Pakistan Economy: ಪಾಕಿಸ್ತಾನದಲ್ಲಿ 1 ಕೆಜಿ ಅಕ್ಕಿ ಮತ್ತು 1 ಲೀಟರ್ ಹಾಲಿನ ಬೆಲೆ ಎಷ್ಟು ಗೊತ್ತಾ, ಕಂಗಾಲಾದ ಪಾಕ್ ಜನರು.

ಪಾಕಿಸ್ತಾನದಲ್ಲಿ 1 ಕೆಜಿ ಅಕ್ಕಿ ಮತ್ತು 1 ಲೀಟರ್ ಹಾಲಿನ ಬೆಲೆ ಎಷ್ಟು ಗೊತ್ತಾ...?

Pakistan Economy Details: ಆರ್ಥಿಕತೆಯಲ್ಲಿ ಪಾಕಿಸ್ತಾನವು ಬಹುತೇಕ ಹಿಂದುಳಿದಿದೆ ಎನ್ನಬಹುದು. ಸದ್ಯ ಪಾಕಿಸ್ತಾನ ದಿವಾಳಿಯ ಅಂಚಿನಲ್ಲಿದೆ ಎಂದರೆ ತಪ್ಪಾಗಲಾರದು. ಇದೀಗ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಹಣದುಬ್ಬರತೆಯ ಪರಿಸ್ಥಿತಿ ಎದುರಾಗಿದೆ. ಜನರು ಈಗಾಗಲೇ ಹಣದುಬ್ಬರತೆಯಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಸದ್ಯ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದ ಜನರು ಹಣದುಬ್ಬರತೆಗೆ ಸಿಲುಕುವಂತಾಗಿದೆ.

ಆರ್ಥಿಕ ಬಿಕ್ಕಟ್ಟಿನ ಕಾರಣ ಪಾಕಿಸ್ತಾನದಲ್ಲಿ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗುತ್ತಿದೆ. ಸದ್ಯ ಪಾಕಿಸ್ತಾನದಲ್ಲಿ ಎಲ್ಲವು ದುಬಾರಿಯಾಗಿದ್ದು, ಜನರು ಕಂಗಾಲಾಗುವಂತಾಗಿದೆ. ಇನ್ನು ಪಾಕಿಸ್ತಾನದಲ್ಲಿ ಅಕ್ಕಿ ಮತ್ತು ಹಾಲಿನ ಬೆಲೆ ಕೇಳಿದರೆ ನೀವು ಅಚ್ಚರಿ ಪಡುವುದಂತೂ ಖಚಿತ. ಪಾಕಿಸ್ತಾನದ ಹಣದುಬ್ಬರತೆಯ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Pakistan Rice Price Hike
Image Credit: Deccanherald

ಪಾಕಿಸ್ತಾನದಲ್ಲಿ 1 ಕೆಜಿ ಅಕ್ಕಿ ಮತ್ತು 1 ಲೀಟರ್ ಹಾಲಿನ ಬೆಲೆ ಎಷ್ಟು ಗೊತ್ತಾ…?
ಭಯೋತ್ಪಾದಕರಿಗೆ ಆಹಾರ ನೀಡುವುದು, ಅವರಿಗೆ ಆರ್ಥಿಕ ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿದಂತೆ ಹಲವು ಕಾರಣಗಳಿಂದ ಪಾಕಿಸ್ತಾನ ದಿವಾಳಿಯಾಗಿದೆ. ಈ ಕಾರಣಕ್ಕಾಗಿಯೇ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎದುರು ಹಣಕ್ಕಾಗಿ ಪಾಕಿಸ್ತಾನ ಪರಿತಪಿಸುತ್ತಿದೆ. ಅಲ್ಲದೇ ಹಣದುಬ್ಬರ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ.

ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಗೋಧಿ ಹಿಟ್ಟು, ಅಕ್ಕಿ ಮತ್ತು ಹಾಲಿನ ಬೆಲೆ ಗಗನಕ್ಕೇರಿದೆ. ಭಾರತದಲ್ಲಿ ಹಾಲಿನ ಬೆಲೆ ಲೀಟರ್‌ ಗೆ 50 ರಿಂದ 60 ರೂ., ಆದರೆ ಪಾಕಿಸ್ತಾನದಲ್ಲಿ ಅದು ಲೀಟರ್‌ ಗೆ 210 ರೂ.ಗೆ ತಲುಪಿದೆ. ಒಂದು ಕೆಜಿ ಗೋಧಿ ಹಿಟ್ಟಿಗೆ 800 ರೂ., ಒಂದು ಕೆಜಿ ಅಕ್ಕಿಗೆ 400 ರೂ. ತಲುಪಿದೆ. ಹಾಲಿನ ದರ ಈಗಾಗಲೇ ಗಗನಕ್ಕೇರಿದ್ದರೂ, ಹೈನುಗಾರರ ಸಂಘದ ಬೇಡಿಕೆಗೆ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಹಾಲಿನ ದರದಲ್ಲಿ ಮುಂದಿನ ದಿನಗಳಲ್ಲಿ ಇನ್ನು 50 ರೂ. ಹೆಚ್ಚಾಗಲಿದೆ. ಬಾಳೆಹಣ್ಣು, ಸೇಬಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ

Pakistan Milk Price Hike
Image Credit: Twitter

Join Nadunudi News WhatsApp Group

Join Nadunudi News WhatsApp Group