NHAI Rule: Fastag ನಿಯಮದಲ್ಲಿ ಮತ್ತೆ ಬದಲಾವಣೆ, ಫೆಬ್ರವರಿ ಒಂದರಿಂದ ಎಲ್ಲಾ ವಾಹನಗಳಿಗೆ ಒಂದೇ ರೂಲ್ಸ್

ಪಾಸ್ಟ್ ಟ್ಯಾಗ್ ಗೆ KYC ಪೂರ್ಣಗೊಳಿಸಲು ಜನವರಿ 31 2024 ಕೊನೆಯ ದಿನಾಂಕವಾಗಿದೆ.

NHAI New Rule On FASTag: ದೇಶದಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿದೆ. ಸದ್ಯ ಟೋಲ್ ಪ್ಲಾಜಾಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿ ಟೋಲ್ ಅನ್ನು ಸಂಗ್ರಹಣೆ ಮಾಡಲಾಗುತ್ತಿದೆ.

ಮುಖ್ಯವಾಗಿ ಟೋಲ್ ಸಂಗ್ರಹಣೆಗಾಗಿ FASTag ಅನ್ನು ಬಳಸಲಾಗುತ್ತಿದೆ. ಈ ಫಾಸ್ಟ್ ಟ್ಯಾಗ್ ನ ಮೂಲಕ ಅತ್ಯಂತ ಸರಳ ವಿಧಾನದ ಮೂಲಕ ಟೋಲ್ ಸಂಗ್ರಹಣೆ ನಡೆಸಲಾಗುತ್ತಿದೆ. ಸದ್ಯ NHAI ನಿಂದ ಫಾಸ್ಟ್ ಟ್ಯಾಗ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದೆ.

NHAI New Rule On FASTag
Image Credit: Paytm

ಇನ್ನುಮುಂದೆ ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್
ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ನೀಡಲು ವಿವಿಧ ಕ್ರಮ ಕೈಗೊಳ್ಳಲಾಗುತ್ತದೆ. ಟೋಲ್ ಸಂಗ್ರಹಣೆಯಲ್ಲಿ ವಾಹನ ಸವಾರರ ಸಮಯ ವ್ಯರ್ಥವಾಗಬಾರದು ಎನ್ನುವ ಕಾರಣದಿಂದ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಟೋಲ್ ಸಂಗ್ರಹಣೆ ಮಾಡಲಾಗುತ್ತಿದೆ. ಸದ್ಯ NHAI ನಿಂದ “ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್” ಎನ್ನುವ ಹೊಸ ನಿಯಮ ಜಾರಿಯಾಗಿದೆ. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣಾ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು NHAI ಈ ನಿರ್ಧಾರ ಕೈಗೊಂಡಿದೆ.

KYC ಮಾಡಲು ಜನವರಿ 31 ಕೊನೆಯ ದಿನಾಂಕ
ಪಾಸ್ಟ್ ಟ್ಯಾಗ್ ಗೆ KYC ಪೂರ್ಣಗೊಳಿಸಲು ಜನವರಿ 31 2024 ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ KYC ಮಾಡುವುದು ಕಡ್ಡಾಯವಾಗಿದೆ. ನಿಗದಿತ ದಿನಾಂಕದೊಳಗೆ KYC ಪೂರ್ಣಗೊಳಿಸದ ಫಾಸ್ಟ್ ಟ್ಯಾಗ್ ಅನ್ನು ಜನವರಿ 31 ರ ನಂತರ ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಸೂಚನೆ ನೀಡಿದೆ. ಫಾಸ್ಟ್ ಟ್ಯಾಗ್ ಬಳಕೆದಾರರು ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಅನ್ನು ಅನುಸರಿಸಬೇಕು ಮತ್ತು ಈ ಹಿಂದೆ ನೀಡಲಾದ ಎಲ್ಲ ಫಾಸ್ಟ್ ಟ್ಯಾಗ್ ಗಳನ್ನೂ ಆಯಾ ಬ್ಯಾಂಕ್ ಗಳ ಮೂಲಕ ತ್ಯಜಿಸಬೇಕು.

FASTag Latest Update
Image Credit: inc42

ಟೋಲ್ ಸಂಗ್ರಹಣೆಗೆ ಹೊಸ ವ್ಯವಸ್ಥೆ ಜಾರಿ
ಟೋಲ್ ಸಂಗ್ರಹಕ್ಕಾಗಿ ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ANPR (Automated Number Plate Reader) ಕ್ಯಾಮರಾಗಳು ಎನ್ನುವ ಹೊಸ GPS ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇನ್ನು ಎಏನ್ ಪಿಆರ್ ವ್ಯವಸ್ಥೆಯು ವಾಹನದ ಪರವಾನಗಿ ಫಲಕವನ್ನು ಓದುವ ಮೂಲಕ ತೆರಿಗೆಯನ್ನು ವಾಹನದ ಮಾಲಿಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುತ್ತದೆ.

Join Nadunudi News WhatsApp Group

ಪ್ರವೇಶ ಮತ್ತು ನಿರ್ಗಮನದಲ್ಲಿ ಎಏನ್ ಪಿಆರ್ ಕ್ಯಾಮರಗಳನ್ನು ಇರಿಸಲಾಗುತ್ತದೆ. ಇನ್ನು ಹೊಸ ವಾಹನದ ನಂಬರ್ ಪ್ಲೇಟ್ ಗಳಲ್ಲಿ ವಾಹನ ಸಂಖ್ಯೆಯ ಜೊತೆಗೆ GPS ಗಳನ್ನು ಅಳವಡಿಸಲಾಗುತ್ತದೆ. ಹೊಸ ವಾಹನಗಳಲ್ಲಿ GPS Number Plate ಅಳವಡಿಸುವಂತೆ ಕೇಂದ್ರ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದೆ. ಸದ್ಯದಲ್ಲೇ ಟೋಲ್ ಸಂಗ್ರಹಣೆಗೆ GPS ಆಧಾರಿತ ತಂತ್ರಜ್ಞಾನ ಆರಂಭವಾಗಲಿದೆ ಎಂದು ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group