OPS Update: ಸರ್ಕಾರೀ ನೌಕರರಿಗೆ ಮಹತ್ವದ ಸೂಚನೆ, ಇನ್ಮುಂದೆ ಪಿಂಚಣಿ ಹಣ ಪಡೆಯಲು ಈ ದಾಖಲೆ ಕಡ್ಡಾಯ.

ಇನ್ಮುಂದೆ ಪಿಂಚಣಿ ಹಣ ಪಡೆಯಲು ಈ ದಾಖಲೆ ಕಡ್ಡಾಯ

Old Pension New Update: ಪ್ರಸ್ತುತ ರಾಜ್ಯದಲ್ಲಿ ಸರ್ಕಾರೀ ನೌಕರರ ವೇತನ ಹೆಚ್ಚಳದ ಜೊತೆಗೆ ನೌಕರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದರ ಬಗ್ಗೆ ಕೂಡ ಬಾರಿ ಚರ್ಚೆ ನಡೆಯುತ್ತಿದೆ. ಸದ್ಯ ರಾಜ್ಯ ಸರ್ಕಾರ ಇಂತಹ ಸರ್ಕಾರ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದಾಗಿ ಘೋಷಿಸಿದೆ.

ಸದ್ಯ ರಾಜ್ಯ ಸರ್ಕಾರದಿಂದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಯಾರು ಹಳೆಯ ಪಿಂಚಣಿ ವ್ಯವಸ್ಥೆಗೆ ಅರ್ಹಾರ್ಗಿರುತ್ತಾರೋ ಅಂತರವರು ಈ ಎಲ್ಲ ಮುಖ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ.

Old Pension New Update
Image Credit: Zeebiz

ಸರ್ಕಾರೀ ನೌಕರರಿಗೆ ಮಹತ್ವದ ಸೂಚನೆ
ದಿನಾಂಕ 01.04.2006 ಕ್ಕಿಂತ ಮೊದಲು ನೇಮಕಗೊಂಡ ಮತ್ತು ನಂತರ ಮಂಜೂರಾದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಯಡಿ ತರಲು ರಾಜ್ಯ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದೆ. ದಿನಾಂಕ: 01-04-2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಸಂಬಂಧಪಟ್ಟ ಸರ್ಕಾರಿ ನೌಕರರಿಂದ ಅಭಿಮತ ಪಡೆದು ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ನೌಕರರಿಗೆ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿದೆ. ಷರತ್ತುಗಳ ಜೊತೆಗೆ ಹಳೆಯ ಪಿಂಚಣಿಗೆ ಅರ್ಜಿ ಸಲ್ಲಿಸಲು ಸರ್ಕಾರ ಈ ದಾಖಲೆಗಳನ್ನು ಕಡ್ಡಾಯಗೊಳಿಸಿದೆ.

Old Pension Latest News
Image Credit: ibc24

ಇನ್ಮುಂದೆ ಪಿಂಚಣಿ ಹಣ ಪಡೆಯಲು ಈ ದಾಖಲೆ ಕಡ್ಡಾಯ
•ಹುದ್ದೆಗಳನ್ನು ಭರ್ತಿಮಾಡಲು ಪ್ರಕಟಿಸಲಾದ ನೇಮಕಾತಿ ಅಧಿಸೂಚನೆಯ ದಿನಾಂಕದ ಪ್ರತಿ

•ಸಂಬಂಧಪಟ್ಟ ಆಯ್ಕೆ ಪಟ್ಟಿಯ ದಿನಾಂಕದ ಪ್ರತಿ

Join Nadunudi News WhatsApp Group

•ನೇಮಕಾತಿ ಆದೇಶದ ದಿನಾಂಕದ ಪ್ರತಿ

•ನೇಮಕದ ನಂತರ ಇಲಾಖೆಯಲ್ಲಿ ಬದಲಾವಣೆಯಾಗಿದೆಯೇ..? ಈ ವಿವರಗಳನ್ನು ನೀಡುವುದು.

•ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಛೇರಿ/ಇಲಾಖೆಯ ವಿಳಾಸ

•ಕೆಜಿಐಡಿ ಸಂಖ್ಯೆ

•NPS ಪ್ರಾನ್ ನಂ

•ಪ್ರಸ್ತುತ ಪೇಸ್ಲಿಪ್

Old Pension Update
Image Credit: Informalnewz

Join Nadunudi News WhatsApp Group