Old Pension: ಇನ್ನುಮುಂದೆ ತಿಂಗಳಿಗೆ ಇಂತಿಷ್ಟು ಮಾತ್ರ ಸಿಗಲಿದೆ ಪಿಂಚಣಿ, ನಿಯಮ ಬದಲಾಯಿಸಲು ಮುಂದಾದ ಕೇಂದ್ರ.

ಹಳೆಯ ಪಿಂಚಣಿ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡ ಸರ್ಕಾರ.

Old Pension Scheme: ಇತ್ತೀಚಿಗೆ ಸರ್ಕಾರಿ ನೌಕರರಿಗೆ ವೇತನದ ವಿಷಯವಾಗಿ ಸರ್ಕಾರ ಸಾಕಷ್ಟು ರೀತಿಯ ಅಪ್ಡೇಟ್ ಗಳನ್ನೂ ನೀಡುತ್ತಿವೆ. ಸರ್ಕಾರಿ ನೌಕರರ ವೇತನ ಹೆಚ್ಚಳದ ಕುರಿತು ಸರ್ಕಾರ ನೌಕರರಿಗೆ ಸಿಹಿಸುದ್ದಿ ನೀಡಿದೆ.

ಇನ್ನು ಇತ್ತೀಚಿಗೆ ಹಳೆಯ ಪಿಂಚಣಿ (Old Pension) ನೀಡುವ ಕುರಿತು ಸಾಕಷ್ಟು ರೀತಿಯ ಸುದ್ದಿಗಳು ಹರಡಿದ್ದವು. ಇದೀಗ ಸರ್ಕಾರ ಹಳೆಯ ಪಿಂಚಣಿ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಎಷ್ಟು ಪಿಂಚಣಿ ಸೌಲಭ್ಯ ನೀಡಲಾಗುತ್ತದೆ ಎನ್ನುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಪಿಂಚಣಿ ನಿಯಮದಲ್ಲಿ ಬದಲಾವಣೆ

Change in Pension Rules
Image Credit: Zoomnews

ಪ್ರಸ್ತುತ ಸರ್ಕಾರೀ ನೌಕರರಿಗೆ ಹೊಸ ಪಿಂಚಣಿ ಪದ್ದತಿಯಲ್ಲಿ ಪಿಂಚಣಿ ನೀಡಲಾಗುತ್ತಿದೆ. ಹೀಗಾಗಿ ನೌಕರರು ಹಳೆಯ ಪಿಂಚಣಿ ಪದ್ಧತಿ ಪ್ರಕಾರ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು ಅನೇಕ ನಿಯಮಗಳು ಬದಲಾಗಿವೆ.

ಇನ್ನು 2006 ರ ನಂತರ ನೇಮಕವಾಗಿರುವ ಎಲ್ಲಾ ಸರ್ಕಾರೀ ನೌಕರರು ಮತ್ತು ಅವರ ಅವಲಂಭಿತ ಕುಟುಂಬಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. 7 ನೇ ವೇತನ ಆಯೋಗದ ವರದಿಗಳನ್ನು ಶೀಘ್ರವಾಗಿ ಪಡೆದು ವೇತನ, ಭತ್ಯೆ ಪರಿಷ್ಕರಿಸಬೇಕು ಎಂದು ಸರಕಾರಿ ನೌಕರರು ಮನವಿ ಮಾಡಿದ್ದರು. ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಕನಿಷ್ಠ ಪಿಂಚಣಿಯ 40 % ರಿಂದ 45 % ಕೊನೆಯ ಸಂಬಳದ ಭರವಸೆ ನೀಡಲಿದೆ ಎಂದು ರಾಯಿಟರ್ಸ್ ವರದಿ ನೀಡಿದ್ದಾರೆ.

Join Nadunudi News WhatsApp Group

Change in Pension Rules
Image Credit: Ahmednagarlive24

ಇನ್ನುಮುಂದೆ ತಿಂಗಳಿಗೆ ಇಂತಿಷ್ಟು ಮಾತ್ರ ಸಿಗಲಿದೆ ಪಿಂಚಣಿ
ಪ್ರಸ್ತುತ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS ) ನೌಕರರು ಮೂಲ ವೇತನದ 10 % ಮತ್ತು ಸರ್ಕಾರಕ್ಕೆ 14 % ರಷ್ಟು ಕೊಡುಗೆ ನೀಡಬೇಕಾಗುತ್ತದೆ. ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ಕೊನೆಯ ವೇತನದ 50 % ಖಾತರಿ ಪಿಂಚಣಿಯಾಗಿ ನೀಡಲಾಗುತ್ತದೆ. ನೌಕರರು ತಮ್ಮ ಕೊನೆಯ ಸಂಬಳದ 40% ರಿಂದ 45% ರಷ್ಟು ಪಿಂಚಣಿಯಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

Join Nadunudi News WhatsApp Group