Love Marriage: ದೇಶಾದ್ಯಂತ ಪ್ರೇಮ ವಿವಾಹ ಆಗುವವರಿಗೆ ಹೊಸ ನಿಯಮ, ಇವರ ಒಪ್ಪಿಗೆ ಇದ್ದರೆ ಮಾತ್ರ ಸಾಧ್ಯ

ಪ್ರೇಮ ವಿವಾಹ ಮಾಡಿಕೊಳ್ಳುವವರಿಗೆ ಹೊಸ ಕಾನೂನು ಜಾರಿ.

Parents Approval For Love Marriage: ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹಗಳು(Love Marriage) ಹೆಚ್ಚಾಗಿ ನೆಡೆಯುತ್ತಿದೆ. ಕೆಲವರು ಮನೆಯವರ ಸಮ್ಮುಖದಲ್ಲಿ ಮದುವೆಯಾದರೆ ಇನ್ನು ಕೆಲವರು ಗುಟ್ಟಾಗಿ ಮದುವೆಯಾಗುತ್ತಾರೆ. ಮದುವೆ ವಯಸ್ಸು ದಾಟಿದ ಮೇಲೆ ಅವರಿಗೆ ಇಷ್ಟ ಆದವರನ್ನು ಮದುವೆಯಾಗಲು ಕಾನೂನಿನ ಪ್ರಕಾರ ಅವಕಾಶವಿದೆ.

ಆದರೆ ಲವ್ ಮ್ಯಾರೇಜ್ ಗಳು ಮಕ್ಕಳು ಚಿಕ್ಕವರಿದ್ದಾಗಿನಿಂದ ಸಾಕಿದ ಅಪ್ಪ ಅಮ್ಮನಿಗೆ ಬಹಳ ನೋವುಂಟು ಮಾಡುತ್ತದೆ. ಪ್ರೇಮ ವಿವಾಹದಿಂದ ಅನಗತ್ಯವಾದ ಮನಸ್ತಾಪಗಳು, ನೋವು, ವಿವಾದಗಳು ಉಂಟಾಗುತ್ತದೆ. ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನೆಡೆಸುತ್ತಿದೆ.

parents permission is mandatory for love marriage
Image Credit: Postsen

ಪ್ರೇಮ ವಿವಾಹ ಮಾಡಿಕೊಳ್ಳುವವರಿಗೆ ಹೊಸ ಕಾನೂನು ಜಾರಿ
ಈಗಿನ ಕಾಲದಲ್ಲಿ ಅನೇಕ ಯುವಕ ಯುವತಿಯರು ತಾವು ಪ್ರೀತಿಸಿದವರನ್ನು ಮದುವೆಯಾಗಲು ಮನೆಯಿಂದ ದೂರ ಓಡಿ ಹೋಗುತ್ತಾರೆ. ಅವರಿಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಆಲೋಚನೆ ಮಾತ್ರ ಇರುತ್ತದೆ, ಕಷ್ಟಪಟ್ಟು ಪ್ರೀತಿಯಿಂದ ಸಾಕಿದ ಪೋಷಕರ ಬಗ್ಗೆ ಒಂದು ಕ್ಷಣ ಕೂಡ ಆಲೋಚನೆ ಮಾಡುದಿಲ್ಲ. ಯುವಕ ಯುವತಿಯರು ಪೋಷಕರನ್ನು ನಿರ್ಲಕ್ಷಿಸುತ್ತಾರೆ. ಈ ಕಾರಣದಿಂದಾಗಿ ಗುಜರಾತ್ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.
ಇನ್ನುಮುಂದೆ ಲವ್ ಮ್ಯಾರೇಜ್ ಗೆ ಪೋಷಕರ ಅನುಮತಿ ಕಡ್ಡಾಯ
ಇದೀಗ ಗುಜರಾತ್ ಸರ್ಕಾರ ಲವ್ ಮ್ಯಾರೇಜ್ ಆಗುವವರಿಗೆ ಹೊಸ ಮಾರ್ಗಸೂಚಿಯನ್ನು   ಹೊರಡಿಸಿದೆ. ಸರ್ಕಾರ ಲವ್ ಮ್ಯಾರೇಜ್ ಗಳಿಗೆ ತಂದೆ ತಾಯಿಯ ಅನುಮತಿಯನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ.

love marriage new rules update
Image Credit: Timesnownews

ಪೋಷಕರ ಅನುಮತಿಯ ಮೇರೆಗೆ ಪ್ರೇಮವಿವಾಹಗಳು ನಡೆಯುವಂತೆ ಪಾಟಿದಾರ್ ಸಮುದಾಯದಿಂದ ಬರುತ್ತಿರುವ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಸಿ ಎಂ ಭೂಪೇಂದ್ರ ಪಟೇಲ್ ಅವರು ಮೆಹಾಸ್ಸಾದಲ್ಲಿ ಪಾಟೀದಾರ್ ಸಮುದಾಯವನ್ನು ಪ್ರತಿನಿಧಿಸುವ ಸರ್ದಾರ್ ಪಟೇಲ್ ಗ್ರೂಪ್ ಆಯೋಜನೆ ಮಾಡಿದ ಸಭೆಯಲ್ಲಿ ಇನ್ನುಮುಂದೆ ಪ್ರೇಮ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂಬ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರೀತಿಸಿದವರನ್ನು ಮದುವೆಯಾಗಲು ಮನೆಬಿಟ್ಟು ಹೋಗುತಿದ್ದರೆ. ಇಂತಹ ಘಟನೆಗಳ ಬಗ್ಗೆ ನಾವು ಅಧ್ಯಯನ ನೆಡೆಸಬೇಕು ಎಂದು ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ನನಗೆ ಹೇಳಿದ್ದಾರೆ. ಆದ್ದರಿಂದ ನಾವು ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ವ್ಯವಸ್ಥೆಯನ್ನು ಜಾರಿಗೆ ತರಬಹುದೇ ಎಂಬುದರ ಬಗ್ಗೆ ನಾವು ಅಧ್ಯಯನವನ್ನು ನಡೆಸುತ್ತೇವೆ.

Join Nadunudi News WhatsApp Group

ಸಂವಿಧಾನಿಕವಾಗಿ ಅನುಮತಿ ಸಿಕ್ಕರೆ ಜಾರಿಗೆ ತರುತ್ತೇವೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮಾಹಿತಿ ನೀಡಿದ್ದಾರೆ. ಸಿಎಂ ಪ್ರಸ್ತಾಪಕ್ಕೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಬೆಂಬಲ ನೀಡುತ್ತಿದ್ದಾರೆ.ಈ ಮಸೂದೆಯನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದರೆ ಅದನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಘೋಷಣೆ ಮಾಡಿದ್ದಾರೆ.

parents approval for love marriage
Image Credit: Lovebackduas

ಇದಲ್ಲದೆ ಬಲವಂತದ ಧರ್ಮದ ಮತಂತರವನ್ನು ಹತ್ತಿಕ್ಕಲು ಗುಜರಾತ್ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಮದುವೆಯ ಹೆಸರಿನಲ್ಲಿ ಆಗುವ ಮೋಸದ ಮತಾಂತರಗಳ ನಿಷೇಧ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ನಿಯಮವನ್ನು ಜಾರಿಗೆ ತಂದಿದೆ.
ಗುಜರಾತ್ ಹೈಕೋರ್ಟ್ ಈ ವಿವಾದಾತ್ಮಕ ಕಾನೂನಿನ ಕೆಲವು ಸೆಕ್ಷನ್‌ಗಳಿಗೆ ತಡೆ ನೀಡಿದೆ. ಗುಜರಾತ್ ಹೈಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು, ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ.

Join Nadunudi News WhatsApp Group