PAN Card: ಪಾನ್ ಕಾರ್ಡ್ ಕಳೆದುಹೋದರೆ ಆನ್ಲೈನ್ ಮೂಲಕ ಪಡೆಯುವುದು ಹೇಗೆ…? ಇಲ್ಲಿದೆ ಡೀಟೇಲ್ಸ್.

ಪಾನ್ ಕಾರ್ಡ್ ಕಳೆದುಹೋದರೆ ಭಯಪಡುವ ಅಗತ್ಯ ಇಲ್ಲ, ಈರೀತಿ ಡೌನ್ಲೋಡ್ ಮಾಡಿ

PAN Card Online Apply:  Permanent Account Number (PAN ) ಪ್ರಸ್ತುತ ದೇಶದಲ್ಲಿ ಜನರಿಗೆ ಮುಖ್ಯ ವೈಯಕ್ತಿಕ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವೊಮ್ಮೆ ಅನಿರೀಕ್ಷಿತವಾಗಿ Pan Card ಕಳೆದು ಹೋಗುತ್ತದೆ. ಎಲ್ಲಿಯಾದರೂ ಬಿದ್ದು ಹೋಗುವುದು, ಅಥವಾ ಪಾನ್ ಕಾರ್ಡ್ ಅನ್ನು ಎಲ್ಲಿ ಇಟ್ಟಿದ್ದೇವೆ ಎನ್ನುವ ಬಗ್ಗೆ ನೆನಪಿಲ್ಲದೆ ಇರುವುದು ಹೀಗೆ ಸಾಕಷ್ಟು ಕಾರಣಗಳಿಂದ ಜನರು ತಮ್ಮ ಒರಿಜಿನಲ್ ಪಾನ್ ಕಾರ್ಡ್ ಅನ್ನು ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ.

PAN Card Latest News Update
Image Credit: News 18

ನಿಮ್ಮ ಪಾನ್ ಕಾರ್ಡ್ ಕಳೆದುಹೋಗಿದ್ಯಾ..?
ಇನ್ನು ಆದಾಯ ತೆರಿಗೆ ಪಾವತಿದಾರರಿಗಂತೂ ಪಾನ್ ಕಾರ್ಡ್ ಮುಖ್ಯ ದಾಖಲೆಯಾಗಿದೆ. ಇನ್ನುಮುಂದೆ ನೀವು ನಿಮ್ಮ ಪಾನ್ ಕಾರ್ಡ್ ಅನ್ನು ಕಳೆದುಕೊಂಡರೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ನೀವು ಸುಲಭವಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಡೂಪ್ಲಿಕೇಟ್ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ನೀವು ಈ ಸುಲಭ ವಿಧಾನವನ್ನು ಅನುಸರಿಸುವ ಮೂಲಕ ನಕಲಿ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

ಪಾನ್ ಕಾರ್ಡ್ ಡೂಪ್ಲಿಕೇಟ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
*ಮೊದಲು PAN ಸೇವಾ ಪೋರ್ಟಲ್ ನ ಅಧಿಕೃತ ವೆಬ್ ಸೈಟ್ www.pan.utiitsl.com ಭೇಟಿನೀಡಿ.

*ನಂತರ ತೆರೆಯುವ ಪುಟದಲ್ಲಿ ಕಂಡುಬರುವ ನಿಯಮಗಳು ಮತ್ತು ಷರತ್ತುಗಳನ್ನು ಗಮನಿಸಿ.

*ನಂತರ ನಕಲು ಪ್ಯಾನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ

Join Nadunudi News WhatsApp Group

*ಇದಕ್ಕಾಗಿ ನಿಮ್ಮ ಪ್ಯಾನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕಾಗುತ್ತದೆ.

*ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

*ನಂತರ ನಿಮ್ಮನ್ನು ಪಾವತಿಗಳ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

*ಒಮ್ಮೆ ನೀವು ನಿಮ್ಮ ಆದ್ಯತೆಯ ಮೋಡ್ ಅನ್ನು ಬಳಸಿಕೊಂಡು ಪಾವತಿಯನ್ನು ಮಾಡಿದರೆ, ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ.

*ಅರ್ಜಿ ಶುಲ್ಕವಾಗಿ ರೂ. 110 ಪಾವತಿಸಬೇಕಾಗುತ್ತದೆ.

*ನಂತರ ನೀವು PAN ಕಾರ್ಡ್ ಮರುಮುದ್ರಣಕ್ಕಾಗಿ ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.

Pan Card Download By Using Aadhaar Number
Image Credit: Indiafilings

ನಕಲಿ ಪಾನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು
•ಆಧಾರ್ ಕಾರ್ಡ್
•ಮತದಾರರ ಗುರುತಿನ ಚೀಟಿ
•ಚಾಲನಾ ಪರವಾನಿಗೆ
•ಪಾಸ್ಪೋರ್ಟ್
•ಪಡಿತರ ಚೀಟಿ
•ಜನ್ಮ ದಿನಾಂಕದ ಪುರಾವೆಗಾಗಿ ಸ್ವಯಂ ದೃಢೀಕರಿಸಿದ ಪ್ರತಿ
•ಮೂಲ PAN ಕಾರ್ಡ್‌ ನ ಸ್ವಯಂ ದೃಢೀಕರಿಸಿದ ಪ್ರತಿ

Join Nadunudi News WhatsApp Group