವು ಕಂಪನಿ ಅನಾವರಣ ಮಾಡಲು ಹೊರಟಿರುವ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Nothing Phone 2A Price
Image Credit: Androidcentral

Nothing Phone 2A
ನಥಿಂಗ್ ಫೋನ್ 2A ಈಗಾಗಲೇ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಈ ಮೂಲಕ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಸ್ಮಾರ್ಟ್ ಫೋನ್ ಆಕರ್ಷಕ ಫೀಚರ್ ಹಾಗೂ ಅತ್ಯುತ್ತಮ ಕ್ಯಾಮರಾ ಮೂಲಕ ಹೆಚ್ಚಿನ ಗ್ರಾಹಕರನ್ನು ಪಡೆದುಕೊಳ್ಳಲಿದೆ. ನಥಿಂಗ್ ಫೋನ್ 2A 2024 ರ ಫೆಬ್ರವರಿ 27 ರಂದು ಲಂಚ್ ಆಗಲಿದೆ ಎಂದು ಮಾಹಿತಿ ತಿಳಿದುಬಂದಿದೆ.

ನಥಿಂಗ್ ಫೋನ್ 2A ಕ್ಯಾಮರಾ ಹಾಗೂ ಬ್ಯಾಟರಿ ಸಾಮರ್ಥ್ಯ
ನಥಿಂಗ್ ಫೋನ್ 2A ನ ಕ್ಯಾಮರಾ ಬಗ್ಗೆ ಮಾತಾಡುದಾದರೆ, ಇದು 50 ಮೆಗಾ ಪಿಕ್ಸೆಲ್ ಸ್ಯಾಮ್ ಸಂಗ್ ISOCELL S5KGN9 ಸೆನ್ಸಾರ್+ ಅಲ್ಟ್ರಾ ವೈಡ್ ಕ್ಯಾಮರಾದೊಂದಿಗೆ ಡುಯೆಲ್ ರಿಯರ್ ಕ್ಯಾಮರಾ ರಚನೆಯನ್ನು ಹೊಂದಿದೆ. ಇದರಿಂದ ಉತ್ತಮವಾದ ಫೋನ್ ಹಾಗೂ ವಿಡಿಯೋ ಅನ್ನು ಸೆರೆಹಿಡಿಯಬಹುದಾಗಿದೆ. ಹಾಗೆ ಈ ಫೋನ್ ನ ಸೆಲ್ಫಿ ಕ್ಯಾಮರಾ 32 ಮೆಗಾ ಪಿಕ್ಸೆಲ್ ಸೋನಿ IMX615 ಸೆನ್ಸಾರ್ ಹೊಂದಿರಲಿದೆ. ನಥಿಂಗ್ ಫೋನ್ 2A 5000 mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಿಂದ ಉತ್ತಮ ಬ್ಯಾಕ್ ಅಪ್ ಪಡೆಯಬಹುದಾಗಿದೆ. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಲಭ್ಯವಾಗಲಿದೆ.

Nothing Phone 2A Feature
Image Credit: gsmchina

Nothing Phone 2A Feature
ನಥಿಂಗ್ ಫೋನ್ 2A 6.7 ಇಂಚಿನ ಫುಲ್ ಹೆಚ್ ಡಿ ಅಮೋಲೆಡ್ ಡಿಸ್ ಪ್ಲೇ ಅನ್ನು ಪಡೆದುಕೊಂಡಿದೆ. 120 Hz ರಿಫ್ರೆಶ್ ರೇಟ್ 1000 ನಿಟ್ಸ್ ಗರಿಷ್ಠ ಬ್ರಿಟನ್ಸ್ ಅನ್ನು ಪಡೆದುಕೊಂಡಿದೆ. ಹಾಗೆ ಈ ಫೋನ್ ಗೇಮಿಂಗ್ ಪ್ರಿಯರಿಗೆ ಉತ್ತಮವಾದ ಆಯ್ಕೆಯಾಗಿದೆ. ನಥಿಂಗ್ ಫೋನ್ 2A ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಹೀಗೆ ಆಕರ್ಷಕ ಫೀಚರ್ ಮೂಲಕ ಈ ಸ್ಮಾರ್ಟ್ ಫೋನ್ ಗ್ರಾಹಕರ ಕೈ ಸೇರಲಿದೆ.

Join Nadunudi News WhatsApp Group

Nothing Phone 2A Price
ಇನ್ನು ಈ ಸ್ಮಾರ್ಟ್ ಫೋನ್ 8GB RAM ಹಾಗೂ 128GB ಇಂಟೆರ್ ಸ್ಟೋರೇಜ್ ಆಯ್ಕೆಯಲ್ಲಿ ಗ್ರಾಹಕರ ಕೈ ಸೇರಲಿದೆ. ಹಾಗೆ ಭಾರತದಲ್ಲಿ ಈ ಸ್ಮಾರ್ಟ್ ಫೋನ್ ನ ಬೆಲೆ 35 ಸಾವಿರ ಆಗಿದೆ. ಹಲವು ವೇರಿಯೆಂಟ್ ನಲ್ಲಿ ಮೊಬೈಲ್ ಲಾಂಚ್ ಆಗಲಿದ್ದು ಭಾರತದಲ್ಲಿ ಈ ಮೊಬೈಲ್ ನ ಆರಂಭಿಕ ಬೆಲೆ 35 ಸಾವಿರ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.

Join Nadunudi News WhatsApp Group