Ola S1X: ಸಿಂಗಲ್ ಚಾರ್ಜ್ ನಲ್ಲಿ 190 Km ಮೈಲೇಜ್, ಹೊಸ Ev ಸ್ಕೂಟರ್ ಬೇಡಿಕೆ ಕಳೆದುಕೊಂಡ ಅಥೇರ್ ಮತ್ತು ಬಜಾಜ್

190km ಮೈಲೇಜ್ ನೀಡುವ ಹೊಸ EV ಲಾಂಚ್ ಮಾಡಿದ ಓಲಾ

Ola S1X Electric Scooter: ಭಾರತೀಯ ಆಟೋ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಬ್ಬರ ಜೋರಾಗಿದೆ. ವಿವಿಧ ಕಂಪನಿಗಳು ಹೊಸ ಹೊಸ ವಿನ್ಯಾಸದಲ್ಲಿ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸುತ್ತಿವೆ. ಗ್ರಾಹಕರಿಗೆ ಹೊಸ ಎಲೆಕ್ಟ್ರಿಕ್ ಮಾದರಿಯನ್ನು ಖರೀದಿಸಲು ಆಯ್ಕೆಗೆ ಯಾವುದೇ ಕೊರತೆ ಇಲ್ಲ ಎನ್ನಬಹುದು.

ಸಧ್ಯ ಮಾರುಕಟ್ಟೆಯಲ್ಲಿ ಓಲಾ (Ola) ಕಂಪನಿಯು ಇದೀಗ ಹೊಸ ಹೆಜ್ಜೆ ಇಡಲು ಮುಂದಾಗಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಲಾಂಚ್ ಮಾಡುವುದರ ಜೊತೆಗೆ ಚಾರ್ಜಿಂಗ್ ಕೆಪ್ಯಾಬಿಲಿಟಿಯನ್ನು ಹೆಚ್ಚಿಸಲು ನಿರ್ಧರಿಸಿದೆ.

Ola S1X Electric Scooter
Image Credit: Bikedekho

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ ಓಲಾ EV
ಇನ್ನು ಟಿವಿಎಸ್, ಹೀರೋ, ಎಥರ್ ಕಂಪನಿಗಳು ಹೊಸ ಮಾದರಿಯ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುತ್ತಿರುವ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ Ola ಕಂಪನಿಯು ಇದೀಗ ತನ್ನ EV Charging ಅನ್ನು ಹೆಚ್ಚಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಇನ್ನು EV ಚಾರ್ಜಿಂಗ್ ಅನ್ನು ಹೆಚ್ಚಿಸುವ ಉದ್ದೇಶದಿಂದ ಕಂಪನಿಯು ತನ್ನ ಸರ್ವಿಸ್ ಸೆಂಟರ್ ಅನ್ನು ಹೆಚ್ಚಿಸಿವುದಾಗಿ ಘೋಷಿಸಿದೆ.

190km ಮೈಲೇಜ್ ನೀಡುವ ಹೊಸ EV ಲಾಂಚ್ ಮಾಡಿದ ಓಲಾ
ಇದೀಗ ಮಾರುಕಟ್ಟೆಯಲ್ಲಿ ಓಲಾ ಕಂಪನಿಯು ನೂತನವಾಗಿ ವಿಭಿನ್ನ ವೈಶಿಷ್ಟ್ಯಗಳಿರುವ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಮಾದರಿಯ ಹೆಸರು S1X Electric Scooter ಆಗಿದೆ. ಈ ಮಾದರಿಯು 4kWh ಬ್ಯಾಟರಿ ಪ್ಯಾಕ್ ನೊಂದಿಗೆ ಲಾಂಚ್ ಆಗಲಿದ್ದು, ಮಾರುಕಟ್ಟೆಯಲ್ಲಿ ರೂ. 1 .09 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ.

Ola S1X Electric Scooter Price In India
Image Credit: Times Of India

ಈ ಮಾದರಿಯು ಗ್ರಾಹಕರಿಗೆ ಏಪ್ರಿಲ್ ನಿಂದ ಖರೀದಿಗೆ ಲಭ್ಯವಾಗಲಿದೆ. ಇನ್ನು Ola S1X Electric Scooter ನ ಮೈಲೇಜ್ ನ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್ ಸಿಂಗಲ್ ಚಾರ್ಜ್ ನಲ್ಲಿ ಬರೋಬ್ಬರಿ 190km ಮೈಲೇಜ್ ನೀಡಲಿದೆ. ಇನ್ನು ನೀವು ಈ ನೂತನ ಎಲೆಕ್ಟ್ರಿಕ್ ಮಾದರಿಯನ್ನು ಕೇವಲ 5 ರಿಂದ 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಇನ್ನು ಈ ಎಲೆಕ್ಟ್ರಿಕ್ ಮಾದರಿಯು 3 .3 ಸೆಕೆಂಡ್ ಗಳಲ್ಲಿ 0 ರಿಂದ 40 ಕಿಲೋಮೀಟರ್ ವರೆಗೆ ವೇಗವನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group