Account Close: ಸೆ 30 ರಿಂದ ಇಂತಹ ಜನರ PPF ಮತ್ತು ಸುಕನ್ಯಾ ಸಮೃದ್ಧಿ ಖಾತೆ ಬ್ಲಾಕ್ ಆಗಲಿದೆ, ಕೇಂದ್ರದ ಆದೇಶ.
ಇಂತಹ PPF ಮತ್ತು SSY ಖಾತೆಯನ್ನ ಬ್ಲಾಕ್ ಮಾಡಲು ನಿರ್ಧಾರ ಮಾಡಿದ ಕೇಂದ್ರ ಸರ್ಕಾರ.
Pan And Aadhaar Are Mandatory For Small Savings Scheme: ಜನಸಾಮಾನ್ಯರು ಹಣವನ್ನು ಹೂಡಿಕೆ ಮಾಡಲು ಬ್ಯಾಂಕ್ ಗಳ ಹಾಗೆ ಅಂಚೆ ಕಚೇರಿಯನ್ನು (Post Office) ಬಳಸಿಕೊಳ್ಳುತ್ತಾರೆ. Post Office ಗ್ರಾಹಕರಿಗೆ ಈಗಾಗಲೇ ಹಲವು ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಏಪ್ರಿಲ್ 2023 ರಿಂದ ಹಣಕಾಸು ಸಚಿವಾಲಯವು ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಆ ನಿಯಮಗಳ ಪ್ರಕಾರ ನೀವು ಹೂಡಿಕೆ ಮಾಡದಿದ್ದರೆ ನಿಮ್ಮ ಸಣ್ಣ ಉಳಿತಾಯ ಯೋಜನೆಗಳನ್ನು ಫ್ರೀಜ್ ಮಾಡಬಹುದು. ನೀವು Small Savings Scheme ಅಥವಾ Post Office ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ ಈ ನಿಯಮದ ಬಗ್ಗೆ ತಿಳಿದುಕೊಳ್ಳುದು ಬಹಳ ಅವಶ್ಯಕ.
ಸಣ್ಣ ಉಳಿತಾಯ ಯೋಜನೆಯ ಹೊಸ ನಿಯಮ
ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ ಸಣ್ಣ ಉಳಿತಾಯ ಯೋಜನೆಗಳಿಗೆ Aadhaar ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆಧಾರ್ ಸಂಖ್ಯೆ ಇಲ್ಲದೆ ಸಣ್ಣ ಉಳಿತಾಯ ಯೋಜನೆ ತೆರೆದ ಖಾತೆದಾರರು ಖಾತೆ ತೆರೆದ 6 ತಿಂಗಳೊಳಗೆ ಆಧಾರ್ ಸಂಖ್ಯೆಯನ್ನು ಒದಗಿಸಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದ್ದರೆ.
ಉಳಿತಾಯ ಯೋಜನೆಯ ಹೂಡಿಕೆಗೆ ಪಾನ್ ಹಾಗೂ ಆಧಾರ್ ಕಡ್ಡಾಯ
ಈ ಹಿಂದೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ Aadhaar Card ಇಲ್ಲದಿದ್ದರೂ ಹೂಡಿಕೆ ಮಾಡಬಹುದಿತ್ತು. ಆದರೆ ಈಗ Post Office ನ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡುವವರು KYC ಯಂತೆ Pan And Aadhaar ಅನ್ನು ಒದಗಿಸುದು ಕಡ್ಡಾಯವಾಗಿದೆ. ಒಂದು ವೇಳೆ Pan And Aadhaar ಅನ್ನು ಖಾತೆ ತೆರೆಯುವಾಗ ನೀಡದಿದ್ದರೆ ಅಂತವರ ಖಾತೆ ಕ್ಲೋಸ್ ಆಗಲಿದೆ.
ಇಂತಹ ಸಂದರ್ಭದಲ್ಲಿ ಪಾನ್ ಅತಿ ಅಗತ್ಯವಾಗಿದೆ
ಸಣ್ಣ ಉಳಿತಾಯ ಯೋಜನೆಯಲ್ಲಿ ಖಾತೆ ತೆರೆಯುವಾಗ ಪ್ಯಾನ್ ಅನ್ನು ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
*ಠೇವಣಿ ಮಾಡಿದ ಮೊತ್ತ 50 ಸಾವಿರ ಮೀರಿದಾಗ.
*ಹಣಕಾಸು ವರ್ಷದಲ್ಲಿ ಖಾತೆಯಲ್ಲಿನ ಎಲ್ಲಾ ಕ್ರೆಡಿಟ್ಗಳ ಒಟ್ಟು ಮೊತ್ತವು ರೂ 1 ಲಕ್ಷ ದಾಟಿದಾಗ.
*ಖಾತೆಯಿಂದ ಹಿಂಪಡೆಯುವಾಗ ಅಥವಾ ವರ್ಗಾವಣೆ ಮಾಡುವಾಗ ಮೊತ್ತ 10 ಸಾವಿರಕ್ಕಿಂತ ಹೆಚ್ಚಿದ್ದಾಗ.
ಯಾವ ಯೋಜನೆಗೆ ಈ ನಿಯಮ ಅನ್ವಯವಾಗುತ್ತದೆ
Post Office Fixed Deposit
Post Office Recurring Deposit
Post Office Monthly Income Scheme
Sukanya Samriddhi Yojana
Post Office Time Deposit
Mahila Samman Savings Certificates
Public Provident Fund
Senior Citizen Savings Scheme
Kisan Vikas Patra
ಸೆಪ್ಟೆಂಬರ್ 30 ರ ನಂತರ ಇಂತವರ ಖಾತೆ ಕ್ಲೋಸ್
ಸಣ್ಣ ಉಳಿತಾಯ ಯೋಜನೆಯನ್ನು ತೆರೆದು 6 ತಿಂಗಳಾದರೂ Pan And Aadhaar Number ನೀಡದಿದ್ದವರ ಖಾತೆಯನ್ನು ಸ್ಥಗಿತ ಗೊಳಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೆ ಹಣಕಾಸು ಸಚಿವಾಲಯ ಸೆಪ್ಟೆಂಬರ್ 30 ರ ತನಕ ಅವಕಾಶ ನೀಡಿದೆ. ಇನ್ನು ಕೇವಲ 4 ದಿನದಲ್ಲಿ ಉಳಿತಾಯ ಖಾತೆಗಳಿಗೆ Pan And Aadhaar ಅನ್ನು ಲಿಂಕ್ ಮಾಡದಿದ್ದರೆ ಅಕ್ಟೋಬರ್ 1 ರಿಂದ ಖಾತೆಗಳನ್ನು ಫ್ರೀಜ್ ಮಾಡಲಾಗುತ್ತದೆ.