OPS New Update: ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ, ಹಳೆಯ ಪಿಂಚಣಿ ಬಗ್ಗೆ ಇನ್ನೊಂದು ಘೋಷಣೆ

ಹಳೆಯ ಪಿಂಚಣಿ ವಿಷಯವಾಗಿ ಸರ್ಕಾರೀ ನೌಕರರಿಗೆ ಸರ್ಕಾರದಿಂದ ಬರುತ್ತಾ ಗುಡ್ ನ್ಯೂಸ್

Old Pension Scheme latest Update: ಸದ್ಯ ರಾಜ್ಯದಲ್ಲಿ ನೌಕರರ ವೇತನದ ಜೊತೆಗೆ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಯ ಬಗ್ಗೆ ಕೂಡ ಸಾಕಷ್ಟು ದಿನಗಳಿಂದ ಒಂದೊಂದೇ ಅಪ್ಡೇಟ್ ಹೊರಬೀಳುತ್ತಿದೆ.

ಸರ್ಕಾರೀ ನೌಕರರು ಸಾಕಷ್ಟು ಸಮಯದಿಂದ ಹೊಸ ಪಿಂಚಣಿಯನ್ನು ರದ್ದುಪಡಿಸಿ, ಹಳೆಯ ಪಿಂಚಣಿಯನ್ನು ಜಾರಿ ಮಾಡುವಂತೆ ಸರ್ಕಾರಕ್ಕೆ ಮೇಲಿನ ಮೇಲೆ ಮನವಿ ಸಲ್ಲಿಸುತ್ತಾ ಇದ್ದಾರೆ. ಸದ್ಯ ರಾಜ್ಯ ಸರ್ಕಾರ ಹಳೆಯ ಪಿಂಚಣಿ ಜಾರಿಯ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

Old Pension Scheme Updates
Image Credit: Jagran

ಹಳೆಯ ಪಿಂಚಣಿ ಜಾರಿ ಬಗ್ಗೆ ಸರ್ಕಾರದಿಂದ ಬಿಗ್ ಅಪ್ಡೇಟ್
ಇನ್ನು ಕೆಲವು ರಾಜ್ಯದಲ್ಲಿ ಈಗಾಗಲೇ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಿದ್ದು, ನೌಕರರು ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಈವರೆಗೂ ಹಳೆಯ ಪಿಂಚಣಿ ಜಾರಿ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಈಗಾಗಲೇ ಸಾಕಷ್ಟು ಬಾರಿ ಹಳೆಯ ಪಿಂಚಣಿ ಜಾರಿ ಮಾಡುವುದಾಗಿ ಸರ್ಕಾರ ಹೇಳಿಕೆ ನೀಡಿದೆ.

ಆದರೆ ಈವರೆಗೆ ಯಾವುದೇ ಅಧಿಕೃತ ಘೋಷಣೆ ಕಂಡು ಬಂದಿಲ್ಲ. ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. ತಿಂಗಳಿನೊಳಗೆ ರಾಜ್ಯ ಸರ್ಕಾರೀ ನೌಕರರಿಗೆ ಹಳೆಯ ಪಿಂಚಣಿ ವಿಷಯವಾಗಿ ಅಪ್ಡೇಟ್ ನೀಡಬೇಕು ಎನ್ನುವ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಆದಷ್ಟು ಬೇಗ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಘೋಷಣೆ ಹೊರಡಿಸಲಿದ್ದಾರೆ.

Old Pension Scheme latest Updates
Image Credit: Zeebiz

ಫೆ. 28 ರಂದು OPS ಜಾರಿ ಬಗ್ಗೆ CM ಮಹತ್ವದ ಸಭೆ
ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕೆನ್ನುವ ಸರ್ಕಾರೀ ನೌಕರರ ಮಾನವೀಯ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಈ ಸಂಬಂಧ ಫೆ. 28 ರಂದು ಮಹತ್ವದ ಸಭೆ ಕರೆದಿದ್ದಾರೆ. ರಾಜ್ಯ ಸರ್ಕಾರೀ NPS ನೌಕರರ ಪದಾಧಿಕಾರಿಗಳೊಂದಿಗೆ ಫೆ. 28 ರಂದು ಸಂಜೆ ಆರು ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.

Join Nadunudi News WhatsApp Group

ಸಭೆಯ್ಲಲಿ ಸರ್ಕಾರೀ ನೌಕರರ ಬೇಡಿಕೆಯ ಬಗ್ಗೆ ಚರ್ಚೆ ನಡೆಸಲಿದ್ದು, ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಸಾಧ್ಯತೆ ಇದೆ. ಈ ಬಾರಿ ಆದರೂ ರಾಜ್ಯ ಸರಕಾರ ನೌಕರರ ಬೇಡಿಕೆಗೆ ಒಪ್ಪಿಗೆ ನೀಡುತ್ತದಾ..? ಎನ್ನುವುದನ್ನು ನೋಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಹಳೆಯ ಪಿಂಚಣಿ ಜಾರಿ ಬಗ್ಗೆ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group