ಮಾರುಕಟ್ಟೆಗೆ ಬಂತು ಅತೀ ಕಡಿಮೆ ಬೆಲೆಯ OnePlus Nord 2T 5G ಮೊಬೈಲ್ ಫೋನ್, ಬೆಲೆ ಎಷ್ಟು ಕಡಿಮೆ ನೋಡಿ.

ಮೊಬೈಲ್ ಅಂದರೆ ಯಾರಿಗೆ ಇಷ್ಟವಲ್ಲ ಹೇಳಿ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಮೊಬೈಲ್ ಬಳಕೆ ಮಾಡುತ್ತಿದ್ದು ಮೊಬೈಲ್ ಫೋನ್ ಬಳಕೆ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂದು ಹೇಳಬಹುದು. ಇನ್ನು ಹಲವು ಕಂಪನಿಗಳ ಹಲವು ವೈಶಿಷ್ಟ್ಯತೆಯನ್ನ ಹೊಂದಿರುವ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಜನರು ತಮಗಿಷ್ಟವಾದ ಮೊಬೈಲ್ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಐಫೋನ್ ಬಿಟ್ಟರೆ ಬಹಳ ಹೆಸರುವಾಸಿರುವ ಮೊಬೈಲ್ ಫೋನ್ ಅಂದರೆ ಅದು OnePlus ಮೊಬೈಲ್ ಫೋನ್ ಎಂದು ಹೇಳಬಹುದು.

ಆರಂಭದಲ್ಲಿ ಬಹಳ ಹೆಚ್ಚಿನ ಬೆಲೆಯನ್ನOnePlus ಮೊಬೈಲ್ ಫೋನ್ ಗಳು ಈಗ ಬಹಳ ಕಡಿಮೆ ಬೆಲೆ ಸಿಗುತ್ತಿದ್ದು ಜನರು ಹೆಚ್ಚು OnePlus ಮೊಬೈಲ್ ಕೊಳ್ಳುತ್ತಿರುವುದು ಇತ್ತೀಚಿಗೆ ವರದಿಯಾಗುತ್ತಿದೆ. ಇನ್ನು OnePlus ಈಗಾಗಲೇ ಹಲವು ವೈಶಿಷ್ಟ್ಯತೆಯನ್ನ ಹೊಂದಿರುವ ಮೊಬೈಲ್ ಫೋನ್ ಗಳನ್ನ ಮಾರುಕಟ್ಟೆಗೆ ಬಿಟ್ಟಿದ್ದು ಈಗ ಇನ್ನೊಂದು ಹೊಸ ಮೊಬೈಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡಲು ತಯಾರಿಯನ್ನ ಮಾಡಿದೆ. ಹೌದು OnePlus ಭಾರತದ ಮಾರುಕಟ್ಟೆ ಹಲವು ವಿಶೇಷತೆಯನ್ನ ಹೊಂದಿರುವ ಹೊಸ ಮಾದರಿಯನ್ನ ಮೊಬೈಲ್ ಫೋನ್ ಅನ್ನು ಬಹಳ ಕಡಿಮೆ ಬಿಡುಗಡೆ ಮಾಡುತ್ತಿದ್ದು ಈ ಮೊಬೈಲ್ ಭಾರತದ ಮೊಬೈಲ್ ಲೋಕದಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಲಿದೆ ಎಂದು ಹಳಲಾಗುತ್ತಿದೆ.

OnePlus Nord 2T 5G

ಹಾಗಾದರೆ ಆ ಮೊಬೈಲ್ ಫೋನ್ ಯಾವುದು ಮತ್ತು ಅದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ವಿಶ್ವದಲ್ಲಿ ಬಹಳ ಒಳ್ಳೆಯ ಹೆಸರನ್ನ ಮಾಡಿರುವ OnePlus ಈಗ ಭಾರತದ ಮಾರುಕಟ್ಟೆಗೆ OnePlus Nord 2T 5G ಮೊಬೈಲ್ ಫೋನ್ ಬಿಡುಗಡೆ ಮಾಡಲು ತಯಾರಿಯನ್ನ ಮಾಡಿಕೊಂಡಿದೆ. ಜುಲೈ ತಿಂಗಳಲ್ಲಿ OnePlus Nord 2T 5G ಎಲ್ಲಾ ಮೊಬೈಲ್ ಶಾಪ್ ಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿಕೊಂಡಿದೆ. ಬಹಳ ಉತ್ತಮವಾದ ವೈಶಿಷ್ಟ್ಯತೆಯನ್ನ ಈ ಮೊಬೈಲ್ ಫೋನ್ ಹೊಂದಿದ್ದು ಈ ಫೋನ್ ಜನರ ಮನಸ್ಸನ್ನ ಸೆಳೆಯಲಿದೆ ಎಂದು ಹೇಳಿದರೆ ತಪ್ಪಾಗಲ್ಲ. 50 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಈ ಮೊಬೈಲ್ ನಲ್ಲಿ ಇದ್ದು ಐಫೋನ್ ರೀತಿಯಲ್ಲಿ ಈ OnePlus Nord 2T 5G ನ ಕ್ಯಾಮೆರಾ ಬಳಸಬಹುದಾಗಿದೆ.

ಇನ್ನು 6.43 ಇಂಚಿನ HD+ AMOLED ಡಿಸ್‌ಪ್ಲೇಯನ್ನು OnePlus Nord 2T 5G ಹೊಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಅದರ ಜೊತೆಗೆ OnePlus Nord 2T 5G 32 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರವನ್ನ ಹೊಂದಿದೆ. OnePlus Nord 2T 5G ಎರಡು ವಿಧಗಳಾಗಿ ಮಾರುಕಟ್ಟೆಗೆ ಬಂದಿದ್ದು 128 GB ಮತ್ತು 256 GB ಗ ಮೊಬೈಲ್ ಗಳು ತಲಾ 4,500mAh ಮತ್ತು 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, 128 GB ಹೊಂದಿರುವ OnePlus Nord 2T 5G ಮೊಬೈಲ್ ಫೋನಿನ ಬೆಲೆ 28,999 ರೂಪಾಯಿಯಾದರೆ 256 GB ಹೊಂದಿರುವ ಮೊಬೈಲ್ ಫೋನಿನ ಬೆಲೆ 31,999 ರೂಪಾಯಿ ಆಗಿದೆ. ವಿದೇಶದಲ್ಲಿ ಈ ಫೋನ್ ಈಗಾಗಲೇ ಬಿಡುಗಡೆ ಆಗಿದ್ದು ಜನರು ಈ ಫೋನಿಗೆ ಫುಲ್ ಫಿದಾ ಆಗಿದ್ದಾರೆ.

Join Nadunudi News WhatsApp Group

OnePlus Nord 2T 5G

Join Nadunudi News WhatsApp Group