Passkey: ಈಗ ನಿಮ್ಮ ವಾಟ್ಸಾಪ್ ಗೆ ಹಾಕಿಸಿಕೊಳ್ಳಿ ಪಾಸ್ ಕೀ, ವಾಟ್ಸಾಪ್ ಬಳಸುವ ಜಾರಿಗೆ ಇನ್ನೊಂದು ಸೇವೆ.

ಇನ್ನಷ್ಟು ಸೇಫ್‌ ಆಗಲಿದೆ ವಾಟ್ಸಾಪ್, ಸೆಕ್ಯೂರಿಟಿಗಾಗಿ ಬರಲಿದೆ ಪಾಸ್‌ ಕೀ.

Whatsapp Passkey Feature: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯ ಹಾಗೂ ಪರಿಣಾಮಕಾರಿ ಎನಿಸಿ ಕೊಂಡಿರುವ ವಾಟ್ಸಾಪ್ (WhatsApp) ಬಳಕೆದಾರರ ಸುರಕ್ಷತೆಗಾಗಿ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಹಾಗೆ ಬಳಕೆದಾರರಿಗೆ ಪ್ರಯೋಜನವಾಗುವಂತಹ ಹೊಸ ಹೊಸ ಫೀಚರ್ ಗಳನ್ನೂ ಜಾರಿಗೆ ತರುತ್ತಿದೆ. ಇದೀಗ ವಾಟ್ಸಾಪ್ ಅನ್ನು ಹೆಚ್ಚಿನ ಬಳಕೆದಾರರು ಬಳಸುತ್ತಿರುದರಿಂದ ಅತ್ಯಂತ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತರಲಾಗುತ್ತಿದೆ.

ಫಿಶಿಂಗ್ ಹಾಗೂ ಸ್ಕ್ಯಾಮಿಂಗ್ ಪ್ರಯತ್ನಗಳ ಹೆಚ್ಚಳವನ್ನು ನೋಡಿದರೆ, ಆನ್ಲೈನ್ ನಲ್ಲಿ ಸುರಕ್ಷಿತವಾಗಿರಿಸಲು ಪಾಸ್ವರ್ಡ್ ಗಳು ಸಾಲುದಿಲ್ಲ ಹಾಗಾಗಿ ಗೂಗಲ್ (Google) ಆಪಲ್ ಹಾಗು ಇತರ ಟೆಕ್ ಸಂಸ್ಥೆಗಳು ಪಾಸ್ವರ್ಡ್ ಗಳನ್ನೂ ಬದಲಾಯಿಸಲು ಮತ್ತು ಆನ್ಲೈನ್ ಖಾತೆ ಗಳನ್ನೂ ಸುರಕ್ಷಿತವಾಗಿರಿಸಲು ಪಾಸ್ ಕೀ ಗಳನ್ನೂ (Passkey) ಅಳವಡಿಸುದಾಗಿ ಚಿಂತನೆ ನೆಡೆಸುತ್ತಿವೆ.

passkey feature for whatsapp user
Image Credit: Techradar

ಪಾಸ್ ಕೀ ಅಳವಡಿಕೆಗೆ ಮುಂದಾದ ವಾಟ್ಸಾಪ್
ಇದೀಗ ವಾಟ್ಸಾಪ್ ಬಳಕೆದಾರರ ಲಾಗಿನ್ ಅನ್ನು Passkey ಮೂಲಕ ಪರೀಕ್ಷಿಸುತ್ತಿವೆ. ಇದನ್ನು ನಿಮ್ಮ ಫೋನ್ ನ ಬಯೋಮೆಟ್ರಿಕ್ ಸುರಕ್ಷತೆಯನ್ನು ಬಳಸಿಕೊಂಡು ಮಾಡಲಾಗುತ್ತದೆ ಹಾಗೆ ಇನ್ನುಮುಂದೆ ಪಾಸ್ವರ್ಡ್ ನೆನೆಪಿಟ್ಟುಕೊಳ್ಳುವ ಅಗತ್ಯ ಇಲ್ಲ. ಗೂಗಲ್ ಮತ್ತು ಆಪಲ್ ತಮ್ಮ ವೆಬ್ ಬ್ರೌಸರ್ ಗಳಿಗೆ Passkey ಗಳನ್ನೂ ಅಳವಡಿಸಿಕೊಂಡಿದೆ. ಮೆಟಾ ಸೇರಿದಂತೆ ಹೆಚ್ಚಿನ ಕಂಪನಿಗಳು ಕೂಡ Passkey ಗಳನ್ನೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿದೆ.

Passkey Feature ಹೆಚ್ಚುವರಿ ಸುರಕ್ಷತೆಯ ಪದರ
ವಾಟ್ಸಪ್ಪ್ ನಲ್ಲಿ Passkey ವೈಶಿಷ್ಟ್ಯ ಖಾತೆಗೆ ಭದ್ರತೆಯನ್ನು ಒದಗಿಸುತ್ತದೆ. ನೀವು ಅನುಮತಿ ನೀಡಿದಾಗ ಮಾತ್ರ ಇತರರಿಗೆ ನಿಮ್ಮ ಡಿವೈಸ್ ನೋಡಲು ಸಾಧ್ಯವಾಗುತ್ತದೆ. ಐಫೋನ್ ಬಳಕೆದಾರರಿಗೆ ಇರುವ ಏಕೈಕ ಬಯೋಮೆಟ್ರಿಕ್ ಆಯ್ಕೆಯಾಗಿರುವ Face ID ಮೂಲಕ Passkey ಗಳು ಕಾರ್ಯನಿರ್ವಹಿಸುತ್ತವೆ. Passkey ಯನ್ನು ಬಳಸಿಕೊಂಡು ನಿಮ್ಮ ಫಿಂಗರ್‌ ಪ್ರಿಂಟ್, ಮುಖ ಅಥವಾ ಸ್ಕ್ರೀನ್ ಲಾಕ್, ಪಿನ್, ಪ್ಯಾಟರ್ನ್ ಬಳಸಿ ನಿಮ್ಮ ಖಾತೆಗೆ ಸೈನ್ ಇನ್ ಆಗಬಹುದು.

Whatsapp Passkey Feature
Image Credit: Etvbharat

ಸದ್ಯ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯ
ವಾಟ್ಸಾಪ್ ನಲ್ಲಿ Passkey ಸದ್ಯಕ್ಕೆ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ, WABetainfo ಉಲ್ಲೇಖಿಸಿದಂತೆ ಸೀಮಿತ ಸಂಖ್ಯೆಯ ಬೀಟಾ ಪರೀಕ್ಷಕರಿಗೆ ಫೀಚರ್ ಲಭ್ಯವಾಗುವಂತೆ ಮಾಡಲಾಗಿದೆ. ಗೂಗಲ್‌ನ Passkey ಗಳ ಬಳಕೆಯು ಆನ್-ಡಿವೈಸ್ ದೃಢೀಕರಣಕ್ಕೆ ಸೀಮಿತವಾಗಿದೆ, ಅದು ಹೆಚ್ಚುವರಿ ಸುರಕ್ಷತೆಯನ್ನು ನೀಡುತ್ತದೆ. ಖಾತೆಗಳನ್ನು ನಿರ್ವಹಿಸಲು ಮತ್ತು ಸುರಕ್ಷಿತಗೊಳಿಸಲು Passkey ಅತ್ಯುತ್ತಮ ಆಯ್ಕೆಯಾಗಿದೆ.

Join Nadunudi News WhatsApp Group

ಮುಂದಿನ ದಿನಗಳಲ್ಲಿ ಸಾರ್ವಜನಿಕ ಬಳಕೆಗೂ ಲಭ್ಯ
ಮುಂಬರುವ ದಿನಗಳಲ್ಲಿ ಸಾರ್ವಜನಿಕ ಬಳಕೆಗೂ Passkey ಲಭ್ಯ ವಾಗುವ ನಿರೀಕ್ಷೆ ಇದೆ. ವಾಟ್ಸಾಪ್ನ Passkey ಗಳು ಬೀಟಾ ಆವೃತ್ತಿಗೆ ಬರುತ್ತಿವೆ, ಮುಂಬರುವ ದಿನಗಳಲ್ಲಿ ಬಳಕೆದಾರರು ಮುಕ್ತವಾಗಿ ಬಳಸಬಹುದೆಂಬ ಸೂಚನೆಯನ್ನು ನೀಡುತ್ತಿದೆ.

Join Nadunudi News WhatsApp Group