Parents And Children: ಹೆತ್ತವರನ್ನ ನೋಡಿಕೊಳ್ಳದ ಮಕ್ಕಳನ್ನ ಜೈಲಿಗೆ ಹಾಕಬಹುದು, ಕಾನೂನಿನ ಬಗ್ಗೆ ತಿಳಿದುಕೊಳ್ಳಿ.

ವೃದ್ದಾಪ್ಯದ ಸಮಯದಲ್ಲಿ ಹೆತ್ತವರನ್ನ ನೋಡಿಕೊಳ್ಳದ ಮಕ್ಕಳನ್ನ ಜೈಲಿಗೆ ಹಾಕುವ ಅಧಿಕಾರ ಪೋಷಕರಿಗೆ ಇರುತ್ತದೆ.

Indian Law: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ತಂದೆ ತಾಯಿಯನ್ನು (Parents) ನಿರ್ಲಕ್ಷಿಸುತ್ತಾರೆ. ತಂದೆ ತಾಯಿಯನ್ನು ಚನ್ನಾಗಿ ನೋಡಿಕೊಳ್ಳದೆ ಅವರನ್ನು ಕಡೆಗಣಿಸುತ್ತಾರೆ. ತಂದೆ ತಾಯಿಯ ಆರೈಕೆ ಮಕ್ಕಳಿಗೆ ಭಾರ ಎನಿಸುತ್ತಿದೆ. ತಂದೆ ತಾಯಿಯನ್ನು ಮಕ್ಕಳು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ.

ದೇಶದಲ್ಲಿ ವೃದ್ದಾಶ್ರಮದ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಮಕ್ಕಳು ಇದ್ದರು ಕೂಡ ಪೋಷಕರು ಅನಾಥರಾಗಿ ಬದುಕು ನಡೆಸುತ್ತಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ನಿರ್ಧಾರವನ್ನು ಘೋಷಿಸಿದೆ. ಇನ್ನು ಮುಂದೆ ಪೋಷಕರನ್ನು ನೋಡಿಕೊಳ್ಳದ ಮಕ್ಕಳ ಮೇಲೆ ಪೋಷಕರು ಕಾನೂನು ಕ್ರಮ ಕೈಗೊಳ್ಳಬಹುದು.

Parents And Children indian law
Image Source: India Today

ಪೋಷಕರನ್ನು ನೋಡಿಕೊಳ್ಳದ ಮಕ್ಕಳಿಗೆ ಕಾನೂನಿನ ಮೂಲಕ ಶಿಕ್ಷೆ
ಪೋಷಕರಿಗೆ ಮಕ್ಕಳು ಆರ್ಥಿಕವಾಗಿ ನೆರವು ನೀಡದಿದ್ದರೆ ಅಥವಾ ಪೋಷಕರ ಆಸ್ತಿಯನ್ನು ಪಡೆದು ಪೋಷಕರನ್ನು ನೋಡಿಕೊಳ್ಳದಿದ್ದರೆ ಅಂತಹ ಮಕ್ಕಳಿಗೆ ಕಾನೂನು ಶಿಕ್ಷೆ ವಿಧಿಸುತ್ತದೆ. ಸೆಕ್ಷನ್ 125 CRPC ಅಡಿಯಲ್ಲಿ ಮಕ್ಕಳ ವಿರುದ್ಧ ಪೋಷಕರು ಕೇಸ್ ದಾಖಲಿಸಬಹುದು.

Parents And Children indian law
Image Source: Vijay Karnataka

ದಂಡದ ಜೊತೆಗೆ ಮೂರು ವರ್ಷ ಜೈಲು ಶಿಕ್ಷೆ
ಪೋಷಕರು ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಲಯ ನಿರ್ಧಾರ ಕೈಗೊಳ್ಳುತ್ತದೆ. ಮ್ಯಾಜಿಸ್ಟ್ರೇಟ್ ಪೋಷಕರಿಗೆ ಆರ್ಥಿಕ ನೆರವು ನೀಡುವಂತೆ ಮಕ್ಕಳಿಗೆ ಕಾನೂನು ಸೂಚಿಸುತ್ತದೆ. ಕೋರ್ಟ್ ನೀಡಿದ ತೀರ್ಪನ್ನು ಮಕ್ಕಳು ಪಾಲಿಸದಿದ್ದರೆ ಮಕ್ಕಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

 

Join Nadunudi News WhatsApp Group

ಮಕ್ಕಳು ಪೋಷಕರಿಗೆ ಆರ್ಥಿಕ ನೆರವು ನೀಡದೆ ಹೋದರೆ ಮಕ್ಕಳಿಗೆ ಜೈಲು ಶಿಕ್ಷೆಯಾಗಬಹುದು. ಕೋರ್ಟ್ ನೀಡಿದ ತೀರ್ಪನ್ನು ನಿರ್ಲಕ್ಷಿಸಿದವರಿಗೆ ನೋಟಿಸ್ ನೀಡಲಾಗುತ್ತದೆ. ಮೂರು ವರ್ಷ ಜೈಲು ಶಿಕ್ಷೆ ಹಾಗೂ 5000 ರೂಪಾಯಿ ದಂಡವನ್ನು ಕೋರ್ಟ್ ವಿಧಿಸುತ್ತದೆ.

Parents And Children indian law
Image Source: India Today

Join Nadunudi News WhatsApp Group