Pakistan Inflation: ಪಾಕಿಸ್ತಾನದಲ್ಲಿ ಮೊಟ್ಟೆ ಬೆಲೆ ಎಷ್ಟು ಗೊತ್ತಾ…? ಪಾಕಿಸ್ತಾನದ ಜನರ ಪರಿಸ್ಥಿತಿ ಕೇಳಿದರೆ ಅಯ್ಯೋ ಪಾಪ ಅನಿಸುತ್ತದೆ

ಪಾಕಿಸ್ತಾನದಲ್ಲಿ ಏರಿಕೆಯಾದ ಮೊಟ್ಟೆ ಬೆಲೆ, ಅಯ್ಯೋ ಪಾಪ ಅನಿಸುತ್ತದೆ ಜನರ ಪರಿಸ್ಥಿತಿ

Pakistan Inflation: ಆರ್ಥಿಕತೆಯಲ್ಲಿ ಪಾಕಿಸ್ತಾನವು ಬಹುತೇಕ ಹಿಂದುಳಿದಿದೆ ಎನ್ನಬಹುದು. ಸದ್ಯ ಪಾಕಿಸ್ತಾನ ದಿವಾಳಿಯ ಅಂಚಿನಲ್ಲಿದೆ ಎಂದರೆ ತಪ್ಪಾಗಲಾರದು. ಆರ್ಥಿಕ ಬಿಕ್ಕಟ್ಟಿನ ಕಾರಣ ಪಾಕಿಸ್ತಾನದಲ್ಲಿ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗುತ್ತಿದೆ.

ಸದ್ಯ ಪಾಕಿಸ್ತಾನದಲ್ಲಿ ಎಲ್ಲವು ದುಬಾರಿಯಾಗಿದ್ದು, ಜನರು ಕಂಗಾಲಾಗುವಂತಾಗಿದೆ. ಇನ್ನು ಪಾಕಿಸ್ತಾನದಲ್ಲಿ ಮೊಟ್ಟೆ ಮತ್ತು ಈರುಳ್ಳಿಯ ಬೆಲೆ ಕೇಳಿದರೆ ನೀವು ಅಚ್ಚರಿ ಪಡುವುದಂತೂ ಖಚಿತ. ಏಕೆಂದರೆ ಪಾಕಿಸ್ತಾನದಲ್ಲಿ ಮೊಟ್ಟೆ ಮತ್ತು ಈರುಳ್ಳಿ ಅಷ್ಟೊಂದು ದುಬಾರಿಯಾಗಿದೆ ಎನ್ನಬಹುದು.

Egg Price Hike In Pakistan
Image Credit: Aajtak

ಪಾಕಿಸ್ತಾನದಲ್ಲಿ ಮತ್ತೊಮ್ಮೆ ಹಣದುಬ್ಬರತೆ
ಪಾಕಿಸ್ತಾನದಲ್ಲಿ ಮತ್ತೊಮ್ಮೆ ಹಣದುಬ್ಬರತೆಯ ಪರಿಸ್ಥಿತಿ ಎದುರಾಗಿದೆ. ಜನರು ಈಗಾಗಲೇ ಹಣದುಬ್ಬರತೆಯಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಸದ್ಯ ದಿನಬಳಕೆಯ ವಸ್ತುಗಳಾದ ಮೊಟ್ಟೆ ಮತ್ತು ಈರುಳ್ಳಿ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದಲ್ಲಿ ಇನ್ನೇನು ಕೆಲವೇ ದಿನಗಲ್ಲಿ ಚುನಾವಣೆ ಆರಂಭವಾಗಲಿದೆ. ಚುನಾವಣೆಗೂ ಮುನ್ನವೇ ಪಾಕ್ ಜನರು ಹಣದುಬ್ಬರತೆಗೆ ಸಿಲುಕುವಂತಾಗಿದೆ. ಪಾಕಿಸ್ತಾನದಲಿ ಮೊಟ್ಟೆ, ಕೋಳಿ, ಈರುಳ್ಳಿಯ ಬೆಲೆ ಜನರನ್ನು ಕಂಗಾಲು ಮಾಡಿದೆ.

ಪಾಕಿಸ್ತಾನದಲ್ಲಿ 12 ಮೊಟ್ಟೆಗೆ 400 ರೂ.
ವರದಿಯ ಪ್ರಕಾರ, ಭಾನುವಾರ ಪಾಕಿಸ್ತಾನಿ ಪಂಜಾಬ್ ರಾಜ್ಯದ ರಾಜಧಾನಿ ಲಾಹೋರ್‌ ನಲ್ಲಿ ಮೊಟ್ಟೆಯ ಬೆಲೆ ಡಜನ್‌ ಗೆ 400 ಪಾಕಿಸ್ತಾನಿ ರೂಪಾಯಿಗಳನ್ನು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಇದು ಭಾರತೀಯ ಕರೆನ್ಸಿಯಲ್ಲಿ ಅಂದಾಜು 120 ರೂ. ಸರಕಾರಿ ದರಪಟ್ಟಿ ಜಾರಿಗೊಳಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನುವುದು ಮೂಲಗಳಿಂದ ತಿಳಿದುಬಂದ ಮಾಹಿತಿ.

Pakistan Inflation 2024
Image Credit: Aljazeera

ಒಂದು ಕೆಜಿ ಈರುಳ್ಳಿ ಬೆಲೆ ಎಷ್ಟು ಗೊತ್ತಾ..?
ಪಾಕಿಸ್ತಾನದಲ್ಲಿ ಮೊಟ್ಟೆಯ ಬೆಲೆಯ ಜೊತೆಗೆ ಈರುಳ್ಳಿ ಬೆಲೆ ಕೂಡ ಗಗನಕ್ಕೇರುತ್ತಿದೆ. ಸರ್ಕಾರ ಪ್ರತಿ ಕಿಲೋಗ್ರಾಂ ಈರುಳ್ಳಿ ಬೆಲೆಯನ್ನು 175 ಪಾಕಿಸ್ತಾನಿ ರೂಪಾಯಿಗಳಿಗೆ ನಿಗದಿಪಡಿಸಿದೆ. ಆದರೆ ಇಲ್ಲಿ ಈರುಳ್ಳಿ ಕೆಜಿಗೆ 230 ರಿಂದ 250 ಪಾಕಿಸ್ತಾನಿ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಒಂದು ಡಜನ್ ಮೊಟ್ಟೆಯ ಬೆಲೆ ಲಾಹೋರ್‌ನಲ್ಲಿ 400 ರೂ. ಆದರೆ ಚಿಕನ್ ಬೆಲೆ ಕೆಜಿಗೆ 615 ಪಾಕಿಸ್ತಾನಿ ರೂಪಾಯಿ ತಲುಪಿದೆ.

Join Nadunudi News WhatsApp Group

Join Nadunudi News WhatsApp Group