One Nation One Election: ಒಂದು ದೇಶ ಒಂದು ಚುನಾವಣೆ ಜಾರಿಗೆ ಬಂದರೆ ಸರ್ಕಾರಕ್ಕೆ ಆಗುವ ಖರ್ಚು ಎಷ್ಟು…? 15 ವರ್ಷಕ್ಕೊಂದು ಚುನಾವಣೆ.

ಒಂದು ದೇಶ ಒಂದು ಚುನಾವಣೆ ಜಾರಿಗೆ ಬಂದರೆ ಸರ್ಕಾರಕ್ಕೆ ಆಗುವ ಖರ್ಚು ಎಷ್ಟು...? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

One Nation, One Election In India: ರಾಜ್ಯ ಹಾಗು ಕೇಂದ್ರ ಸರಕಾರದ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ವಿಭಿನ್ನತೆಗಳಿವೆ. ಕೇಂದ್ರದ ಮೋದಿ ಸರ್ಕಾರ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸುವ ಬಗ್ಗೆ ಈಗಾಗಲೇ ಚಿಂತನೆ ನಡೆಸಿದೆ. ಒಂದೇ ರಾಷ್ಟ್ರ ಒಂದೇ ಚುನಾವಣೆ (One Nation One Election) ಮಾಡುವ ನಿಟ್ಟಿನಲ್ಲಿ ಈಗಲೂ ಕೂಡ ಚರ್ಚೆ ನಡೆಯುತ್ತಲೇ ಇದೆ.

One Nation, One Election
Image Credit: Keralakaumudi

ಒಂದು ರಾಷ್ಟ್ರ, ಒಂದು ಚುನಾವಣೆ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯ ದೊಡ್ಡ ಪ್ರತಿಪಾದಕರಾಗಿದ್ದಾರೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯು 2014ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯ ಭಾಗವಾಗಿತ್ತು. 2016 ರಲ್ಲಿ ನೀತಿ ಆಯೋಗವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯ ಅನುಷ್ಠಾನಕ್ಕಾಗಿ ಕಾರ್ಯಾಗಾರವನ್ನು ಸಿದ್ಧಪಡಿಸಿತು.

ಎರಡು ವರ್ಷಗಳ ನಂತರ ಅಂದರೆ 2018 ರಲ್ಲಿ ಕಾನೂನು ಆಯೋಗವು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಐದು ಸಾಂವಿಧಾನಿಕ ಶಿಫಾರಸುಗಳ ಅಗತ್ಯವಿದೆ ಎಂದು ಹೇಳಿತು. ಬಹುನಿರೀಕ್ಷಿತ ಮಸೂದೆಯನ್ನು ಸರ್ಕಾರ ಮಂಡಿಸುವ ಸಾಧ್ಯತೆಗಳ ಕುರಿತು ಈಗಾಗಲೇ ಹಲವು ಚರ್ಚೆಗಳು ನಡೆಯುತ್ತಿವೆ. ಏಕಕಾಲದಲ್ಲಿ ಚುನಾವಣೆ ನಡೆಸುವ ಪರಿಕಲ್ಪನೆಯ ಸಾಧಕ-ಬಾಧಕಗಳ ಕುರಿತಾಗಿಯೂ ಮಾತುಕತೆಗಳು ನಡೆಯುತ್ತಿವೆ. ಇದೀಗ ನಾವು ಒಂದು ದೇಶ ಒಂದು ಚುನಾವಣೆ ಜಾರಿಗೆ ಬಂದರೆ ಸರ್ಕಾರಕ್ಕೆ ಆಗುವ ಖರ್ಚು ಎಷ್ಟು…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

One Nation, One Election Latest News
Image Credit: Avaaz24

ಒಂದು ದೇಶ ಒಂದು ಚುನಾವಣೆ ಜಾರಿಗೆ ಬಂದರೆ ಸರ್ಕಾರಕ್ಕೆ ಆಗುವ ಖರ್ಚು ಎಷ್ಟು…?
ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಒಂದು ದೇಶ, ಒಂದು ಚುನಾವಣೆ ನಡೆದರೆ ಇವಿಎಂ ವೆಚ್ಚದ ಬಗ್ಗೆ ಮಾಹಿತಿ ನೀಡಿದೆ. ಇವಿಎಂ ಅವಧಿ 15 ವರ್ಷಗಳು. 15 ವರ್ಷಗಳಲ್ಲಿ ಗರಿಷ್ಠ ಮೂರು ಬಾರಿ ಮಾತ್ರ ಬಳಸಬಹುದು. ಒಂದು ದೇಶದಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗಲೂ ಇವಿಎಂ ಯಂತ್ರಗಳನ್ನು ಹೊಸದಾಗಿ ಬಳಸಬೇಕಾಗುತ್ತದೆ.

ಇದರಿಂದ ಪ್ರತಿ ಬಾರಿ ಚುನಾವಣೆ ನಡೆದಾಗ ಆಯೋಗಕ್ಕೆ 10 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮುಂಬರುವ ಲೋಕಸಭೆ ಚುನಾವಣೆಗೆ ದೇಶಾದ್ಯಂತ 11.8 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಈಗಿನಂತೆ ಪ್ರತಿ ವರ್ಷವೂ ವಿಧಾನಸಭೆ ಚುನಾವಣೆ ನಡೆಯುವುದರಿಂದ ಇವಿಎಂ ಯಂತ್ರಗಳನ್ನು ಪದೇ ಪದೇ ಬಳಸಿ ಸಂಪೂರ್ಣ ಬಳಕೆ ಮಾಡಿಕೊಳ್ಳಬಹುದು.

Join Nadunudi News WhatsApp Group

ಪ್ರತಿ ಇವಿಎಂ ಯಂತ್ರಕ್ಕೆ ವVVPAT, ಬಿಯು ಅಥವಾ ಸಿಯು ಸಾಫ್ಟ್‌ವೇರ್ ಅಳವಡಿಸಿರಬೇಕು. ಇದಕ್ಕೆ VVPAT ಹೊಂದಿರುವ 36,62,200 EVMಗಳು, BU ಇರುವ 46,75,100 EVMಗಳು ಮತ್ತು CU ನ 33,63,300 EVM ಯಂತ್ರಗಳು ಬೇಕಾಗುತ್ತವೆ. 2023 ರ ಚುನಾವಣೆಯಲ್ಲಿ EVM ಗಳಿಗೆ 7900 ಕೋಟಿ, BU ಗೆ 9800 ಕೋಟಿ ಮತ್ತು CU ಗೆ 16,000 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

Join Nadunudi News WhatsApp Group