Android: ಆಗಸ್ಟ್ 1 ರಿಂದ ಬಂದ್ ಆಗಲಿದೆ ಇಂತಹ ಮೊಬೈಲ್, ಇಂತಹ ಆಂಡ್ರಾಯ್ಡ್ ಫೋನ್ ದೇಶಾದ್ಯಂತ ಬಂದ್.
ಆಗಸ್ಟ್ ಮೊದಲ ವಾರವೇ ದೇಶದಲ್ಲಿ ಇಂತಹ ಮೊಬೈಲ್ ಬಂದ್ ಆಗಲಿದೆ.
Old Android Smartphone Are Closed: ಪ್ರಸ್ತುತ ಜಗತ್ತಿನಲ್ಲಿ ಮೊಬೈಲ್ (Mobile) ಮಾನವನ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಕೂಡ ಮೊಬೈಲ್ ಫೋನ್ ಗಳನ್ನೂ ಬಳಸುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಫೋನ್ ಗಳು ಬಿಡುಗಡೆಯಾಗುತ್ತಲೇ ಇದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಮೊಬೈಲ್ ಬಳಕೆದಾರರಿಗೆ ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಲೇ ಇದ್ದೆ.
ಇನ್ನು ಇತ್ತೀಚಿಗೆ ಮೊಬೈಲ್ ನ ಮೂಲಕ ಹಗರಣಗಳು ಕೂಡ ಹೆಚ್ಚುತ್ತಿವೆ. ಇದೀಗ ಹಳೆಯ ಆಂಡ್ರಾಯ್ಡ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನೀವು ಹಳೆಯ ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಈ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಹಳೆಯ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ಬೆಂಬಲ ಸ್ಥಗಿತ
ಹಳೆಯ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಸುರಕ್ಷಿತವಾಗಿರುವುದಿಲ್ಲ. ಇದೀಗ ಗೂಗಲ್ Android 4.4 KitKat ಗಾಗಿ Android ಬೆಂಬಲವನ್ನು Google ನಿಂದ ಸ್ಥಗಿತಗೊಳಿಸಲಾಗುತ್ತಿದೆ. ನೀವು ಬಳಸುತ್ತಿರುವ ಸ್ಮಾರ್ಟ್ ಫೋನ್ ಕಿಟ್ ಕ್ಯಾಟ್ ಅಥವಾ ಹಿಂದಿನ ಆಂಡ್ರಾಯ್ಡ್ ಆವೃತ್ತಿಯನ್ನು ಆಧರಿಸಿದ್ದಾರೆ ಅದರ ಬೆಂಬಲವನ್ನು ಸ್ಥಗಿತಗೊಳಿಸಲಾಗುತ್ತದೆ.
ಗೂಗಲ್ ಹಳೆಯ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ಬೆಂಬಲ ಸ್ಥಗಿತಗೊಳಿಸಿದ ನಂತರ ಸುಮಾರು 10 ವರ್ಷ ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ ಗೂಗಲ್ ಸಿಸ್ಟಮ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ.
ಆಗಸ್ಟ್ 1 ರಿಂದ ಬಂದ್ ಆಗಲಿದೆ ಇಂತಹ ಮೊಬೈಲ್
ಆಗಸ್ಟ್ 1 ರಿಂದ ಗೂಗಲ್ 10 ವರ್ಷ ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ ಬೆಂಬಲವನ್ನು ಸ್ಥಗಿತಗೊಳಿಸಲಿದೆ. ಪ್ರಸ್ತುತ ಕೇವಲ 1 ಪ್ರತಿಶತದಷ್ಟು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳು ಆಂಡ್ರಾಯ್ಡ್ ಕಿಟ್ಕ್ಯಾಟ್ ಅಥವಾ ಆಂಡ್ರಾಯ್ಡ್ ಸಿಸ್ಟಮ್ ಅನ್ನು ಆಧರಿಸಿವೆ.
ಆಂಡ್ರಾಯ್ಡ್ ಬೆಂಬಲ ಸ್ಥಗಿತಗೊಂಡ ನಂತರ ಗೂಗಲ್ ಪ್ಲೇ ಸ್ಟೋರ್ ಕಾರ್ಯನಿರ್ವಹಿಸುವುದಿಲ್ಲ. ನಿಮ ಮನೆಯಲ್ಲಿ 10 ವರ್ಷದ ಹಳೆಯ ಸ್ಮಾರ್ಟ್ ಫೋನ್ ಇದ್ದರೆ ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.