Ola Cars: ಟೆಸ್ಲಾಗೆ ಹೊಡೆತ ಕೊಡಲು ಬರುತ್ತಿದೆ ಓಲಾ ಎಲೆಕ್ಟ್ರಿಕ್ ಕಾರ್, ಕಡಿಮೆ ಬೆಲೆಯ ಐಷಾರಾಮಿ ಕಾರ್.

ಒಂದೇ ಚಾರ್ಜ್ ನಲ್ಲಿ 300 ಕಿಲೋಮೀಟರ್ ಚಲಿಸುವ ಸಾಮರ್ಥ್ಯ ಪಡೆದಿರುವ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರನ್ನು ಓಲಾ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

Ola Electric Sedan Cars: ಭಾರತೀಯ ಇವಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹಾವಳಿ ಹೆಚ್ಚುತ್ತಿದೆ. ಇನ್ನು ವಿವಿಧ ಎಲೆಕ್ಟ್ರಿಕ್ ಕಾರ್ ತಯಾರಕ ಕಂಪನಿಗಳು ಹೊಸ ಮಾದರಿಯ ವಿಭಿನ್ನ ಶೈಲಿಯ ಕಾರನ್ನು ಪರಿಚಯಿಸುತ್ತಿವೆ. ಇದೀಗ ಓಲಾ (Ola) ಕಂಪನಿ ಇವಿ ಮಾರುಕಟ್ಟೆಯಲ್ಲಿ ಉನ್ನತ ಶ್ರೇಣಿಯಲ್ಲಿ ಮಾರಾಟವನ್ನು ಕಂಡುಕೊಂಡಿದೆ. ಓಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇವೆ.

ಓಲಾ ಎಲೆಕ್ಟ್ರಿಕ್ ಕಾರ್ ಬಿಡುಗಡೆ
ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲಗಳ ಬೆಲೆ ಕೈಗೆಟುಕದಂತಾಗಿದೆ. ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಗನಕ್ಕೇರುತ್ತಿದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ಕಾರ್ ಹಾಗೂ ಬೈಕ್ ಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ.

Ola Electric Sedan Battery Capacity and Price
Image Credit: Hindustantimes

ಎಲೆಕ್ಟ್ರಿಕ್ ಕಾರ್ ಗಳ ಬೇಡಿಕೆ ಹೆಚ್ಚುತ್ತಿದ್ದಂತೆ ಮಾರುಕಟ್ಟೆಗೆ ಓಲಾ ತನ್ನ ಹೊಸ ಹೊಸ ಕಾರನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಓಲಾ ಕಂಪನಿ ಇನ್ನಿತರ ಎಲೆಕ್ಟ್ರಿಕ್ ವಾಹನಗಳಿಗೆ ಪೈಪೋಟಿ ನೀಡಲು ಹೊಸ ಮಾದರಿಯ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಓಲಾ ಎಲೆಕ್ಟ್ರಿಕ್ ಸೆಡಾನ್ (Ola Electric Sedan) 
ಟೆಸ್ಲಾ ಕಂಪನಿಯ ಕಾರುಗಳಿಗೆ ಪೈಪೋಟಿ ನೀಡಲು ಇದೀಗ ಓಲಾ ಕಂಪನಿಯ ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆಗೆ ಸಜ್ಜಾಗಿದೆ. ಓಲಾ ಎಲೆಕ್ಟ್ರಿಕ್ ಸೆಡಾನ್ ನ ವಿನ್ಯಾಸವು ಇನಿತರ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿದರೆ ಭಿನ್ನವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೆಚ್ಚಿನ ವೇಗವನ್ನು ಹಿಡಿದಿಡಲು ಈ ಎಲೆಕ್ಟ್ರಿಕ್ ಕಾರ್ ಸಹಾಯವಾಗಲಿದೆ. ವೇಗದ ಚಾರ್ಜಿಂಗ್ ನ ಜೊತೆಗೆ ಹೆಚ್ಚಿನ ಮೈಲೇಜ್ ನೀಡುವ ಕಾರ್ ಇದಾಗಿದ್ದು ಕಡಿಮೆ ಬೆಲೆಗೆ ಗ್ರಾಹಕರಿಗೆ ಸಿಗಲಿದೆ.

Ola Electric Sedan Battery Capacity and Price
Image Credit: Carwale

ಓಲಾ ಎಲೆಕ್ಟ್ರಿಕ್ ಸೆಡಾನ್ ಬ್ಯಾಟರಿ ಸಾಮರ್ಥ್ಯ ಮತ್ತು ಬೆಲೆ
ಓಲಾ ಎಲೆಕ್ಟ್ರಿಕ್ ಸೆಡಾನ್ ಬಲಿಷ್ಠ ಬ್ಯಾಟರಿಯನ್ನು ಹೊಂದಿದ್ದು, 50 ರಿಂದ 60 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಈ ಓಲಾ ಎಲೆಕ್ಟ್ರಿಕ್ ಸೆಡಾನ್ ಕಾರ್ ಒಂದೇ ಚಾರ್ಜ್ ನಲ್ಲಿ 300 ಕಿಲೋಮೀಟರ್ ಚಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ

Join Nadunudi News WhatsApp Group

ಇನ್ನು ಭಾರತದಲ್ಲಿ ಈ ಓಲಾ ಎಲೆಕ್ಟ್ರಿಕ್ ಸೆಡಾನ್ ಕಾರ್ ನ ಬೆಲೆ ಸುಮಾರು 30 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಕಂಪನಿಯು ಈ ಕಾರ್ ನ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

Join Nadunudi News WhatsApp Group