Pan Card For Minor: ನಿಮ್ಮ ಮಗುವಿನ ಹೆಸರಿನಲ್ಲಿ ಪಾನ್ ಕಾರ್ಡ್ ಮಾಡಿಸುವುದು ಹೇಗೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಈ ರೀತಿಯಾಗಿ ನಿಮ್ಮ ಮಗುವಿನ ಹೆಸರಿನಲ್ಲಿ ಪಾನ್ ಕಾರ್ಡ್ ಮಾಡಿಸಿ.

Pan Card For Minor New Update: ಪ್ರಸ್ತುತ ದೇಶದಲ್ಲಿ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಕೂಡ ಬಹಳ ಮುಖ್ಯವಾಗಿದೆ. ಭಾರತೀಯ ಪ್ರಜೆಯಾದ ಪ್ರತಿಯೊಬ್ಬರೂ ಕೂಡ ಈ ಎರಡೂ ದಾಖಲೆಗಳನ್ನು ID ಪುರಾವೆಯಾಗಿ ಬಳಸುತ್ತಾರೆ. ಯಾವುದೇ ಸರ್ಕಾರೀ ಅಥವಾ ಸರ್ಕಾರೇತರ ಕೆಲಸಗಳಿಗೆ ಪಾನ್ ಕಾರ್ಡ್ ಅತಿ ಅಗತ್ಯವಾಗಿದೆ. .

ಇನ್ನು PAN ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತದೆ. ಪಾನ್ ಕಾರ್ಡ್ ಮುಖ್ಯವಾಗಿ ಆದಾಯ ತೆರಿಗೆ ಪಾವತಿದಾರರಿಗೆ ಅಗತ್ಯವಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ ನಾವು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಸಾಧ್ಯವಿಲ್ಲ. ಇಂದಿನ ಕಾಲದಲ್ಲಿ ಅಪ್ರಾಪ್ತರಿಗೂ ಪಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.

Pan Card For Minor New Update
Image Credit: Informal Newz

ಅಪ್ರಾಪ್ತ ಮಕ್ಕಳಿಗೆ ಪಾನ್ ಕಾರ್ಡ್ ಮಾಡಲು ನಿಯಮಗಳೇನು..?
ಈಗ ಅಪ್ರಾಪ್ತ ವಯಸ್ಕರಿಗೂ ಪ್ಯಾನ್ ಕಾರ್ಡ್ ಮಾಡಬಹುದು. ಆದಾಯ ಇಲಾಖೆಯು ಅಪ್ರಾಪ್ತರು ಪಾನ್ ಕಾರ್ಡ್ ಹೊಂದಲು ಅವಕಾಶವನ್ನು ಮಾಡಿಕೊಟ್ಟಿದೆ. ಅದಾಗ್ಯೂ, ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ಅಪ್ರಾಪ್ತ ವಯಸ್ಕರು ಸ್ವಂತ ಪಾನ್ ಕಾರ್ಡ್ ಮಾಡುವಂತಿಲ್ಲ. ಅಪ್ರಾಪ್ತ ವಯಸ್ಕರ ಪ್ಯಾನ್ ಕಾರ್ಡ್‌ ಗೆ ಪೋಷಕರು ಮಾತ್ರ ಅರ್ಜಿ ಸಲ್ಲಿಸಬಹುದು. ಅಪ್ರಾಪ್ತರು ಪಾನ್ ಕಾರ್ಡ್ ಅನ್ನು ಹೊಂದುವುದು ಹೇಗೆ ಸಾಧ್ಯ..? ಅಪ್ರಾಪ್ತ ಮಕ್ಕಳಿಗೆ ಪಾನ್ ಕಾರ್ಡ್ ಮಾಡಲು ನಿಯಮಗಳೇನು..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಅಪ್ರಾಪ್ತ ಮಕ್ಕಳಿಗೆ ಪಾನ್ ಕಾರ್ಡ್ ಏಕೆ ಅಗತ್ಯವಿದೆ..?
*ಅಪ್ರಾಪ್ತ ವಯಸ್ಕನು ಹೂಡಿಕೆ ಮಾಡಿದರೆ ಅವನು ಪ್ಯಾನ್ ಕಾರ್ಡ್ ಹೊಂದಿರುವುದು ಅವಶ್ಯಕ.

*ಪೋಷಕರ ಹೂಡಿಕೆ ಯೋಜನೆಯಲ್ಲಿ ಅಪ್ರಾಪ್ತ ನಾಮಿನಿ ಇದ್ದರೂ, ಅಪ್ರಾಪ್ತರ ಪ್ಯಾನ್ ಕಾರ್ಡ್ ಸಹ ಅಗತ್ಯ.

Join Nadunudi News WhatsApp Group

*ಅಪ್ರಾಪ್ತರ ಬ್ಯಾಂಕ್ ಖಾತೆ ತೆರೆಯುವಾಗ ಪ್ಯಾನ್ ಕಾರ್ಡ್ ಕೂಡ ಅಗತ್ಯ.

*ಅಪ್ರಾಪ್ತ ವಯಸ್ಕನು ಯಾವುದೇ ವಿಧಾನದಿಂದ ಹಣವನ್ನು ಗಳಿಸಿದರೂ, ಪ್ಯಾನ್ ಕಾರ್ಡ್ ಅಗತ್ಯವಿದೆ.

Pan Card For Minor
Image Credit: Maharashtranama

ನಿಮ್ಮ ಮಗುವಿನ ಹೆಸರಿನಲ್ಲಿ ಪಾನ್ ಕಾರ್ಡ್ ಮಾಡಿಸುವುದು ಹೇಗೆ..?
•ನಿಮ್ಮ ಮಗುವಿನ ಹೆಸರಿನಲ್ಲಿ ಪಾನ್ ಕಾರ್ಡ್ ಮಾಡಿಸಲು ಮೊದಲು NSDL ನ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಿ.

•ಈಗ ಇಲ್ಲಿ ನೀವು ಫಾರ್ಮ್ 49A ಅನ್ನು ಭರ್ತಿ ಮಾಡಬೇಕು. ಈ ಫಾರ್ಮ್ ಅನ್ನು ಭರ್ತಿ ಮಾಡುವ ಮೊದಲು ನೀವು ಸೂಚನೆಗಳನ್ನು ಎಚ್ಚರಿಕೆಯಿಂದ ಓದಬೇಕು.

•ಇದರ ನಂತರ ನೀವು ಅಪ್ರಾಪ್ತ ವಯಸ್ಸಿನ ಪ್ರಮಾಣಪತ್ರ, ಪೋಷಕರ ಸಹಿ ಮತ್ತು ಪೋಷಕರ ಫೋಟೋವನ್ನು ಅಪ್‌ ಲೋಡ್ ಮಾಡಬೇಕಾಗುತ್ತದೆ.

•ಈಗ ಪ್ಯಾನ್ ಕಾರ್ಡ್ ಮಾಡಲು ನೀವು ರೂ. 107 ಶುಲ್ಕವನ್ನು ಪಾವತಿಸಬೇಕಾಗುತ್ತದೆ.

•ನೀವು ಶುಲ್ಕವನ್ನು ಪಾವತಿಸಿದ ತಕ್ಷಣ ನೀವು ರಶೀದಿ ಸಂಖ್ಯೆಯನ್ನು ಪಡೆಯುತ್ತೀರಿ.

•ರಶೀದಿ ಸಂಖ್ಯೆಯ ಮೂಲಕ ನೀವು ಪ್ಯಾನ್ ಕಾರ್ಡ್ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.

PAN Card for Minor Application Process
Image Credit: Loksatta

Join Nadunudi News WhatsApp Group