Nothing Phone: ಶೀಘ್ರದಲ್ಲಿ ಬಿಡುಗಡೆ ಆಗಲಿದೆ ನಥಿಂಗ್ ಫೋನ್ 2, ಈ ಫೋನಿನಲ್ಲಿ ಇದೆ ಹಲವು ವಿಶೇಷತೆ.

ನಥಿಂಗ್ ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ 5G ಫೋನ್ ನ ಬರುವಿಕೆಯನ್ನು ಕಂಪನಿ ಈಗಾಗಲೇ ದ್ರಢಪಡಿಸಿದೆ.

Nothing Phone: ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸ್ಮಾರ್ಟ್ ಫೋನ್  (Smart Phone) ಗಳು ಬೆಳಕಿಗೆ ಬಂದಿವೆ. ಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇನ್ನು ಹೊಸ ಮಾದರಿಯ ನಥಿಂಗ್ ಫೋನ್ (2) ಬರುವಿಕೆಯ ಬಗ್ಗೆ ಈಗಾಗಲೇ ಮಾಹಿತಿ ಲಭಿಸಿದೆ. ನಥಿಂಗ್ ಫೋನ್ (Nothing Phone)  ನ ಚಿತ್ರವೂ ಈಗಾಗಲೇ ಸೋರಿಕೆಯಾಗಿದೆ.

ಶೀಘ್ರದಲ್ಲಿ ಬಿಡುಗಡೆ ಆಗಲಿದೆ ನಥಿಂಗ್ ಫೋನ್ 2
ನಥಿಂಗ್ ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ 5G ಫೋನ್ ನ ಬರುವಿಕೆಯನ್ನು ಕಂಪನಿ ಈಗಾಗಲೇ ದ್ರಢಪಡಿಸಿದೆ. ಆದರೆ ಕಂಪನಿಯಿಂದ ಮೊಬೈಲ್ ಫೋನ್ ಬಿಡುಗಡೆ ದಿನಾಂಕದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಈ ಬೇಸಿಗೆಯಲ್ಲಿಯೇ ನಥಿಂಗ್ ಫೋನ್ ಬಿಡುಗಡೆಗೊಳ್ಳಲಿದೆ.

nothing phone 2
Image Source: Zee News

ನಥಿಂಗ್ ಫೋನ್ 2 ನ ವಿಶೇಷತೆ
ಕ್ವಾಲ್ ಕಾಮ್ ನ SVP ಮತ್ತು ಮೊಬೈಲ್, ಕಂಪ್ಯೂಟರ್ ಮತ್ತು XR ಘಟಕಗಳ GM ಆಗಿರುವ ಅಲೆಕ್ಸ್ ಕಾಟೂಜಿಯಂ, ಲಿಂಕ್ಡ್ ಇನ್ ನಲ್ಲಿ ನಥಿಂಗ್ ಫೋನ್ (2) Snapdragon 8 + Gen 2 SoC ನೊಂದಿಗೆ ಬರಲಿದೆ ದ್ರಢಪಡಿಸಿದೆ. ಇದು ಅತ್ಯಂತ ವೇಗದ ಚಿಪ್ ಆಗಿದ್ದು, ಇತ್ತೀಚಿನ ಹಲವು ಪ್ರಮುಖ ಫೋನ್ ಗಳಿಗೆ ಶಕ್ತಿ ತುಂಬಲಿದೆ.

ಫ್ಲ್ಯಾಗ್ ಶಿಪ್ ಚಿಪ್ ನ ಬಳಕೆಯು ಹಿಂದಿನ ಮಾದರಿಗಿಂತ ಬೆಲೆ ಸ್ವಲ್ಪ ಹೆಚ್ಚಿರಬಹುದು ಎಂದು ಸೂಚಿಸಿದೆ. ಮೊದಲ ತಲೆಮಾರಿನ ನಥಿಂಗ್ ಫೋನ್ ಅನ್ನು ಭಾರತದಲ್ಲಿ ರೂ. 32999 ರ ಆರಂಭಿಕ ಬೆಲೆಯೊಂದಿಗೆ ಘೋಷಿಸಲಾಯಿತು. ಈ ಹ್ಯಾಂಡ್ ಸೆಟ್ ಮದ್ಯ ಶ್ರೇಣಿಯ ಸ್ನ್ಯಾಪ್ ಡ್ರಾಗನ್ 778G +ಚಿಪ್ ಅನ್ನು ಹುಡ್ ಅಡಿಯಲ್ಲಿ ಬಳಸುತ್ತಿದೆ. ಇನ್ನು ಮುಂದೆ ಬಿಡುಗಡೆ ಆಗಲಿರುವ ಫೋನ್ ನ ಬೆಲೆ 40000 ಎನ್ನಲಾಗುತ್ತಿದೆ.

nothing phone 2
Image Source: Youtube

Join Nadunudi News WhatsApp Group

Join Nadunudi News WhatsApp Group