Okaya Sports Bike: ಪ್ರತಿ ಕಿಲೋಮೀಟರಿಗೆ ಕೇವಲ 25 ಪೈಸೆ ಖರ್ಚು, ಈ ಬೈಕ್ ಖರೀದಿಗೆ ಕೇಂದ್ರದಿಂದ ಸಿಗಲಿದೆ ಸಬ್ಸಿಡಿ.

ಈ ಬೈಕ್ ಖರೀದಿಸುವವರಿಗೆ ಕೇಂದ್ರದಿಂದ ಸಿಗಲಿದೆ ಸಬ್ಸಿಡಿ ಹಣ

Okaya Ferrato Disruptor Sports Bike: ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳನ್ನೂ ಲಾಂಚ್ ಆಗುತ್ತಿದೆ. ಯುವಕರು ನೂತನ ಮಾದರಿಯ ಬೈಕ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ಸ್ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಸ್ಪೋರ್ಟ್ಸ್ ಬೈಕ್ ಸಾಮಾನ್ಯವಾಗಿ ದುಬಾರಿ ಯಾಗಿದ್ದು, ಅದರ ನಿರ್ವಹಣಾಯೆ ಕೂಡ ದುಬಾರಿಯಾಗಿರುತ್ತದೆ.

ಈ ಕಾರಣಕ್ಕೆ ಹಲವಾರು ಜನರು ಸ್ಪೋರ್ಟ್ಸ್ ಬೈಕ್ ಗಳನ್ನೂ ಖರೀದಿಸಲು ಹಿಂದೇಟು ಹಾಕುತ್ತಾರೆ. ಆದರೆ ನಿಮಗೀಗ ನೂತನ ಮಾದರಿಯ ಸ್ಪೋರ್ಟ್ಸ್ ಬೈಕ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಬಂದೊದಗಿದೆ. ಹೌದು, ಭಾರತದಲ್ಲಿ Okaya ಸ್ಟಾರ್ಟ್ಅಪ್ ಕಂಪನಿಯು ಹೊಸ ಸ್ಪೋರ್ಟ್ಸ್ ಬೈಕ್ ಅನ್ನು ಬಿಡುಗಡೆ ಮಾಡಿದೆ.

ಈ ಸ್ಪೋರ್ಟ್ಸ್ ಬೈಕ್ ನ ವಿಶೇಷತೆ ಎಂದರೆ ನೀವು ಈ ಬೈಕ್ ಅನ್ನು ಸಬ್ಸಿಡಿಯಲ್ಲಿ ಕೂಡ ಖರೀದಿಸಬಹುದಾಗಿದೆ. ನಾವೀಗ ಈ ಲೇಖನದಲ್ಲಿ ಈ ನೂತನ ಮಾದರಿಯ ಸ್ಪೋರ್ಟ್ಸ್ ಬೈಕ್ ನ ಬಗ್ಗೆ ಮಾಹಿತಿ ನೀಡಲಿದ್ದೇವೆ.

Okaya Ferrato Disruptor Sports Bike
Image Credit: Carandbike

ಪ್ರತಿ ಕಿಲೋಮೀಟರಿಗೆ ಕೇವಲ 25 ಪೈಸೆ ಖರ್ಚು
ಭಾರತದಲ್ಲಿ ಇದೀಗ ಸ್ಟಾರ್ಟ್‌ ಅಪ್ ಕಂಪನಿಯಾದ Okaya ತನ್ನ ಹೊಸ Okaya Ferrato Disruptor Sports Bike ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಆಗಿದೆ. ಇದು ಅಷ್ಟೇ ಅತ್ಯುತ್ತಮವಾದ ಕಾರ್ಯಕ್ಷಮತೆಯ ಜೊತೆಗೆ ಅತ್ಯಂತ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ವಿಶೇಷವೆಂದರೆ ಈ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 129 ಕಿ.ಮೀ. ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಫುಲ್ ಚಾರ್ಜ್ ಗೆ ಕೇವಲ 32 ರೂಪಾಯಿ ಖರ್ಚು ಮಾಡಿದರೆ ಸಾಕು. ಅಂದರೆ ಪ್ರತಿ ಕಿಲೋಮೀಟರಿಗೆ ಕೇವಲ 25 ಪೈಸೆ ವೆಚ್ಚವಾಗುತ್ತದೆ. ಈ ಮೂಲಕ ನೀವು ಒಕಾಯಾ ಸ್ಪೋರ್ಟ್ಸ್ ಬೈಕ್‌ ನ ನಿರ್ವಹಣೆಯನ್ನು ಅತಿ ಕಡಿಮೆ ಖರ್ಚಿನಲ್ಲಿ ಮಾಡಬಹುದು.

Join Nadunudi News WhatsApp Group

Okaya Ferrato Disruptor Sports Bike Mileage
Image Credit: 91wheels

ಈ ಬೈಕ್ ಖರೀದಿಗೆ ಕೇಂದ್ರದಿಂದ ಸಿಗಲಿದೆ ಸಬ್ಸಿಡಿ
ಇದು ಎಲೆಕ್ಟ್ರಿಕ್ ಬೈಕ್ ಆಗಿರುವುದರಿಂದ ಕೇಂದ್ರ ಸರ್ಕಾರದ FAME 2 ಸಬ್ಸಿಡಿ ಯೋಜನೆ ಅನ್ವಯವಾಗಲಿದೆ. ಹೀಗಾಗಿ ಈ ಬೈಕ್ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸಬ್ಸಿಡಿ ಸಿಗಲಿದೆ. ಕರ್ನಾಟಕ ಸರ್ಕಾರದ ಸಹಾಯಧನ ಯೋಜನೆಗಳು ಪೂರ್ಣಗೊಂಡಿವೆ. ಆದರೆ ಇತರ ಕೆಲವು ರಾಜ್ಯಗಳಲ್ಲಿ ಸಬ್ಸಿಡಿ ಯೋಜನೆಗಳು ಲಭ್ಯವಿದೆ.

ಹೀಗಾಗಿ ಈ ಬೈಕ್ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ಕಂಪನಿಯು 3 ವರ್ಷಗಳ ವಾರಂಟಿ ಅಥವಾ 30,000 ಕಿಮೀ ಬ್ಯಾಟರಿ ವಾರಂಟಿಯನ್ನು ನೀಡುತ್ತಿದೆ. ಈಗ ಒಕಾಯಾ ಫೆರಾಟೊ ಡಿಸ್ರಪ್ಟರ್ 95 ಕಿಮೀ ಗಂಟೆಗೆ ಗರಿಷ್ಠ ವೇಗವನ್ನು ಹೊಂದಿದೆ. ಸ್ಪೋರ್ಟ್ಸ್ ಬೈಕ್‌ಗೆ ಹೋಲಿಸಿದರೆ ಓಕೆ ಸ್ಪೋರ್ಟ್ಸ್ ಬೈಕ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಒಕಾಯಾ ಫೆರಾಟೊ ಡಿಸ್ರಪ್ಟರ್ ಬೈಕ್ ಬೆಲೆ 1.60 ಲಕ್ಷ ರೂ. ನಿಗದಿಪಡಿಸಲಾಗಿದೆ.

Okaya Ferrato Disruptor Sports Bike Price
Image Credit: Zeenews

Join Nadunudi News WhatsApp Group