Electricity: ಈ ತಪ್ಪು ಮಾಡಿದರೆ ನಿಮ್ಮ ಗೃಹಜ್ಯೋತಿ ಅರ್ಜಿ ಕ್ಯಾನ್ಸಲ್ ಆಗಲಿದೆ, ಆನ್ಲೈನ್ ಬಿಲ್ ಕಟ್ಟುವಾಗ ಎಚ್ಚರ.

ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವಾಗ ಈ ತಪ್ಪು ಮಾಡಿದರೆ ನಿಮ್ಮ ಗೃಹಜ್ಯೋತಿ ಅರ್ಜಿ ಕ್ಯಾನ್ಸಲ್.

Gruja Jyothi Application Cancel: ಇದೀಗ ವಿದ್ಯುತ್ ಶುಲ್ಕ ಪಾವತಿ ಮಾಡುವವರಿಗೆ ಹೊಸ ಸುದ್ದಿ ಹೊರ ಬಿದ್ದಿದೆ. ನೀವು ವಿದ್ಯುತ್ ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿಸುವವರಾಗಿದ್ದರೆ ನೀವು ಮಾಡುವ ಒಂದು ಸಣ್ಣ ತಪ್ಪು ಉಚಿತ ವಿದ್ಯುತ್ ಯೋಜನೆ ನಿಮಗೆ ದೊರೆಯದಂತೆ ಮಾಡುತ್ತದೆ. ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿಸುವಾಗ ನೀವು ಎಚ್ಚರಿಕೆ ವಹಿಸಬೇಕು. ಇದರ ಬಗ್ಗೆ ಮಾಹಿತಿ ತಿಳಿಯೋಣ.

ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವವರಿಗೆ ಹೊಸ ಸುದ್ದಿ
ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಸರ್ಕಾರದ ಗ್ಯಾರೆಂಟಿ ಯೋಜನೆಯಲ್ಲಿ ಒಂದಾದ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ.

New news for online electricity bill payers
Image Credit: Paytm

ಒಂದೆಡೆ ಆನ್ ಲೈನ್ ನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಿದ್ದರಿಂದ ಸರ್ವರ್ ಸಮಸ್ಯೆಯಾಗಿದ್ದರೆ, ಬೆಂಗಳೂರು ವನ್, ನಾಡ ಕಚೇರಿ ಸೇರಿದಂತೆ ವಿದ್ಯುತ್ ನಿಗಮಗಳ ಇತರ ಕಚೇರಿಯಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿಯೂ ಸಹ ಏರಿಕೆಯಾಗಿದೆ. ಇದೀಗ ಸರ್ವರ್ ಸಮಸ್ಯೆ ಬಗೆಹರಿದಿದೆ ಎಂದು ಹೇಳಲಾಗಿದೆ.

ಇದೇನೇ ಇದ್ದರು ಈ ಹಿಂದಿನ ತಿಂಗಳ ವಿದ್ಯುತ್ ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿಸುವವರು ನೀವಾಗಿದ್ದರೆ ನೀವು ಮಾಡುವ ಒಂದು ಸಣ್ಣ ತಪ್ಪು ಉಚಿತ ವಿದ್ಯುತ್ ಯೋಜನೆ ನಿಮಗೆ ದೊರೆಯದಂತೆ ಮಾಡುತ್ತದೆ. ಈ ಕಾರಣದಿಂದ ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿಸುವಾಗ ಎಚ್ಚರಿಕೆ ವಹಿಸಬೇಕು.

New news for online electricity bill payers
Image Credit: Guardian

ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವವರಿಗೆ ಎಚ್ಚರದ ಮಾಹಿತಿ
ಇನ್ನು ಬೆಸ್ಕಾಂ ಗ್ರಾಹಕರಿಗೆ ಜೂನ್ ತಿಂಗಳಲ್ಲಿ ಮನೆಗೆ ಬಂದಿರುವ ವಿದ್ಯುತ್ ಬಿಲ್ ಮತ್ತು ಆನ್ ಲೈನ್ ನಲ್ಲಿ ತೋರಿಸುತ್ತಿರುವ ಬಿಲ್ ನಲ್ಲಿ ವ್ಯತ್ಯಾಸ ಕಂಡುಬಂದಿದೆ.

Join Nadunudi News WhatsApp Group

ಕೆಲವು ಮಂದಿಗೆ ಆನ್ ಲೈನ್ ನಲ್ಲಿ ತೀರಾ ಕಡಿಮೆ ಮೊತ್ತದ ಬಿಲ್ ಬಂದಿದೆ. ಇದರಿಂದ ನೀವು ಆನ್ ಲೈನ್ ನಲ್ಲಿ ಕಡಿಮೆ ಬಿಲ್ ಬಂದಿದೆ ಎಂದು ಅದನ್ನಷ್ಟೇ ಪಾವತಿಸಿ ಸಮ್ಮನಾಗಿದ್ದರೆ ನಿಮ್ಮ ಗೃಹಜ್ಯೋತಿ ಅರ್ಜಿ ತಿರಸ್ಕ್ರತಗೊಳ್ಳುವ ಸಾಧ್ಯತೆ ಇದೆ. ಬೆಸ್ಕಾಂ ಕೂಡ ಆನ್ ಲೈನ್ ಬಿಲ್ ನಲ್ಲಿರುವ ದೋಷದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದೆ.

Join Nadunudi News WhatsApp Group