OnePlus New: ಭಾರತದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ ಈ OnePlus ಮೊಬೈಲ್, ಅಗ್ಗದ ಬೆಲೆ ಮತ್ತು ಆಕರ್ಷಕ ಫೀಚರ್.

ಭಾರತದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ ಈ OnePlus Smartphone.

OnePlus 12R Smartphone Feature And Discount: ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳು ಖರೀದಿಗೆ ಲಭ್ಯವಿದೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ OnePlus ಕಂಪನಿಯು ಇದೀಗ ನೂತನವಾಗಿ ವೈಶಿಷ್ಟ್ಯ ವಿನ್ಯಾಸ ಹಾಗೂ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಎರಡು ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಈ ಎರಡು ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ಮೂಲಕ ದಾಖಲೆಯ ಮಟ್ಟದಲ್ಲಿ ಸೆಲ್ ಆಗುತ್ತಿದೆ.

OnePlus 12R Smartphone Price And Feature
Image Credit: Moneycontrol

ಭಾರತದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ ಈ OnePlus ಮೊಬೈಲ್
ಮಾರುಕಟ್ಟೆಯಲ್ಲಿ ಕಂಪನಿಯು ನೂತನವಾಗಿ OnePlus 12 ಮತ್ತು OnePlus 12R ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಇನ್ನು OnePlus 12R ಸ್ಮಾರ್ಟ್ ಫೋನ್ ಫೆಬ್ರವರಿ 6 ರಿಂದ ಗ್ರಾಹಕರ ಕೈ ತಲುಪಲಿದೆ. OnePlus 12ಆರ್ ಮೂಲ ಮಾದರಿ ರೂ. 39,999 ರಿಂದ ಪ್ರಾರಂಭವಾಗುತ್ತದೆ. ಇದು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯಲ್ಲಿದೆ. 16GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 45,999 ರೂ. ಆಗಿದೆ. ಭಾರತದಲ್ಲಿ ಫೋನ್‌ ನ ಮಾರಾಟವು ಫೆಬ್ರವರಿ 6 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿದೆ.

ಬಾರಿ ರಿಯಾಯಿತಿಯೊಂದಿಗೆ ಈ ಸ್ಮಾರ್ಟ್ಫೋನ್ ಅನ್ನು ಖರೀದಿಸಬಹುದು
ಇನ್ನು ICICI ಕ್ರೆಡಿಟ್ ಕಾರ್ಡ್ ಮತ್ತು OnePlus ಹೊಂದಿರುವವರಿಗೆ ರೂ. 1,000 ಬ್ಯಾಂಕ್ ರಿಯಾಯಿತಿ ಪಡೆಯಬಹುದು. OnePlus 12ಆರ್ ಖರೀದಿದಾರರು ಆರು ತಿಂಗಳ ಗೂಗಲ್ ಒನ್ ಚಂದಾದಾರಿಕೆಯನ್ನು ಮತ್ತು ಮೂರು ತಿಂಗಳ ಯೂಟ್ಯೂಬ್ ಪ್ರೀಮಿಯಂ ಅನ್ನು ಪಡೆಯುತ್ತಾರೆ. ಮಾರಾಟದ ಭಾಗವಾಗಿ, ಆಯಕ್ಸಿಂಡೆಟ್ ಪ್ರೊಟೆಕ್ಷನ್ ಒನ್ ಪ್ಲಸ್ 12 ಆರ್ ಬಳಕೆದಾರರಿಗೆ ಶೇಕಡಾ 50ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಅಧಿಕೃತ ವೆಬ್‌ ಸೈಟ್‌ ಗೆ ಬಂದ ಮೊದಲ 24 ಗಂಟೆಗಳ ಒಳಗೆ ಆರ್ಡರ್ ಮಾಡಿದ ಬಳಕೆದಾರರು 4,999 ರೂ. ಮೌಲ್ಯದ ಉಚಿತ ಒನ್ ಪ್ಲಸ್ ಬಡ್ಸ್ Z2 ಅನ್ನು ಪಡೆಯುವ ಅವಕಾಶವಿದೆ.

OnePlus 12R Smartphone Discount
Image Credit: Gizbot

ಅಗ್ಗದ ಬೆಲೆ ಮತ್ತು ಆಕರ್ಷಕ ಫೀಚರ್
OnePlus 12R ಸ್ಮಾರ್ಟ್‌ ಫೋನ್ 6.78-ಇಂಚಿನ LTPO 4.0 ಪ್ಯಾನೆಲ್ AMOLED 120Hz ಡಿಸ್‌ ಪ್ಲೇ ಜೊತೆಗೆ 4500 nits ಪೀಕ್ ಬ್ರೈಟ್‌ ನೆಸ್ ಮತ್ತು ಗೊರಿಲ್ಲಾ ಗ್ಲಾಸ್ 2 ರಕ್ಷಣೆಯನ್ನು ಹೊಂದಿದೆ.ಹೊಸ OnePlus 12R Qualcomm Snapdragon 8 Gen 2 ಚಿಪ್‌ ಸೆಟ್‌ ನಿಂದ ಚಾಲಿತವಾಗಿದೆ. ಈ ಸ್ಮಾರ್ಟ್ ಫೋನ್ ಸೋನಿ IMX890 50MP ಪ್ರಾಥಮಿಕ ಸಂವೇದಕ, 112-ಡಿಗ್ರಿ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇನ್ನು ಉತ್ತಮ ಗುಣಮಟ್ಟದ ಸೆಲ್ಫಿಗಾಗಿ OnePlus 12R 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group