Truecaller: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ, ಟ್ರೂಕಾಲರ್ ಜೊತೆ ಕೈಜೋಡಿಸಿದ ಸರ್ಕಾರ.

ಟ್ರೂಕಾಲರ್ ಜೊತೆ ಕೈಜೋಡಿಸಿದ ರಾಜ್ಯ ಸರ್ಕಾರ

Partnership With Truecaller: ಸದ್ಯ ಎಲ್ಲೆಡೆ ಆನ್ಲೈನ್ ವಂಚನೆ ಹೆಚ್ಚುತ್ತಿದೆ. ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಮೂಲಕ ವಂಚನೆ ಮಾಡಲು ವಞ್ಚಕರು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ದೇಶದಲ್ಲಿ ಆನ್ಲೈನ್ ವಂಚನೆಯ ಮೂಲಕ ಜನರು ಸಾಕಷ್ಟು ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಎಷ್ಟೇ ಜಾಗೃತಿ ವಹಿಸದರು ಕೂಡ ಸೈಬರ್ ಅಪರಾಧಿಗಳು ಒಂದಲ್ಲ ಒಂದು ವಿಧಾನದ ಮೂಲಕ ವಂಚನೆ ಎಸಗುತ್ತಾ ಇರುತ್ತಾರೆ.

Karnataka Government Partners with Truecaller
Image Credit: Economic Times

ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಇನ್ನು ಸರ್ಕಾರ ಆನ್ಲೈನ್ ವಂಚನೆಯ ತಡೆಗಾಗಿ ಅದೆಷ್ಟೇ ಕ್ರಮ ಕೈಗೊಳ್ಳುತ್ತಿದ್ದರು ಕೂಡ ಯಾವುದು ಅಷ್ಟೊಂದು ಯಶಸ್ವಿಯಾಗುತ್ತಿಲ್ಲ. ಇದನೆಲ್ಲ ಗಮನಿಸಿದ ಸರ್ಕಾರ ಇದೀಗ ಹೊಸ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ ಸೈಬರ್ ಸುರಕ್ಷತೆಅಗ್ಗಿ ಸರ್ಕಾರ ಹೊಸ ಯೋಜನೆಯೇ ಹೂಡಿದೆ.

ಇದಕ್ಕಾಗಿ ಕರ್ನಾಟಕ ಸರ್ಕಾರ ಈ ಅಪ್ಲಿಕೇಶನ್ ನ ಜೊತೆಗೆ ಪಾಲುದಾರಿಕೆಗೆ ಮುಂದಾಗಿದೆ. ಇದೀಗ ನಾವು ಈ ಲೇಖನದಲ್ಲಿ ರಾಜ್ಯ ಸರ್ಕಾರ ಸೈಬರ್ ಕ್ರೈಮ್ ಗಳಿಗೆ ಬ್ರೇಕ್ ಹಾಕಲು ಯಾವ ರೀತಿಯ ನಿರ್ಧಾರವನ್ನು ಕೈಗೊಂಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಸೈಬರ್ ವಂಚನೆಯ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸುವುದು ಸರ್ಕಾರ ಮೂಲ ಉದ್ದೇಶವಾಗಿದೆ.

Partnership With Truecaller
Image Credit: inc42

ಟ್ರೂಕಾಲರ್ ಜೊತೆ ಕೈಜೋಡಿಸಿದ ರಾಜ್ಯ ಸರ್ಕಾರ
ಸೈಬರ್ ವಂಚನೆಯ ತಡೆಗಾಗಿ ಸರ್ಕಾರ ಟ್ರೂಕಾಲರ್ ಜೊತೆಗೆ ಕೆಲಸ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಸಂವಹನದಲ್ಲಿ ಜಾಗೃತಿ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಸರ್ಕಾರವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕರ್ನಾಟಕ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಟ್ರೂಕಾಲರ್, ಕಾಲರ್ ಐಡಿ ಮತ್ತು ಸ್ಪ್ಯಾಮ್-ಬ್ಲಾಕಿಂಗ್ ಅಪ್ಲಿಕೇಶನ್‌ ನೊಂದಿಗೆ ‘ಲೆಟರ್ ಆಫ್ ಇಂಟೆಂಟ್’ ಸಹಿ ಮಾಡುವ ಮೂಲಕ ಸರ್ಕಾರವು ಪಾಲುದಾರಿಕೆಯನ್ನು ಅಧಿಕೃತಗೊಳಿಸಿದೆ.

ಸಹಯೋಗವು ಸೈಬರ್ ಭದ್ರತೆಯ ಅರಿವನ್ನು ಹೆಚ್ಚಿಸಲು ಮತ್ತು ರಾಜ್ಯದಾದ್ಯಂತ ಸುರಕ್ಷಿತ ಡಿಜಿಟಲ್ ಸಂವಹನವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಅದರಂತೆ, ಆನ್‌ ಲೈನ್ ಸುರಕ್ಷತೆಯ ಅರಿವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಹಲವಾರು ಉಪಕ್ರಮಗಳನ್ನು ಟ್ರೂಕಾಲರ್ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ ಆ ಮೂಲಕ ನಾಗರಿಕರು ವಂಚನೆಗಳಿಗೆ ಬಲಿಯಾಗುವುದನ್ನು ತಡೆಯಲು ಪ್ರಾಯೋಗಿಕ ಸಲಹೆಯನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group