Facebook: ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವವರಿಗೆ ಗುಡ್ ನ್ಯೂಸ್ ಕೊಟ್ಟ ಫೇಸ್ ಬುಕ್, ಹೊಸ ಅಪ್ಡೇಟ್ ಬಿಡುಗಡೆ.

ಈಗ ವಾಟ್ಸಾಪ್ ಸ್ಟೇಟಸ್ ಅನ್ನು ಫೇಸ್ ಬುಕ್ ಸ್ಟೋರಿ ಅಲ್ಲಿ ಹಾಕಬಹುದು, ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ ಫೇಸ್ ಬುಕ್.

WhatsApp Status And Facebook Story: ವಾಟ್ಸಾಪ್ (WhatsApp) ನಲ್ಲಿ ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ಗಳು ಬಿಡುಗಡೆಗೊಳ್ಳುತ್ತಲೇ ಇದೆ. ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಅನ್ನು ಪರಿಚಯಿಸಿದೆ.

ಈ ಹೊಸ ಫೀಚರ್ ಫೇಸ್ ಬುಕ್ (Facebook) ಬಳಕೆದಾರರಿಗೆ ಹೆಚ್ಚಿನ ಉಪಯೋಗ ತಂದುಕೊಡಲಿದೆ. ಈ ಬಾರಿ ವಾಟ್ಸ್ ಆಪ್ ಸ್ಟೇಟಸ್ ನವೀಕರಣದಲ್ಲಿ ಅಪ್ಡೇಟ್ ಅನ್ನು ಪರಿಚಯಿಸಿದೆ. ವಾಟ್ಸಾಪ್ ನ ಹೊಸ ಫೀಚರ್ ಅಪ್ಡೇಟ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Now WhatsApp status can be put on Facebook story.
Image Credit: 91mobiles

ಫೇಸ್ಬುಕ್ ಸ್ಟೋರಿಯಲ್ಲಿ ವಾಟ್ಸಾಪ್ ಸ್ಟೇಟಸ್
ಫೇಸ್ ಬುಕ್ ಹಾಗೂ ವಾಟ್ಸಾಪ್ ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿದೆ. ಇದೀಗ ವಾಟ್ಸಾಪ್ ಹಾಗು ಫೇಸ್ ಬುಕ್ ನಲ್ಲಿ ಹೊಸ ನವೀಕರಣ ಬಂದಿದೆ. ಫೇಸ್ ಬುಕ್ ಬಳಕೆದಾರರು ಸ್ಟೋರಿ (Facebook Story) ಹಾಕುವುದು ಸಾಮಾನ್ಯವಾದ ವಿಷಯ.

ಹಾಗೆಯೆ ಇನ್ನುಮುಂದೆ ನಿಮ್ಮ ವಾಟ್ಸಾಪ್ ಹಾಗೂ ಫೇಸ್ ಬುಕ್ ಸ್ಟೋರಿಗಳು ಒಂದೇ ಆಗಿರಲು ಇದೀಗ ವಾಟ್ಸಾಪ್ ನಲ್ಲಿ ಹೊಸ ಅಪ್ಡೇಟ್ ಬಂದಿದೆ. ಇನ್ನುಮುಂದೆ ಫೇಸ್ ಬುಕ್ ನಲ್ಲಿ ನಿಮ್ಮ ವಾಟ್ಸಾಪ್ ಸ್ಟೇಟಸ್ (WhatsApp Status) ಅನ್ನು ಕೂಡ ಸ್ಟೋರಿ ಆಗಿ ಮಾಡಿಕೊಳ್ಳಬಹುದು.

Now WhatsApp status can be put on Facebook story.
Image Credit: telepolis

ವಾಟ್ಸಾಪ್ ಅನ್ನು ತೊರೆಯದೆ ಇನ್ನುಮುಂದೆ ಫೇಸ್ ಬುಕ್ ಸ್ಟೋರಿಗಳನ್ನು ಹಂಚಿಕೊಳ್ಳಬಹುದು. ವಾಟ್ಸಾಪ್ ನ ಹೊಸ ಫೀಚರ್ ಆಯ್ಕೆಯನ್ನು ಸಕ್ರಿಯಗೊಳಿಸಿದಾಗ ಬಳಕೆದಾರರು ಆಯ್ಕೆ ಮಾಡಿದ ಕೆಲವು ಸ್ಥಿತಿ ನವೀಕರಣಗಳಿಗೆ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಬಹುದು.

Join Nadunudi News WhatsApp Group

ವಾಟ್ಸಾಪ್ ಸ್ಟೇಟಸ್ ಅಪ್ಡೇಟ್ ಫೀಚರ್
ಇನ್ನು ಇತ್ತೀಚಿಗೆ ವಾಟ್ಸಾಪ್ ಸ್ಟೇಟಸ್ ನಲ್ಲಿ ಕೂಡ ಸಾಕಷ್ಟು ಫೀಚರ್ ಗಳು ಅಪ್ಡೇಟ್ ಆಗಿವೆ. ಸ್ಟೇಟಸ್ ಬಳಸುವಲ್ಲಿ ನೀವು ಇನ್ನುಮುಂದೆ ಗೌಪತ್ಯೆಯನ್ನು ಕೂಡ ಕಾಪಾಡಿಕೊಳ್ಳಬಹುದು. ಯಾರಿಗೆ ಮಾತ್ರ ನೀವು ಸ್ಟೇಟಸ್ ಹಾಕಲು ಬಯಸುತ್ತೀರೋ ಅವರಿಗೆ ಮಾತ್ರ ನಿಮ್ಮ ಸ್ಟೇಟಸ್ ಅನ್ನು ಹಾಕಿಕೊಳ್ಳಬಹುದು. ಹಾಗೆಯೆ ಇನ್ನುಮುಂದೆ ವಾಟ್ಸಾಪ್ ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿ ಕೂಡ ಸ್ಟೇಟಸ್ ಅನ್ನು ಅಪ್ಲೋಡ್ ಮಾಡಬಹುದಾಗಿದೆ.

Join Nadunudi News WhatsApp Group