OnePlus: OnePlus ಮೊಬೈಲ್ ಬಳಸುವವರಿಗೆ ಗುಡ್ ನ್ಯೂಸ್, ಇನ್ಮುಂದೆ ಕೇಬಲ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡಿ.

ಇನ್ಮುಂದೆ ಚಾರ್ಜರ್ ಕೇಬಲ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದು

OnePlus Wireless Charger: ಸದ್ಯ ಭಾರತೀಯ ಟೆಕ್ ವಲಯದಲ್ಲಿ OnePlus ಕಂಪನಿಯು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಕ್ರೇಜ್ ಹುಟ್ಟಿಸಿಕೊಂಡಿವೆ. ಸದ್ಯ ಮಾರುಕಟ್ಟೆಯಲ್ಲಿ OnePlus ಸ್ಮಾರ್ಟ್ ಫೋನ್ ಹೆಚ್ಚಿನ ಮಾರಾಟ ಕಾಣುತ್ತಿದೆ. ಇದೀಗ OnePlus ಕಂಪನಿಯು ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ನಿರ್ಧರಿಸಿದೆ. ಈ ಮೂಲಕ OnePlus ಮೊಬೈಲ್ ಬಳಸುವವರಿಗೆ ಸಿಹಿ ಸುದ್ದಿ ನೀಡಿದೆ.

OnePlus Wireless Charger
Image Credit: Theverge

OnePlus ಮೊಬೈಲ್ ಬಳಸುವವರಿಗೆ ಗುಡ್ ನ್ಯೂಸ್
OnePlus 12 ಮತ್ತು OnePlus 12R ಸ್ಮಾರ್ಟ್‌ ಫೋನ್‌ ಗಳನ್ನು ಬಡ್ಸ್ 3 TWS ನೊಂದಿಗೆ ಪ್ರಕಟಿಸಿದೆ. ಪ್ರಮುಖ OnePlus 12 ರ ಕವರ್‌ ಗಳು ಸ್ಯಾಂಡ್‌ ಸ್ಟೋನ್, ಅರಾಮಿಡ್ ಫೈಬರ್ ಮತ್ತು ವಾಲ್‌ ನಟ್ ವಿನ್ಯಾಸವನ್ನು ಒಳಗೊಂಡಿರುವ ಮೂರು ವಿಭಿನ್ನ ವಿನ್ಯಾಸಗಳಲ್ಲಿ ಲಭ್ಯವಿದೆ. ಸ್ಯಾಂಡ್‌ ಸ್ಟೋನ್ ಕ್ಲಾಸಿಕ್ ಜೆಟ್-ಕಪ್ಪು ವಿನ್ಯಾಸವನ್ನು ಹೊಂದಿದೆ. ಅರಾಮಿಡ್ ಫೈಬರ್, ಕಾರ್ಬನ್-ಫೈಬರ್ ತರಹದ ವಿನ್ಯಾಸವನ್ನು ಹೊಂದಿದೆ.

ಈ ಎಲ್ಲಾ ಹಿಂಭಾಗದ ಕವರ್‌ ಗಳನ್ನು ಎತ್ತರದ ಕ್ಯಾಮೆರಾ ಮಾಡ್ಯೂಲ್‌ ನೊಂದಿಗೆ ಗರಿಷ್ಠ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ.ಸ್ಯಾಂಡ್‌ ಸ್ಟೋನ್ ಕೇಸ್ ರೂ. 999 ರಿಂದ ಪ್ರಾರಂಭವಾಗುತ್ತದೆ ಆದರೆ ಅರಾಮಿಡ್ ಫೈಬರ್ ಮತ್ತು ವಾಲ್‌ ನಟ್ ಟೆಕ್ಸ್ಚರ್ಡ್ ಬೆಲೆಗಳು ಕ್ರಮವಾಗಿ ರೂ. 1,299 ಮತ್ತು ರೂ. 1,999 ಆಗಿದೆ. OnePlus 12R ನ ಕವರ್ ಸಿಲ್ವರ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದು. ಸ್ಮಾರ್ಟ್‌ ಫೋನ್‌ ನ ಎರಡೂ ಕೇಸ್‌ ಗಳ ಬೆಲೆ ರೂ 799. ಆಗಿದೆ.

OnePlus Wireless Charger Price
Image Credit: Androidcentral

ಇನ್ಮುಂದೆ ಕೇಬಲ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡಿ
OnePlus AIRVOOC 50W ವೈರ್‌ ಲೆಸ್ ಚಾರ್ಜರ್ ಅನ್ನು ಸಹ ಘೋಷಿಸಿದೆ. ಇನ್ಮುಂದೆ ಚಾರ್ಜರ್ ಕೇಬಲ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದು. ಇನ್ನು OnePlus AIRVOOC 50W ವೈರ್‌ಲೆಸ್ ಚಾರ್ಜರ್ 50W ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ಬೆಂಬಲಿಸುತ್ತದೆ.

ಈ ಚಾರ್ಜರ್ ಫೋನ್ ಅನ್ನು 23 ನಿಮಿಷಗಳಲ್ಲಿ 50 ಪ್ರತಿಶತ ಮತ್ತು 55 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಚಾರ್ಜ್ ಮಾಡಿಕೊಳ್ಳಬಹುದು. ಬಳಕೆದಾರರು ಕೇಸ್ ಅನ್ನು ತೆಗೆದುಹಾಕದೆಯೇ ತಮ್ಮ ಸ್ಮಾರ್ಟ್‌ ಫೋನ್ ಅನ್ನು ಚಾರ್ಜ್ ಮಾಡಬಹುದು. OnePlus AIRVOOC 50W ವೈರ್‌ ಲೆಸ್ ಚಾರ್ಜರ್ ಬೆಲೆ ರೂ. 5,499 ಆಗಿದೆ. ನೀವು ಈ ವೈರ್ ಲೆಸ್ ಚಾರ್ಜರ್ ಅನ್ನು Oneplus ನ ಅಧಿಕೃತ ವೆಬ್ ಸೈಟ್ ನಲ್ಲಿ ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group