Ayodhya Scam: ಅಯೋಧ್ಯಾ ರಾಮ ಮಂದಿರಕ್ಕೆ ಕಾಣಿಕೆ ಕೊಡುವ ಮುನ್ನ ಎಚ್ಚರ, ಈ ತಪ್ಪು ಮಾಡಿದರೆ ನಿಮ್ಮ ಖಾತೆ ಖಾಲಿ

ಅಯೋಧ್ಯಾ ರಾಮ ಮಂದಿರಕ್ಕೆ ದೇಣಿಗೆ ಕೊಡುವವರಿಗೆ ಕೇಂದ್ರದಿಂದ ಎಚ್ಚರಿಕೆ, ನಿಮ್ಮ ಖಾತೆ ಖಾಲಿಯಾಗಲಿದೆ

Ayodhya Donation Scam: ಜನವರಿ 22 ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪ್ರತಿಷ್ಠಾಪನೆ ಆಗಲಿದ್ದು, ಆಯೋಧ್ಯೆ ಈ ಕಾರ್ಯಕ್ರಮಕ್ಕೆ ಭರ್ಜರಿ ಆಗಿ ಸಿದ್ಧವಾಗುತ್ತಿದೆ. ಬಹುನಿರೀಕ್ಷಿತ ರಾಮಮಂದಿರ ನೋಡಲು ಕೋಟ್ಯಂತರ ಭಕ್ತರು ತೆರಳಲಿದ್ದು, ಎಲ್ಲರೂ ಎಚ್ಚರವಾಗಿರುವುದು ಮುಖ್ಯ ಆಗಿದೆ.

ರಾಮ ಮಂದಿರ ಪ್ರತಿಷ್ಠಾಪನೆ ಆಗುವ ಮುಂಚಿತವಾಗಿಯೇ ಅಲ್ಲಿ ಕೆಲವು ವಂಚಕರು ಭಕ್ತರನ್ನು ವಸೂಲಿ ಮಾಡುತ್ತಿರುವ ವರದಿ ಹೊರಬಿದ್ದಿದ್ದು, ವಂಚಕರು ಭಕ್ತರಿಂದ ಹಣವನ್ನ ಪಡೆಯಲು ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಟ್ರಸ್ಟ್ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರನ್ನ ಸಹ ಬಳಸುತ್ತಿದ್ದಾರೆ. ಜನರೆಲ್ಲರೂ ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಲಾಗಿದೆ.

ram mandir inauguration is the latest target of scammers
Image Credit: Theguardian

ದೇವರ ಹೆಸರಲ್ಲಿ ಜನರನ್ನು ವಂಚಿಸಲಾಗುತ್ತಿದೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದ್ದು, ಇದಕ್ಕೂ ಮುಂಚಿತವಾಗಿ
ಭಕ್ತರನ್ನ ವಂಚಿಸಲು ಶುಭ ಸಂದರ್ಭವನ್ನ ಬಳಸಿಕೊಳ್ಳುವ ಕ್ರಿಮಿನಲ್ ದಂಧೆಗಳು ದೇಶಾದ್ಯಂತ ತಲೆ ಎತ್ತಿದೆ. ವರದಿ ಪ್ರಕಾರ, ವಂಚಕರು ದೇವಾಲಯಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದು, ನಕಲಿ ಕ್ಯೂಆರ್ ಕೋಡ್ ಗಳನ್ನೂ ಬಳಸುತ್ತಿದ್ದಾರೆ.

ಸೈಬರ್ ಅಪರಾಧಿಗಳು ದೇವಾಲಯದ ಹೆಸರಿನಲ್ಲಿ ದೇಣಿಗೆ ಕೋರಿ ಸಾಮಾಜಿಕ ಮಾಧ್ಯಮ ಸಂದೇಶಗಳನ್ನ ಪೋಸ್ಟ್ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (VHP) (ಹಿಂದೂ ಹಕ್ಕುಗಳ ಸಂಘಟನೆ) ಎಚ್ಚರಿಸಿದೆ. ಅಭಿಷೇಕ್ ಕುಮಾರ್ ಎಂದು ಗುರುತಿಸಲ್ಪಟ್ಟ ದುಷ್ಕರ್ಮಿ ವಿವಿಧ ಆನ್ಲೈನ್ ಗುಂಪುಗಳಲ್ಲಿ ಸಂದೇಶಗಳನ್ನ ಪೋಸ್ಟ್ ಮಾಡುವ ಮೂಲಕ ಅಯೋಧ್ಯೆ ದೇವಾಲಯದ ಅಭಿವೃದ್ಧಿಗೆ ಹಣವನ್ನ ಕೋರುತ್ತಿದ್ದನು, ಆ ಹಣವು ಅವನ ವೈಯಕ್ತಿಕ ಬ್ಯಾಂಕ್ ಖಾತೆಗೆ ಹೋಗುತ್ತದೆ ಎಂದು ವಿಎಚ್ಪಿ ಬಹಿರಂಗಪಡಿಸಿದೆ.

Join Nadunudi News WhatsApp Group

Ayodhya Ram Mandir
Image Credit: Arthparkash

ದೇಣಿಗೆ ಕೇಳಿ ಬರುವ ಮೊಬೈಲ್ ಸಂದೇಶ ಹಾಗು ಕರೆಗಳನ್ನು ನಿರ್ಲಕ್ಷಿಸಿ

ವಂಚಕರು ಯುಪಿಐ ಕ್ಯೂಆರ್ ಕೋಡ್ ಗಳನ್ನೂ ಫೇಸ್ಬುಕ್ ಗುಂಪುಗಳಲ್ಲಿ ‘ರಾಮ ಮಂದಿರ ಅಯೋಧ್ಯೆ ಚಂದಾ ಪ್ರದರ್ಶನ ಕರೆನ್’ ಎಂಬ ಸಾಲುಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ, ಯುಪಿಐ ಬಳಕೆದಾರರನ್ನ ಮನಿಷಾ ನಲ್ಲಬೆಲ್ಲಿ ಹೆಸರಿನ ಯುಪಿಐ ಐಡಿ ‘9040914736@Paytm’ ಗೆ ನಿರ್ದೇಶಿಸುತ್ತದೆ ” ಎಂದು ವಿಎಚ್ಪಿ ಸದಸ್ಯ ಗಿರೀಶ್ ಭಾರದ್ವಾಜ್ ಉತ್ತರ ಪ್ರದೇಶ ಡಿಜಿಪಿ ಮತ್ತು ಐಜಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ವಿಶೇಷವೆಂದರೆ, ಅಯೋಧ್ಯೆಯ ವಿಎಚ್ಪಿ ಸದಸ್ಯರೊಬ್ಬರು ಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ ವಂಚಕ, “ನಿಮಗೆ ಸಾಧ್ಯವಾದಷ್ಟು ಕೊಡುಗೆ ನೀಡಿ. ನಿಮ್ಮ ಹೆಸರು ಮತ್ತು ಸಂಖ್ಯೆಯನ್ನ ಡೈರಿಯಲ್ಲಿ ಬರೆಯಲಾಗುತ್ತದೆ. ದೇವಾಲಯ ಪೂರ್ಣಗೊಂಡಾಗ, ನಿಮ್ಮೆಲ್ಲರನ್ನೂ ಅಯೋಧ್ಯೆಗೆ ಆಹ್ವಾನಿಸಲಾಗುತ್ತದೆ. ನಾನು ಅಯೋಧ್ಯೆಯಿಂದ ಮಾತನಾಡುತ್ತಿದ್ದೇನೆ” ಎಂದು ಹೇಳಿದ್ದಾನೆ.

Join Nadunudi News WhatsApp Group