Fake Pan Card: ಪಾನ್ ಕಾರ್ಡ್ ಬಳಸುವವರು ಈ ತಪ್ಪು ಮಾಡಿದರೆ ಇನ್ಮುಂದೆ 10000 ರೂ ದಂಡ, ತೆರಿಗೆ ಇಲಾಖೆಯ ಆದೇಶ.

ಪಾನ್ ಕಾರ್ಡ್ ಬಳಸುವವರಿಗೆ ತೆರಿಗೆ ಇಲಾಖೆಯಿಂದ ಹೊಸ ರೂಲ್ಸ್

Double Pan Card: ದೇಶದಲ್ಲಿ ಪಾನ್ ಕಾರ್ಡ್ (Pan Card) ಬಳಕೆ ಮಾಡದೇ ಇರುವವರ ಸಂಖ್ಯೆ ಬಹಳ ಕಡಿಮೆ ಯಾಕೆಂದರೆ ಬ್ಯಾಂಕಿಂಗ್ ವ್ಯವಹಾರಕ್ಕಾಗಲಿ, ಯಾವುದೇ ತೆರಿಗೆ ವಿಚಾರಕ್ಕಾಗಲಿ, ಹಾಗು ಇನ್ನಿತರ ಕೆಲವು ಪುಮುಖ ಕೆಲಸಗಳಿಗೆ ಪಾನ್ ಕಾರ್ಡ್ ಕಡ್ಡಾಯವಾಗಿದೆ ಅಷ್ಟೇ ಅಲ್ಲದೆ ಪಾನ್ ಕಾರ್ಡ್ ಅನ್ನು ಗುರುತಿನ ಪುರಾವೆ ಆಗಿಯೂ ಬಳಸಲಾಗುತ್ತದೆ. ಪಾನ್ ಕಾರ್ಡ್ ಇದು 10 ಅಂಕಿಗಳ ವಿಶಿಷ್ಟ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದ್ದು, ಆದಾಯ ತೆರಿಗೆ ಇಲಾಖೆಯಿಂದ ನೋಂದಾಯಿಸಲ್ಪಟ್ಟಿದೆ.

ಪಾನ್ ಕಾರ್ಡ್ ಬಳಕೆಗೂ ಕೆಲವು ಪ್ರಮುಖ ನಿಯಮಗಳಿವೆ ಅದನ್ನು ನಾವು ತಿಳಿದುಕೊಳ್ಳದೆ ತಪ್ಪು ಮಾಡಿದರೆ ದಂಡ ಕಟ್ಟಬೇಕಾದೀತು. ಹಾಗಾಗಿ ಆದಾಯ ತೆರಿಗೆ ಕಾಯ್ದೆಯಲ್ಲಿ ಇದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ದಂಡಗಳ ಬಗ್ಗೆ ತಿಳಿದುಕೊಳ್ಳಬೇಕು.

Pan Card Rules
Image Credit: Original Source

ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಇಟ್ಟುಕೊಂಡರೆ ಅದು ಕಾನೂನು ಬಾಹಿರ ಅಪರಾಧ

ಪಾನ್ ಕಾರ್ಡ್ ಇದು ಬಹಳ ವಿಶೇಷವಾದ ಗುರುತಿನ ಚೀಟಿ ಹಾಗು ವಿಶಿಷ್ಟ ಸಂಖ್ಯೆಯನ್ನು ಹೊಂದಿರುವುದಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ಒಂದೇ ಪ್ಯಾನ್ ಕಾರ್ಡ್ ನೀಡಲಾಗುತ್ತದೆ. ಅಲ್ಲದೆ ಅದನ್ನು ವರ್ಗಾಯಿಸಲಾಗುವುದಿಲ್ಲ. ಆದಾಯ ತೆರಿಗೆ ಇಲಾಖೆಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಕೇವಲ ಒಂದು ಪ್ಯಾನ್ ಸಂಖ್ಯೆಯನ್ನು ಹೊಂದಿರಬೇಕು. ಒಬ್ಬ ವ್ಯಕ್ತಿ ಅಥವಾ ಕಂಪನಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಸಂಖ್ಯೆಯನ್ನು ಹೊಂದಿರುವುದು ಕಾನೂನುಬಾಹಿರವಾಗಿದೆ.

ಸಿಕ್ಕಿಬಿದ್ದರೆ, ಆದಾಯ ತೆರಿಗೆ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳಬಹುದು ಅಥವಾ ಹಣಕಾಸಿನ ದಂಡವನ್ನು ವಿಧಿಸಬಹುದು. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ, ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 272B ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸೆಕ್ಷನ್ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವ ವ್ಯಕ್ತಿಗೆ 10,000 ರೂ.ಗಳ ದಂಡವನ್ನು ವಿಧಿಸಬಹುದು. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳಿದ್ದಲ್ಲಿ, ವ್ಯಕ್ತಿಯು ಎರಡನೇ ಪಾನ್ ಕಾರ್ಡ್ ಅನ್ನು ಸರೆಂಡರ್ ಮಾಡಬೇಕು.

Join Nadunudi News WhatsApp Group

Pan Card Latest Update
Image Credit: business-standard

ಪಾನ್ ಕಾರ್ಡ್ ಸರೆಂಡರ್ ಮಾಡುವ ಪ್ರಕ್ರಿಯೆ

ಪಾನ್ ​ ಕಾರ್ಡ್ ಅನ್ನು ಸರೆಂಡರ್ ಮಾಡಲು, ಆನ್‌ಲೈನ್ ಅಥವಾ ಆಫ್‌ಲೈನ್ ಮೋಡ್ ಆಯ್ಕೆ ಮಾಡಬಹುದು. ಆನ್‌ಲೈನ್‌ ನಲ್ಲಿ ಪಾನ್ ಕಾರ್ಡ್ ಅನ್ನು ಸರೆಂಡರ್ ಮಾಡಲು, ಆದಾಯ ತೆರಿಗೆ ಇಲಾಖೆಯ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿ ಅಥವಾ https://www.tin-nsdl.com/faqs/pan/faq-pan-cancellation.html ಕ್ಲಿಕ್ ಮಾಡಿ, ಫಾರ್ಮ್‌ನ ಮೇಲ್ಭಾಗದಲ್ಲಿ ನೀವು ಪ್ರಸ್ತುತ ಬಳಸುತ್ತಿರುವ PAN ನಮೂದಿಸುವ ಮೂಲಕ PAN ಬದಲಾವಣೆ ವಿನಂತಿಯ ಅರ್ಜಿ ನಮೂನೆ ಸಲ್ಲಿಸಿ, ಫಾರ್ಮ್ 11 ಮತ್ತು ಸಂಬಂಧಿತ ಪಾನ್ ಕಾರ್ಡ್‌ನ ಪ್ರತಿಯನ್ನು ಫಾರ್ಮ್‌ನೊಂದಿಗೆ ಪ್ರಸ್ತುತಪಡಿಸಬೇಕು.

ಆಫ್‌ಲೈನ್ ಸರೆಂಡರ್ ಪ್ರಕ್ರಿಯೆ

PAN ಅನ್ನು ಆಫ್‌ಲೈನ್‌ನಲ್ಲಿ ಸಲ್ಲಿಸಲು ಫಾರ್ಮ್ 49A ಅನ್ನು ಭರ್ತಿ ಮಾಡಿ. ಸರೆಂಡರ್ ಮಾಡಬೇಕಾದ ಪಾನ್ ಸಂಖ್ಯೆಯನ್ನು ನಮೂದಿಸಿ ಮತ್ತು ಫಾರ್ಮ್ ಅನ್ನು UTI ಅಥವಾ ಎನ್‌ಎಸ್‌ಡಿಎಲ್ ಟಿನ್ ಫೆಸಿಲಿಟೇಶನ್ ಸೆಂಟರ್‌ಗೆ ಸಲ್ಲಿಸಿ, ನಿಮ್ಮ ಅಧಿಕಾರ ವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಗೆ ಪತ್ರವನ್ನು ಬರೆಯಿರಿ, ಪಾನ್ ಕಾರ್ಡ್ ನಲ್ಲಿರುವ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ. www.incometaxindiaefiling.gov.in ನಲ್ಲಿ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಅಧಿಕಾರಿಯನ್ನು ನೀವು ನೋಡಿಕೊಳ್ಳಬಹುದು. NSDL TIN ಫೆಸಿಲಿಟೇಶನ್ ಸೆಂಟರ್‌ನಿಂದ ಸ್ವೀಕರಿಸಿದ ಸ್ವೀಕೃತಿ ಪ್ರತಿಯೊಂದಿಗೆ ನಕಲಿ PAN ನ ನಕಲನ್ನು ಲಗತ್ತಿಸಿ ಸಲ್ಲಿಸಿ. ಈ ವಿಧಾನದ ಮೂಲಕ ನಿಮ್ಮ ಎರಡನೇ ಪಾನ್ ಕಾರ್ಡ್ ಅನ್ನು ಸರೆಂಡರ್ ಮಾಡಬಹುದಾಗಿದೆ .

Join Nadunudi News WhatsApp Group