Pan Card Link: ಆಧಾರ್ ಮತ್ತು ಪಾನ್ ಕಾರ್ಡ್ ಇದ್ದವರಿಗೆ ಮೇ 31 ಕೊನೆಯ ದಿನಾಂಕ, ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ.

ಈ ರೀತಿಯಾಗಿ ನಿಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿ

Pan Card Link To Aadhaar: ದೇಶದಲ್ಲಿ ಆದಾಯ ತೆರಿಗೆ ಪಾವತಿಗೆ Pan Card ಮುಖ್ಯ ಎನ್ನುವ ಬಗ್ಗೆ ಎಲರಿಗೂ ತಿಳಿದೇ ಇದೆ. ಈಗಾಗಲೇ ಕೇಂದ್ರ ಸರ್ಕಾರ Pan Card ಗೆ Aadhaar Link ಮಾಡಿಸುವಂತೆ ಜನಸಾಮಾನ್ಯರಿಗೆ ಸೂಚನೆ ನೀಡಿತ್ತು. 2023 ರ ಜೂನ್ ನಲ್ಲಿ ಪಾನ್ ಆಧಾರ್ ಲಿಂಕ್ ಗೆ ಸರ್ಕಾರ ವಿಧಿಸಿದ ಗಡುವು ಮುಗಿದಿದೆ.

ಇನ್ನು ಈ ದಿನಾಂಕದ ಬಳಿಕ ಪಾನ್ ಆಧಾರ್ ಲಿಂಕ್ ಮಾಡಿಸಲು ದಂಡ ಪಾವತಿಸಬೇಕಾಗಿದೆ. ಇನ್ನು ಕೂಡ ಸಾಕಷ್ಟು ಜನರು ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸದೇ ಇದ್ದಾರೆ. ಸದ್ಯ ಆದಾಯ ಇಲಾಖೆ ಆಧಾರ್ ಪಾನ್ ಲಿಂಕ್ ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ.

Pan Card Link To Aadhaar
Image Credit: News 18

ಆಧಾರ್ ಮತ್ತು ಪಾನ್ ಕಾರ್ಡ್ ಇದ್ದವರಿಗೆ ಮೇ 31 ಕೊನೆಯ ದಿನಾಂಕ
ಆದಾಯ ತೆರಿಗೆ ಇಲಾಖೆಯು 2023-24 ರ ಅಧಿವೇಶನಕ್ಕೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದ ಗ್ರಾಹಕರಿಗೆ ನೋಟಿಸ್ ಕಳುಹಿಸುತ್ತಿದೆ. ಆಧಾರ್- ಪ್ಯಾನ್ ಅನ್ನು ಲಿಂಕ್ ಮಾಡಲು ಗಡುವು ಜೂನ್ 2023 ರ ವರೆಗೆ ಇತ್ತು. ಇದಾದ ನಂತರ ಹೇಗಾದರೂ ವ್ಯಾಪಾರ ವಹಿವಾಟಿನ ಮೇಲೆ TDS ಕಡಿತಗೊಳಿಸಬೇಕು. ಸಾಮಾನ್ಯವಾಗಿ, ವ್ಯಾಪಾರ ಸಂಸ್ಥೆಗಳು ಆಧಾರ್- ಪ್ಯಾನ್ ಲಿಂಕ್ ಆಧಾರದ ಮೇಲೆ 0.1 ರಿಂದ 10 ಪ್ರತಿಶತ ಟಿಡಿಎಸ್ ಅನ್ನು ಕಡಿತಗೊಳಿಸುತ್ತವೆ.

ಆದರೆ ಆಧಾರ್ – ಪ್ಯಾನ್ ಲಿಂಕ್ ಅನ್ನು ಹೊಂದಿರದ ಜನರು 20 ಪ್ರತಿಶತದವರೆಗೆ ತೆರಿಗೆ ಬೇಡಿಕೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ತೆರಿಗೆ ಕಡಿತಗಾರರಿಗೆ ಇಲಾಖೆಯಿಂದ ನೋಟಿಸ್‌ ಗಳು ಬರುತ್ತಿವೆ. ಮೇ 31 2024 ಆಧಾರ್ ಪ್ಯಾನ್ ಲಿಂಕ್ ಗೆ ಕೊನೆಯ ಗಡುವಾಗಿದೆ. ಮೇ 31 ರೊಳಗೆ ಪ್ಯಾನ್ ಸಂಖ್ಯೆಯನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡದಿದ್ದರೆ TDS ಅನ್ನು ದುಪ್ಪಟ್ಟು ಕಡಿತಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ತಿಳಿಸಿದೆ.

Aadhar Card And Pan Card Link
Image Credit: Businessinsider

ಈ ರೀತಿಯಾಗಿ ನಿಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿ
•ಆದಾಯ ತೆರಿಗೆ ಇಲಾಖೆಯ ವೆಬ್‌ ಸೈಟ್ incometaxindiaefiling.gov.in ಗೆ ಭೇಟಿ ನೀಡಿ.

Join Nadunudi News WhatsApp Group

•ಈಗ ತೆರೆಯುವ ಪುಟದ ಎಡಭಾಗದಲ್ಲಿ ಕಾಣಿಸಿಕೊಳ್ಳುವ ‘Quick links’ ವಿಭಾಗದಲ್ಲಿ ‘Link Aadhaar’ ಆಯ್ಕೆಯನ್ನು ಕ್ಲಿಕ್ ಮಾಡಿ.

•ಈಗ ಪ್ಯಾನ್, ಆಧಾರ್ ಸಂಖ್ಯೆಯನ್ನು ನಮೂದಿಸಿ ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ಇತರ ಅಗತ್ಯ ಮಾಹಿತಿಯನ್ನೂ ನೀಡಿ.

•UIDPAN 10-ಅಂಕಿಯ PAN ಕಾರ್ಡ್ ಸಂಖ್ಯೆ, 12-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ಒಂದು ಸ್ಪೇಸ್ ಕೊಟ್ಟು 567678 ಅಥವಾ 56161 ಗೆ SMS ಕಳುಹಿಸಿ.

•ಅದರ ನಂತರ ನಿಮಗೆ SMS ಮೂಲಕ ಪ್ಯಾನ್-ಆಧಾರ್ ಲಿಂಕ್ ಸ್ಥಿತಿಯ ಬಗ್ಗೆ ತಿಳಿಸಲಾಗುತ್ತದೆ.

•ಜನ್ಮ ದಿನಾಂಕ ಎರಡು ದಾಖಲೆಯಲ್ಲಿ ಹೊಂದಾಣಿಕೆ ಆಗಿದ್ದರೆ ಮಾತ್ರ ನಿಮ್ಮ ಪಾನ್ ಆಧಾರ್ ನೊಂದಿಗೆ ಯಾವುದೇ ಸಮಸ್ಯೆಯಿಲ್ಲದೆ ಲಿಂಕ್ ಆಗುತ್ತದೆ.

Aadhar And Pan Link Last date
Image Credit: India Today

Join Nadunudi News WhatsApp Group