Onion Price: ಜನರ ಕಣ್ಣಲ್ಲಿ ನೀರು ತರುಸುತ್ತಿದೆ ಈರುಳ್ಳಿ ದರ, ಈರುಳ್ಳಿ ಬೆಲೆಯ ಏರಿಕೆಗೆ ಕಾರಣವೇನು…?

ದೇಶದಲ್ಲಿ ಮತ್ತೆ ಏರಿಕೆಯಾದ ಈರುಳ್ಳಿ ದರ, ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ

Onion Price Hike Again In india: ಪ್ರಸ್ತುತ ದಿನ ನಿತ್ಯ ಬಳಕೆಯ ವಸ್ತುಗಳಿಂದ ಹಿಡಿದು ನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ ಎನ್ನಬಹುದು. ಸದ್ಯ ದೇಶದಲ್ಲಿ ಈರುಳ್ಳಿ ಬೆಲೆ ಜನರ ನಿದ್ದೆಯನ್ನು ಕೆಡಿಸುತ್ತಿದೆ ಎನ್ನಬಹುದು. ಹೌದು, ಕಳೆದ ಎರಡು ತಿಂಗಳಿನಿಂದ ಈರುಳ್ಳಿ ಬೆಲೆಯಲ್ಲಿ ಬಹುತೇಕ ಏರಿಕೆ ಆಗುತ್ತಲೇ ಇದೆ.

ಕಳೆದ ಐದಾರು ತಿಂಗಳ ಹಿಂದೆ ಜನರು ಟೊಮೇಟೊ ದರದ ಏರಿಕೆಯ ಬಗ್ಗೆ ಚಿಂತಿಸುವಂತಾಗಿದ್ದು, ಸದ್ಯ ಟೊಮೊಟೊ ದರ ಯಥಾಸ್ಥಿತಿ ತಲಿಪಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೇಳಿದರೆ ನಿಜಕ್ಕೂ ಗ್ರಾಹಕರ ಕಣ್ಣಲ್ಲಿ ನೀರು ಬರುವುದಂತೂ ಸಹಜ.

Onion Price Hike
Image Credit: The Statesman

ಜನರ ಕಣ್ಣಲ್ಲಿ ನೀರು ತರುಸುತ್ತಿದೆ ಈರುಳ್ಳಿ ದರ
ಜನರು ಈರುಳ್ಳಿ ದರದ ಏರಿಕೆ ಕೇಳಿ ಕಂಗಾಲಾಗುವಂತಾಗಿದೆ. ಕಳೆದ ತಿಂಗಳಿನಿಂದ ಈರುಳ್ಳಿ ಬೆಲೆ ದ್ವಿಗುಣಗೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆಜಿಗೆ 70 ರಿಂದ 75 ರೂ. ತಲುಪುತ್ತಿದೆ. ಕಳೆದ ತಿಂಗಳಿನಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆಜಿಗೆ 30 ರಿಂದ 40 ರೂ. ಆಗಿತ್ತು. ಎರಡು ದಿನಗಳ ಹಿಂದೆ ದಿಡೀರ್ ಏರಿಕೆ ಕಂಡಿದೆ.

ಕೇಂದ್ರ ಸರಕಾರ ಈರುಳ್ಳಿ ರಫ್ತಿಗೆ ಮಿತಿ ಹೇರಿದ ಬಳಿಕ ವಾಸ್ತವಿಕ ವೆಚ್ಚ ತಗ್ಗಿದೆ. ಇನ್ನು 10-15 ದಿನಗಳಲ್ಲಿ ಕೇಂದ್ರ ಸರ್ಕಾರದ ಬಳಿ ಹೊಸ ದಾಸ್ತಾನು ಇದ್ದಾಗ ಚಿಲ್ಲರೆ ಬೆಲೆ ಇಳಿಕೆಯಾಗಲಿದೆ. ಆದರೆ ಗುಣಮಟ್ಟದಿಂದಾಗಿ ಹೊಸ ಬೆಳೆ ಹೆಚ್ಚು ಕಾಲ ಶೇಖರಣೆಯಾಗುವುದಿಲ್ಲ ಎಂದು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಬಿ ರವಿಶಂಕರ್ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

Onion Price Hike Reason
Image Credit: Freepressjournal

ಈರುಳ್ಳಿ ಬೆಲೆಯ ಏರಿಕೆಗೆ ಕಾರಣವೇನು..?
ಕರ್ನಾಟಕದಲ್ಲಿ ಬರ ಪರಿಸ್ಥಿತಿ ಈರುಳ್ಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ಬೇರೆ ರಾಜ್ಯಗಳ ಉತ್ಪನ್ನಗಳ ಮೇಲೆ ಅವಲಂಬನೆ ಹೆಚ್ಚಿದ್ದು, ವೆಚ್ಚದಲ್ಲಿ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಮತ್ತು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಈರುಳ್ಳಿ ದರದ ಏರಿಕೆಯ ಕಾರಣದ ಬಗ್ಗೆ ಚರ್ಚೆ ಹೆಚ್ಚಾಗಿದೆ.

Join Nadunudi News WhatsApp Group

ಜನರು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಕೊನೆಯ ಸ್ಟಾಕ್ ಅನ್ನು ಸಂಗ್ರಹಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಇದು ಕೊರತೆಯನ್ನು ಸೃಷ್ಟಿಸಿದ್ದು, ಬೆಳೆಯನ್ನು ಹೆಚ್ಚಿಸುತ್ತಿದೆ ಎನ್ನಬಹುದು. ಇದೆ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಕೊರತೆ ಕಂಡುಬಂದರೆ ಮುಂದಿನ ದಿನದಲ್ಲಿ ಈರುಳ್ಳಿ ದರ 120 ರಿಂದ 150 ರೂ. ತಲುಪುವಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

Join Nadunudi News WhatsApp Group