Onion Price: ದೇಶದಲ್ಲಿ 80 ರೂ ತಲುಪಿದ ಈರುಳ್ಳಿ ಬೆಲೆ, ಜನವರಿ ತಿಂಗಳಲ್ಲಿ ಈರುಳ್ಳಿ ಬೆಲೆ ಎಷ್ಟಾಗಲಿದೆ ಗೊತ್ತಾ…?

ದೇಶದಲ್ಲಿ ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ, ಜನವರಿಯಲ್ಲಿ ಈರುಳ್ಳಿ ಬೆಲೆ ಎಷ್ಟಾಗಲಿದೆ

Onion Price Latest Update: ದೇಶಿಯ ಮಾರುಕಟ್ಟೆಯಲ್ಲಿ ಆಗಾಗ ತರಕಾರಿಗಳ ಬೆಲೆ ಗಗನಕ್ಕೆ ಏರುವುದನ್ನು ಹಾಗು ಅಷ್ಟೇ ಕೆಳಗೆ ಇಳಿಯುದನ್ನು ನೋಡುತ್ತಿರುತ್ತೇವೆ. ಎರಡು ತಿಂಗಳ ಹಿಂದೆ ಟೊಮೆಟೊ (Tomato) ಬೆಲೆ ಗಗನಕ್ಕೆ ಏರಿದ್ದು, ಜನ ಟೊಮೆಟೊ ತಿನ್ನುವುದನ್ನೇ ಕಡಿಮೆ ಮಾಡಿ ಬಿಟ್ಟಿದ್ದರು. ಆ ಮಟ್ಟಿಗೆ ಟೊಮೆಟೊ ದುಬಾರಿ ಆಗಿತ್ತು.

ತದನಂತರ ಈಗ ಈರುಳ್ಳಿ ಸರದಿ ಪ್ರಾರಂಭ ಆಗಿದೆ. ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿದೆ. ಈ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು ಹೊಸ ವರ್ಷದಲ್ಲಿ ಎಷ್ಟರ ಮಟ್ಟಿಗೆ ಈರುಳ್ಳಿ ದುಬಾರಿ ಆಗಲಿದೆ ಎಂದು ನೋಡಬೇಕಿದೆ.

Onion Price Latest Update
Image Credit: India TV News

ಈರುಳ್ಳಿ ಬೆಲೆಯಲ್ಲಿ ಏರಿಕೆ ಆಗಲು ಕಾರಣ

ಈರುಳ್ಳಿ ಉತ್ಪಾದನೆ ಕುಸಿದಿದ್ದರಿಂದ ದರ ಏರಿಕೆಯಾಗಿದೆ ಎಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ. ಈ ಆರ್ಥಿಕ ವರ್ಷದ ಏಪ್ರಿಲ್‌ 1ರಿಂದ ಆಗಸ್ಟ್‌ 4ರವರೆಗೆ 9.75 ಲಕ್ಷ ಟನ್‌ಗಳಷ್ಟು ಈರುಳ್ಳಿ ರಫ್ತು ಮಾಡಲಾಗಿದೆ. ಬಾಂಗ್ಲಾದೇಶ, ಮಲೇಷ್ಯಾ ಹಾಗೂ ಯುಎಇಗೆ ಹೆಚ್ಚಿನ ಪ್ರಮಾಣದ ಈರುಳ್ಳಿ ರಫ್ತಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈರುಳ್ಳಿ ಮೇಲಿದ್ದ ಕನಿಷ್ಠ ರಫ್ತು ಬೆಲೆಯ ನಿರ್ಬಂಧದ ಬದಲು ಇಡೀ ಈರುಳ್ಳಿ ರಫ್ತನ್ನೇ ನಿಷೇಧಿಸಿದೆ. 2024ರ ಮಾರ್ಚ್ ತಿಂಗಳವರೆಗೂ ಈರುಳ್ಳಿ ರಫ್ತು ನಿಷೇಧ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಈರುಳ್ಳಿ ಬೆಲೆ ಕಡಿಮೆ ಆಗುವ ಕುರಿತು ಮಾಹಿತಿ

Join Nadunudi News WhatsApp Group

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ನೀಡಿರುವ ಮಾಹಿತಿ ಪ್ರಕಾರ, ಇನ್ನೆರಡು ತಿಂಗಳಲ್ಲಿ ಈರುಳ್ಳಿ ಬೆಲೆ ತುಂಬಾ ಕಡಿಮೆಯಾಗುವ ನಿರೀಕ್ಷೆಯಿದೆ ಹಾಗು ಇನ್ನು ಜನವರಿ ತಿಂಗಳೊಳಗೆ ಈರುಳ್ಳಿ ಬೆಲೆ 40 ರೂಪಾಯಿಗಿಂತ ಕಡಿಮೆಯಾಗುವ ಸಾಧ್ಯತೆಯಿದೆ. ಸದ್ಯ ಇದೀಗ 80 ರೂಪಾಯಿ ಆಸುಪಾಸಿನಲ್ಲಿದೆ ಎಂದರು , ಭಾರತ ಹಾಗೂ ಬಾಂಗ್ಲಾದೇಶದ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ ಮಾರಾಟಗಾರರು ದರ ವ್ಯತ್ಯಾಸ ಮಾಡಿ ದೌರ್ಜನ್ಯ ಮಾಡುತ್ತಿದ್ದರು. ರಫ್ತು ನಿಷೇಧದಿಂದ ದೌರ್ಜನ್ಯ ಮಾಡುತ್ತಿರುವವರು ನಷ್ಟ ಅನುಭವಿಸುತ್ತಿದ್ದಾರೆ. ಭಾರತದ ಗ್ರಾಹಕರಿಗೆ ಲಾಭ ಆಗಲಿದೆ ಎಂದು ತಿಳಿಸಿದ್ದಾರೆ.

Onion Price Update
Imager Credit: Aradbranding

ರಫ್ತು ನಿಷೇಧದಿಂದ ಈರುಳ್ಳಿ ಬೆಲೆ ಕಡಿಮೆ ಆಗಲಿದೆ

ಸರ್ಕಾರ ಈರುಳ್ಳಿ ರಫ್ತನ್ನು ನಿಷೇಧ ಮಾಡಿದ್ದರಿಂದ ಬೆಳೆಗಾರರ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲವೆಂದು ತಜ್ಞರ ಅಭಿಪ್ರಾಯ ಪಟ್ಟಿದ್ದಾರೆ . ರಫ್ತು ನಿಷೇಧದಿಂದ ಈರುಳ್ಳಿ ಬೆಲೆ ಕಡಿಮೆ ಆಗಿ, ಸಾಮಾನ್ಯ ಗ್ರಾಹಕರಿಗೆ ಲಾಭ ಆಗಲಿದೆ. ಇನ್ನು ಈಗಾಗಲೇ ಕೆಲವು ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಕೆ.ಜಿ.ಈರುಳ್ಳಿ ಬೆಲೆ 40, 50, 60, 80 ಹೀಗೆ ಇದೆ. ಇನ್ನು 2024 ಜನವರಿಯೊಳಗೆ 40 ರೊಳಗೆ ಆಗಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು ಕೆಲವೇ ವರ್ತಕರು ಈರುಳ್ಳಿ ಸಂಗ್ರಹ ಇಟ್ಟುಕೊಂಡು ರಫ್ತಿನ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

Join Nadunudi News WhatsApp Group