Pan Aadhar Link: ಪಾನ್ ಮತ್ತು ಆಧಾರ್ ಈಗ ಉಚಿತವಾಗಿ ಲಿಂಕ್ ಮಾಡಿ, ಸುದ್ದಿಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸರ್ಕಾರ.

ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಉಚಿತವಾಗಿ ಲಿಂಕ್ ಮಾಡಬಹುದು ಅನ್ನುವ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.

Pan Card Link In No Cost: ಪ್ಯಾನ್ ಕಾರ್ಡ್ (Pan Card) ಮತ್ತು ಆಧಾರ್ ಕಾರ್ಡ್ (Aadhar Card) ಲಿಂಕ್ ಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದಿಂದ ಸಾಕಷ್ಟು ಸುದ್ದಿ ಹೊರ ಬಿದ್ದಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕ ಆಗಿತ್ತು.

ಅಲ್ಲದೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು 1000 ರೂಪಾಯಿ ದಂಡ ಕಟ್ಟಬೇಕಾಗಿತ್ತು. ಜನ ಸಾಮಾನ್ಯರ ಬೇಡಿಕೆಯ ಪರವಾಗಿ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಗಡುವನ್ನು ವಿಸ್ತರಿಸಿದೆ. ಜೂನ್ 30 ರೊಳಗೆ ಲಿಂಕ್ ಮಾಡಿಸಬೇಕು ಎಂಬ ಆದೇಶ ಹೊರಡಿಸಿದೆ.

Pan Card Link In No Cost
Image Source: Zee News

ಪ್ಯಾನ್ ಮತ್ತು ಆಧಾರ್ ಲಿಂಕ್
ಈಗಾಗಲೇ ದೇಶದಲ್ಲಿ ಕೋಟ್ಯಾಂತರ ಜನರು ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು 1000 ರೂಪಾಯಿ ಹಣ ದಂಡವನ್ನು ಕಟ್ಟಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಲಾಭ ಬಂದಿದೆ. ಮಾರ್ಚ್ 31 ರೊಳಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ಹೇಳಲಾಗಿತ್ತು.

ಅಲ್ಲದೆ ಮಾರ್ಚ್ 31 ರ ನಂತರ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು 10,000 ದಂಡ ಕಟ್ಟಬೇಕಾಗುತ್ತದೆ ಎಂಬ ಮಾಹಿತಿ ಕೂಡ ಹೊರ ಬಿದ್ದಿತ್ತು. ಆದರೆ ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಜೂನ್ 30 ರ ತನಕ ಪ್ಯಾನ್ ಮತ್ತು ಆಧಾರ್ ಲಿಂಕ್ ಗೆ ಗಡುವನ್ನು ವಿಸ್ತರಿಸಿದೆ.

Pan Card Link In No Cost
Image Source: India Today

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವವರಿಗೆ ಇನ್ನುಮುಂದೆ ದಂಡ ಇಲ್ಲ
ಇದೀಗ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. ಇಲ್ಲಿಯತನಕ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದೆ ಇದ್ದವರಿಗೆ ಜೂನ್ 30 ರೊಳಗೆ ಲಿಂಕ್ ಮಾಡಲು 1000 ರೂಪಾಯಿ ದಂಡ ಕಟ್ಟಬೇಕಾಗಿಲ್ಲ. ಉಚಿತವಾಗಿ ಲಿಂಕ್ ಮಾಡಬಹುದು ಎನ್ನಲಾಗುತ್ತಿದೆ.

Join Nadunudi News WhatsApp Group

ಹಲವು ಜನರು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಹೋಗಿ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಹರಡಿದೆ. ವ್ಯಕ್ತಿ ನಕಲಿ ಸಂದೇಶವನ್ನ ನಂಬಿ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಹೋಗಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ.

Pan Card Link In No Cost
Image Source: Zee News

ಹಲವರಿಗೆ ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಅನ್ನು ಉಚಿತವಾಗಿ ಮಾಡಿಕೊಳ್ಳಿ ಎಂದು ನಕಲಿ ಸಂದೇಶಗಳು ಬರುತ್ತಿದೆ. ಸಾಧ್ಯ ಇದರ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಿದೆ. ಯಾರಿಗೂ ಕೂಡ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಉಚಿತವಾಗಿ ಲಿಂಕ್ ಮಾಡಲು ಸಾಧ್ಯವಿಲ್ಲ. ಇಂತಹ ನಕಲಿ ಸಂದೇಶಗಳನ್ನ ನಂಬಿ ಪಾನ್ ಕಾರ್ಡ್ ಲಿಂಕ್ ಮಾಡಲು ಹೋದರೆ ಖಾತೆಯಲ್ಲಿನ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯನ್ನ ನೀಡಿದೆ.

Pan Card Link In No Cost
Image Source: Kannada News today

Join Nadunudi News WhatsApp Group