Nothing Phone 3: iPhone 15 ಗೆ ಠಕ್ಕರ್ ಕೊಡಲು ಬಂತು ಅಗ್ಗದ Nothing Phone 3, ಕ್ಯಾಮೆರಾ ಮತ್ತು ಫೀಚರ್ ಕಂಡು ಜನರು ಫಿದಾ

2024 ಕ್ಕೆ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ Nothing Phone 3 ರಿಲೀಸ್ ಆಗಲಿದೆ

Nothing Phone 3 Launch In 2024: ದೇಶದಲ್ಲಿ 2020 ರಲ್ಲಿ Nothing ಕಂಪನಿ ಟೆಕ್ ವಲಯದಲ್ಲಿ ಹೊಸ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುವ ಮೂಲಕ ಜನರಿಗೆ ಪರಿಚಯವಾಗಿದೆ. 2022 ರಲ್ಲಿ Nothing phone 1 ಹಾಗೆಯೆ 2023 ರಲ್ಲಿ Nothing Phone 2 ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ವಿಶೇಷ ಫೀಚರ್ ಇರುವಂತಹ Nothing Phone ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ಕಂಪನಿಯು ಇದೀಗ ಮುಂದಿನ ವರ್ಷ ತನ್ನ Nothing Phone 3 ಅನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕಂಪನಿಯು ತನ್ನ ಮೂರನೇ ಸ್ಮಾರ್ಟ್ ಫೋನ್ ತಯಾರಿಯನ್ನು ಆರಂಭಿಸಿದೆ. ಇದೀಗ ನಾವು Nothing Phone 3 ರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Nothing Phone 3 Launch In 2024
Image Credit: News Best

ಹೊಸ ವರ್ಷಕೆ ಲಾಂಚ್ ಆಗಲಿದೆ Nothing Phone 3
2024 ರಲ್ಲಿ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ Nothing Phone 3 ರಿಲೀಸ್ ಆಗಲಿದೆ. ಮಾರುಕಟ್ಟೆಯಲ್ಲಿ ನಥಿಂಗ್ ಕಂಪನಿಯ್ ಎರಡು ಸರಣಿಯ ಫೋನ್ ಗಳು ಆಕರ್ಷಕ ವಿನ್ಯಾಸ ಹಾಗೂ ಕ್ಯಾಮೆರಾ ಫೀಚರ್ ನ ಮೂಲಕ ಗ್ರಹಕ್ರನ್ನು ಸೆಳೆದಿತ್ತು. ಸದ್ಯ ಇದೀಗ ಮುಂಬರುವ ಹೊಸ ಮಾದರಿಯಲ್ಲಿ ಕಂಪನಿಯು ಇನ್ನು ಅತ್ಯಾಧುನಿಕ ಫೀಚರ್ ಅನ್ನು ಅಳವಡಿಸಲಿದೆ. ಐಫೋನ್ ಮಾದರಿಗೆ ಠಕ್ಕರ್ ನೀಡುವಂತಹ ಕ್ಯಾಮೆರಾ, ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಕಂಪನಿ ಬ್ಯುಸಿ ಆಗಿದೆ. 2024 ರಲ್ಲಿ ಆದಷ್ಟು ಬೇಗ Nothing phone 3 ಗ್ರಾಹಕರ ಕೈಸೇರಲಿದೆ.

Nothing Phone 3 ವಿನ್ಯಾಸ ಹೇಗಿರಲಿದೆ..?
Nothing Phone 3 ಹಿಂದ ಆವೃತ್ತಿಗಿಂತಲೂ ಹೆಚ್ಚಿನ ಫೀಚರ್ ನಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಫೋನ್ ನ ಕೆಲ ಫೀಚರ್ ನ ಬಗೆ ಕೂಡ ಮಾಹಿತಿ ಲಭಿಸಿದೆ. ಫೋನ್ ಅನ್ನು ಗ್ಲಿಫ್ ಇಂಟರ್ಫೇಸ್, ಎಲ್ಇ ಡಿ ದೀಪಗಳು ಮತ್ತು ಹಿಂಭಾಗದಲ್ಲಿ ಅಧಿಸೂಚನೆ ದೀಪಗಳೊಂದಿಗೆ ವಿನ್ಯಾಸಗೊಳಿಸಲಾಗುವುದು ಎಂದು ವರದಿಯಾಗಿದೆ. ಈ ಫೋನಿನಲ್ಲಿ ಕ್ಯಾಮೆರಾ ಕೂಡ ಅಪ್‌ ಡೇಟ್ ಆಗಲಿರುವ ಬಗ್ಗೆ ವರದುಯಾಗಿದೆ. ನಥಿಂಗ್ ಫೋನ್ 3 ಸ್ನಾಪ್‌ ಡ್ರಾಗನ್ 8 ಪ್ಲಸ್ ಜೆನ್ 1 ಪ್ರೊಸೆಸರ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

Nothing Phone 3 Price
Image Credit: Dildarnagar

ಎಷ್ಟು ಬೆಲೆಯಲ್ಲಿ ಬಿಡುಗಡೆಯಾಗಲಿದೆ Nothing Phone 3..?
ಈ ಸ್ಮಾರ್ಟ್ಫೋನ್ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಮುಂಭಾಗದ ಕ್ಯಾಮೆರಾವನ್ನು ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಪಂಚ್ ಹೋಲ್ ಡಿಸ್ಪ್ಲೇಯೊಂದಿಗೆ ನೀಡಲಾಗುವುದು ಎನ್ನುವ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಇನ್ನು Nothing Phone 3 ರ ಬೆಲೆಯ ಬಗ್ಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ Nothing Phone 1 ಬೆಲೆ 32,999 ರೂ. ಆಗಿದ್ದು, Nothing Phone 2 ಬೆಲೆ 44,999 ರೂ. ಆಗಿದೆ.

Join Nadunudi News WhatsApp Group

ಹೀಗಿರುವಾಗ ಈ ಎರಡು ಮಾದರಿಗಿಂತ ಹೆಚ್ಚಿನ ಫೀಚರ್ ಹೊಂದಿರುವ Nothing Phone 3 ಎರಡು ಮಾದರಿಗಿಂತ ಸ್ವಲ್ಪ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನಥಿಂಗ್ ಫೋನ್ 3 ರ ಬೆಲೆ ಸುಮಾರು 49,000 ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ

Join Nadunudi News WhatsApp Group