Pratham: ಡ್ರೋನ್ ಪ್ರತಾಪ್ ವಿಷಯವಾಗಿ ಖಡಕ್ ಎಚ್ಚರಿಕೆ ನೀಡಿದ ಪ್ರಥಮ್, ಅಷ್ಟಕ್ಕೂ ಆಗಿದ್ದೇನು ಗೊತ್ತಾ…?

ಡ್ರೋನ್ ಪ್ರತಾಪ್ ಅಭಿಮಾನಿಗಳ ವಿರುದ್ಧ ಒಳ್ಳೆ ಹುಡುಗ ಪ್ರಥಮ್ ಆಕ್ರೋಶ, ಪ್ರತಾಪ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಪ್ರಥಮ್.

Olle Huduga Pratham About Prathap: ಸದ್ಯ ರಾಜ್ಯದಲ್ಲಿ BBK10 ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಂದು ಬಹುನಿರೀಕ್ಷಿತ BBK10 ರ ಗ್ರಾಂಡ್ ಫೈನಲ್ ನಡೆಯಲಿದ್ದು, ಇಂದು BBK10 ರ ಟೈಟಲ್ ಯಾರು ಪಡೆಯಲಿದ್ದಾರೆ ಎನ್ನುವುದು ಅನಾವರಣವಾಗಲಿದೆ.

ಇನ್ನು ಫಿನಾಲೆಯಲ್ಲಿ ವಿನ್ ಆಗಲು ವೋಟಿಂಗ್ ಮುಖ್ಯವಾಗಿದೆ.ಹೀಗಾಗಿ ಫೈನಲ್ ಹಂತಕ್ಕೆ ತಲುಪಿರುವ ಆರು ಸ್ಪರ್ದಿಗಳ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ಕಂಟೆಸ್ಟೆನ್ಸ್ ಗಳಿಗೆ ಭರ್ಜರಿಯಾಗಿಯೇ ಪ್ರಮೋಷನ್ ನಡೆಯುತ್ತಿದೆ. ಸದ್ಯ ಕನ್ನಡ ನಟರಾದ ಹಾಗೂ ಬಿಗ್ ಬಾಸ್ ಸೀಸನ್ 4 ರ ವಿನ್ನರ್ ಆದ Pratham ಅವರು ಬಿಗ್ ಬಾಸ್ ಕಂಟೆಸ್ಟನ್ಸ್ ಗಳ ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದಾರೆ.

olle huduga prathap about drone prathap
Image Credit: Original Source

ಡ್ರೋನ್ ಪ್ರತಾಪ್ ಅಭಿಮಾನಿಗಳ ವಿರುದ್ಧ ಒಳ್ಳೆ ಹುಡುಗ ಪ್ರಥಮ್ ಆಕ್ರೋಶ
ಸದ್ಯ ಎಲ್ಲೆಡೆ BBK10 ರ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ರೀತಿಯ ಪೋಸ್ಟ್ ಬಂದರು ಕೂಡ ಜನರು ಪೋಸ್ಟ್ ನ ಕಾಮೆಂಟ್ ನಲ್ಲಿ ಬಿಗ್ ಬಾಸ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಎನ್ನುವ ಕಾಮೆಂಟ್ ಸಾಕಷ್ಟು ಕಂಡುಬರುತ್ತಿದೆ. ಇದೆ ವಿಚಾರವಾಗಿ ನಟ ಪ್ರಥಮ್ ಡ್ರೋನ್ ಪ್ರತಾಪ್ ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದಾರೆ.

ಪ್ರತಾಪ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಪ್ರಥಮ್
ಲೀಲಾವತಿ ಅವರು ತೀರಿಕೊಂಡಾಗ ಅವರು ಸಾಧಕಿ ಎಂದು ಒಪ್ಪಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದೆ. ಅದ್ಭುತ ನಟಿಗೆ ಭಾವಪೂರ್ಣ ವಿದಾಯ. ನನ್ನ ಕೆರಿಯರ್ ನಲ್ಲಿ ಯಾರದೋ ಸಿನಿಮಾದಲ್ಲಿ ನಿಮ್ಮ ಹತ್ತಿರ ಸೇರಿದ್ದೇ ಅಂತ ಪೋಸ್ಟ್ ಮಾಡಿದ್ದರೆ ಡ್ರೋನ್ ಪ್ರತಾಪ್ ಅಭಿಮಾನಿಗಳು ಅದಕ್ಕೆ ಏನಂತ ಕಾಮೆಂಟ್ ಮಾಡಿದ್ದಾರೆ ಗೊತ್ತಾ..? ಲೀಲಾವತಿಯವರಿಗೆ ಸಂತಾಪ ಹಾಕಬೇಕು.

olle huduga pratham about drone prathap
Image Credit: Original Source

ಆದರೆ, ಅದನ್ನು ಬಿಟ್ಟು ‘ಗುರು ಇದನ್ನೆಲ್ಲಾ ಬಿಡು ಗುರು’ ಡ್ರೋನ್ ಪ್ರತಾಪ್ ಮುಗ್ದ ಗುರು, ಬಡವರ ಮಗ ಗೆಲ್ಲಬೇಕು ಎಂದು ಕಾಮೆಂಟ್ ಮಾಡಿರುವವರ ಬಗ್ಗೆ ಪ್ರಥಮ್ ಕಿಡಿಕಾರಿದ್ದಾರೆ. ಲೀಲಾವತಿಯವರ ಸಾವಿನ ನೋವನ್ನು ಅನುಭವಿಸಬೇಕಾಗಿದೆ. ಆಯಮ್ಮ ಅಪ್ರತಿಮ ಸಾಧಕಿ. ಸಾಯುವ ಮುನ್ನ ಅವರು ನಮ್ಮ ಕನ್ನಡಿಗರಿಗಾಗಿ ಆಸ್ಪತ್ರೆ ಕಟ್ಟಿದರು. ಬದುಕಿದರೆ ಅವರ ರೀತಿ ಬದುಕಬೇಕು.

Join Nadunudi News WhatsApp Group

ಅವರ ಸಾಧನೆಯ ಒಂದು ಸಣ್ಣ ಕಣಕ್ಕೂ ನಾವು ಸಮಾನರಲ್ಲ. ಆದರೆ ಬಿಗ್ ಬಾಸ್ ಕಂಟೆಸ್ಟೆಂಟ್ ನ ಅಭಿಮಾನಿಗಳು ಈರೀತಿ ಪ್ರಮೋಷನ್ ಮಾಡಿರಿವುದು ಸರಿಯೇ..? ಎಂದು ಪ್ರತಾಪ್ ಅಭಿಮಾನಿಗಳ ವಿರುದ್ಧ ಪ್ರಥಮ್ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಫೇಕ್ ಪ್ರಮೋಷನ್ ಮಾಡುವವರಿಗೆ ನಾನು ನೇರವಾಗಿ ಎಚ್ಚರಿಕೆ ನೀಡುತ್ತೇನೆ, ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಪ್ರಥಮ್ ಫೇಕ್ ಪ್ರಮೋಷನ್ ಮಾಡುವರಿಗೆ ಎಚ್ಚರಿಕೆ ನೀಡಿದ್ದಾರೆ.

Join Nadunudi News WhatsApp Group