OnePlus New: ಹೊಸ ಮೊಬೈಲ್ ಖರೀದಿ ಮಾಡುವವರಿಗೆ OnePlus ಆಕರ್ಷಕ ಮೊಬೈಲ್ ಲಾಂಚ್, 5000 mAh ಬ್ಯಾಟರಿ

ಇಂದಿನಿಂದ ಗ್ರಾಹಕರ ಕೈ ಸೇರಲಿದೆ ಈ ಜನಪ್ರಿಯ ಸ್ಮಾರ್ಟ್ ಫೋನ್.

OnePlus 12R Smartphone: ಸದ್ಯ ಮಾರುಕಟ್ಟೆಯಲ್ಲಿ OnePlus ಬ್ರಾಂಡ್ ನ ಸ್ಮಾರ್ಟ್ ಫೋನ್ ಗಳಿಗೆ ಬಾರಿ ಬೇಡಿಕೆ ಇದೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ OnePlus ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸುತ್ತಿದ್ದಾರೆ. ಇನ್ನು OnePlus ಸ್ಮಾರ್ಟ್ಫೋನ್ ಗಳು ವಿಶೇಷ ಕ್ಯಾಮರಾ ಫೀಚರ್ ಗಳ ಮೂಲಕ ಜನರನ್ನು ಆಕರ್ಷಿಸುತ್ತದೆ. ಸದ್ಯ ಮಾರುಕಟ್ಟೆಯಲ್ಲಿ OnePlus ಕಂಪನಿಯು ಈ ನೂತನ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

OnePlus 12R Smartphone Price
Image Credit: The Economic Times

ಇಂದಿನಿಂದ ಗ್ರಾಹಕರ ಕೈ ಸೇರಲಿದೆ ಈ ಜನಪ್ರಿಯ ಸ್ಮಾರ್ಟ್ ಫೋನ್
OnePlus 12R ಸ್ಮಾರ್ಟ್‌ ಫೋನ್ ಫೆಬ್ರವರಿ 13 ರಂದು OnePlus ಇಂಡಿಯಾ ವೆಬ್‌ ಸೈಟ್, ಅಮೆಜಾನ್ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟಕ್ಕೆ ಲಾಭ್ಯವಾಗಲಿದೆ. ಅಮೆಜಾನ್ ಈಗಾಗಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿದೆ. OnePlus 12R ಮೂಲ ಮಾದರಿ ರೂ. 39,999 ರಿಂದ ಪ್ರಾರಂಭವಾಗುತ್ತದೆ. ಇದು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯಲ್ಲಿದೆ. 16GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 45,999 ರೂ. ಆಗಿದೆ.

OnePlus 12R smartphone ಫೀಚರ್
OnePlus 12R ಸ್ಮಾರ್ಟ್‌ ಫೋನ್ 6.78-ಇಂಚಿನ LTPO 4.0 ಪ್ಯಾನೆಲ್ AMOLED 120Hz ಡಿಸ್‌ ಪ್ಲೇ ಜೊತೆಗೆ 4500 nits ಪೀಕ್ ಬ್ರೈಟ್‌ ನೆಸ್ ಮತ್ತು ಗೊರಿಲ್ಲಾ ಗ್ಲಾಸ್ 2 ರಕ್ಷಣೆಯನ್ನು ಹೊಂದಿದೆ. ಹೊಸ OnePlus 12R Qualcomm Snapdragon 8 Gen 2 ಚಿಪ್‌ ಸೆಟ್‌ ನಿಂದ ಚಾಲಿತವಾಗಿದೆ. ಈ ಸ್ಮಾರ್ಟ್ ಫೋನ್ ಸೋನಿ IMX890 50MP ಪ್ರಾಥಮಿಕ ಸಂವೇದಕ, 112-ಡಿಗ್ರಿ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ.

OnePlus 12R smartphone Feature
Image Credit: Times Of India

ಇನ್ನು ಉತ್ತಮ ಗುಣಮಟ್ಟದ ಸೆಲ್ಫಿಗಾಗಿ OnePlus 12R 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. OnePlus ಕಂಪನಿಯ ಈ ಹೊಸ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಸೌಲಭ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಇದು 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇತರ ಸಂಪರ್ಕ ವೈಶಿಷ್ಟ್ಯಗಳಲ್ಲಿ ಬ್ಲೂಟೂತ್ 5.3, 5G ಬೆಂಬಲ, Wi-Fi 6E, ಬ್ಲೂಟೂತ್ 5.3, NFC, USB-C 3.2 Gen 2, GPS ಸೇರಿವೆ.

Join Nadunudi News WhatsApp Group

Join Nadunudi News WhatsApp Group