World Cup: ವಿಶ್ವಕಪ್ ತಂಡದಿಂದ ಹೊರಬಿದ್ದ ಇಬ್ಬರು ಸ್ಟಾರ್ ಪ್ಲೇಯರ್ಸ್, ಬೇಸರದಲ್ಲಿ ಫ್ಯಾನ್ಸ್.

ದಕ್ಷಿಣ ಆಫ್ರಿಕಾ ತಂಡದಲ್ಲಿ ದೊಡ್ಡ ಬದಲಾವಣೆ, ಇಬ್ಬರು ಸ್ಟಾರ್ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ.

ODI World Cup 2023 Team: 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ (World Cup) ಕ್ರಿಕೆಟ್ ವಿಶ್ವಕಪ್ ನ 13 ನೇ ಆವೃತ್ತಿಯಾಗಿದೆ. ಇದನ್ನು ಭಾರತ ಅಕ್ಟೋಬರ್ 5 ರಿಂದ ನವೆಂಬರ್ 19 ರ ವರೆಗೆ ನೆಡೆಸಲು ನಿರ್ಧರಿಸಿದೆ. ಈ ಟೂರ್ನಿ ಅಲ್ಲಿ 17 ತಂಡಗಳು ಭಾಗವಹಿಸಲಿದೆ. ಆ 17 ತಂಡಗಳಲ್ಲಿ ಒಂದು ತಂಡ ಟೀಮ್ ನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.

ODI World Cup South Africa Squad 2023
Image Credit: Freepressjournal

ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದ ಇಬ್ಬರು ಆಟಗಾರರು
2023 ರ ಐಸಿಸಿ ವಿಶ್ವಕಪ್ ಪಂದ್ಯಕ್ಕೂ ಮೊದಲೇ ದಕ್ಷಿಣ ಆಫ್ರಿಕಾ ತಂಡ ಹಿನ್ನೆಡೆಯನ್ನು ಅನುಭವಿಸಿದೆ. ಅನ್ರಿಚ್ ನಾರ್ಟ್ಜ್ ಮತ್ತು ಸಿಸಂಡಾ ಮಗಾಲಾ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಾರೆ. ಇಬ್ಬರು ವೇಗದ ಬೌಲರ್ ಗಳು ಇತ್ತೀಚಿಗೆ ದಕ್ಷಿಣ ಆಫ್ರಿಕಾದ ಆಸ್ಟ್ರೇಲಿಯಾ ವಿರುದ್ದದ 3 -2 ಸರಣಿಯ ವಿಜಯದಲ್ಲಿ ಕಾಣಿಸಿಕೊಂಡರು, ಆದರೆ ಅವರ ಗಾಯಗಳು ಅವರ ಭಾಗವಹಿಸುವಿಕೆಯನ್ನು ನಿರ್ಬಂಧಿಸಿತ್ತು. ಅನ್ರಿಚ್ ನಾರ್ಟ್ಜ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಹಾಗೆ ಸಿಸಂಡಾ ಮಗಾಲಾ ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ.

ಬದಲಿ ಆಟಗಾರರ ನೇಮಕ
ಗಾಯಗೊಂಡ ಆಟಗಾರರ ಬದಲಿಗೆ ಆಂಡೀಲ್ ಪೆಹ್ಲುಕ್ವಾಯೋ ಮತ್ತು ಲಿಜಾಡ್ ವಿಲಿಯಮ್ಸ್ ಅವರನ್ನು ತಂಡಕ್ಕೆ ನೇಮಕ ಮಾಡಲಾಗಿದೆ. ಪೆಹ್ಲುಕ್ವಾಯೋ ಆಸ್ಟ್ರೇಲಿಯಾ ತಂಡದ ವಿರುದ್ಧ ಎರಡು ODI ಪಂದ್ಯದಲ್ಲಿ ಭಾಗವಹಿಸಿ 2 ವಿಕೆಟ್ ಪಡೆದುಕೊಂಡಿದ್ದಾರೆ.

ODI World Cup 2023
Image Credit: Zeenews

ODI ವಿಶ್ವಕಪ್ ಗಾಗಿ ದಕ್ಷಿಣ ಆಫ್ರಿಕಾ ತಂಡದ ಆಟಗಾರರು
ಟೆಂಬಾ ಬವುಮಾ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದಾರೆ, ರಾಸ್ಸಿ ವ್ಯಾನ್ ಡೆರ್ ಡಸೇನ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ತಬ್ರೈಜ್ ಸ್ಹಮ್‌ಸಿ, ಲಿಜಾಡ್ ವಿಲಿಯಮ್ಸ್ ದಕ್ಷಿಣ ಆಫ್ರಿಕಾ ತಂಡದ ಆಟಗಾರರಾಗಿದ್ದಾರೆ.

Join Nadunudi News WhatsApp Group

Join Nadunudi News WhatsApp Group