Old Petrol Bill: 1963 ರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ…? ಆಗಿನ ಕಾಲವೇ ಚನ್ನಾಗಿತ್ತು.

1963 ರಲ್ಲಿ ಒಂದು ಲೀಟರ್ ಪೆಟ್ರೋಲ್ ಬಿಲ್ ಎಷ್ಟಿತ್ತು...?

Old Petrol Bill Viral: ಪ್ರಸ್ತುತ ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರು ಆರ್ಥಿಕ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಜನರು ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಕೂಡ ಹೆಚ್ಚು ಹಣವನ್ನು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಇನ್ನು ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದಂತೆ ಈಗಿನ ಕಾಲದ ಬಿಲ್ ಗು ಹಿಂದಿನ ಕಾಲದ ಬಿಲ್ ಗು ಹೋಲಿಕೆ ಮಾಡುವುದು ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಅನೇಕ ವಿಷಯಗಳು ವೈರಲ್ ಆಗುತ್ತಿದೆ. ಸದ್ಯ 1963 ಪೆಟ್ರೋಲ್ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾವೀಗ ಈ ಲೇಖನದಲ್ಲಿ 1963 ರ ಪೆಟ್ರೋಲ್ ಬಿಲ್ ಎಷ್ಟಿತ್ತು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

1 Liter Petrol Price In 1963
Image Credit: NDTV

1963 ರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ…?
ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹೋಟೆಲ್ ಬಿಲ್, ವಾಹನಗಳ ಬಿಲ್ ಬಾರಿ ವೈರಲ್ ಆಗಿದ್ದವು. ಹಿಂದಿನ ಕಾಲದ ಬಿಲ್ ಗು ಈಗಿನ ಕಾಲದ ಬಿಲ್ ಸಾಕಷ್ಟು ವ್ಯತ್ಯಾಸ ಇತ್ತು. ಸದ್ಯ ಇದೀಗ ಹೋಟೆಲ್ ಬಿಲ್ ನ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಪೆಟ್ರೋಲ್ ಬಿಲ್ ಫೋಟೋ ವೈರಲ್ ಆಗುತ್ತಿದೆ. ಪ್ರಸ್ತುತ ಬೆಲೆ ಏರಿಕೆ ಕುರಿತು ದೇಶದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ನಡುವೆಯೇ 1963 ರ ಪೆಟ್ರೋಲ್ ಬಿಲ್‌ ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯದ ಪೆಟ್ರೋಲ್, ಡೀಸೆಲ್ ಬೆಲೆ ಬಗ್ಗೆ ಹೇಳಬೇಕಾಗಿಲ್ಲ. ಇಂಧನ ಬೆಲೆ ಮಾತ್ರವಲ್ಲದೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆಯೂ ಗ್ರಾಹಕರ ಜೇಬು ಸುಡುತ್ತಿದೆ. ಖರೀದಿಸುವ ಮೊದಲು ನೂರು ಬಾರಿ ಯೋಚಿಸುವುದು ಯೋಗ್ಯವಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99 ರೂ. 84 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್‌ ಗೆ 85 ರೂ 93 ಪೈಸೆ ಇದೆ. ಈ ನಡುವೆ ಸುಮಾರು 50 ವರ್ಷಗಳ ಹಿಂದಿನ ಪೆಟ್ರೋಲ್ ಬಿಲ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಲ್ ನಲ್ಲಿ ಪೆಟ್ರೋಲ್ ಬೆಲೆ ನೋಡಿದವರು ಒಂದು ಕ್ಷಣ ಬೆಚ್ಚಿ ಬೀಳುತ್ತಿದ್ದಾರೆ.

1963 Petrol Bill Viral
Image Credit: Navbharattimes

ಆಗಿನ ಕಾಲವೇ ಚನ್ನಾಗಿತ್ತು
ವೈರಲ್ ಆಗಿರುವ ಬಿಲ್‌ ನಲ್ಲಿ ಏನಿದೆ ಎಂದು ಹೇಳುವುದಾದರೆ, ವ್ಯಕ್ತಿಯೊಬ್ಬ ಭಾರತ್ ಪೆಟ್ರೋಲ್ ಬಂಕ್‌ ನಿಂದ 5 ಲೀಟರ್ ಪೆಟ್ರೋಲ್ ಖರೀದಿಸಿದ್ದಾನೆ. 3 ರೂಪಾಯಿ 60 ಪೈಸೆ ಬಿಲ್ ಮಾಡಿದೆ. ಇದು ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲ ಐದು ಲೀಟರ್ ಪೆಟ್ರೋಲ್ ಬೆಲೆ. ಅಂದರೆ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 72 ಪೈಸೆ. ಒಂದು ರೂಪಾಯಿಯೂ ಇಲ್ಲ. ಆದರೆ ಈಗ ಪೆಟ್ರೋಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. 1 ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿದ್ದ ಕಾಲವೇ ಚೆನ್ನಾಗಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ 1 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ 1 ರೂ. ಚಾಕ್ಲೆಟ್ ಕೂಡ ಸಿಗುವುದಿಲ್ಲ ಎನ್ನಬಹುದು. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಳೆಯ ಬಿಲ್ ವೈರಲ್ ಆಗಿದ್ದು, ಇದೀಗ ಪೆಟ್ರೋಲ್ ಬಿಲ್ ಬಾರಿ ಸಿರ್ಚೆಗೆ ಕಾರಣವಾಗಿದೆ.

Join Nadunudi News WhatsApp Group

Old Petrol Bill Viral
Image Credit: Business-standard

Join Nadunudi News WhatsApp Group