UIDAI Rule: 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ನಿಯಮ ಬದಲಾವಣೆ, ಪಾಸ್ಪೋರ್ಟ್ ರೀತಿಯಲ್ಲಿ ವೆರಿಫಿಕೇಷನ್

ಹೊಸ ಆಧಾರ್ ಕಾರ್ಡ್ ಮಾಡಿಸಲು ಇನ್ನುಮುಂದೆ ಹೊಸ ನಿಯಮ, ವೆರಿಫಿಕೇಷನ್ ನಿಯಮ ಬದಲಾವಣೆ

Aadhaar card verification Rules Changes In India: ಇನ್ನು ದೇಶದಲ್ಲಿ UIDAI Aadhar Update ಮಾಡುವಂತೆ ಜನರಿಗೆ ಸೂಚನೆ ನೀಡುತ್ತಿದೆ. ಜನರು ತಮ್ಮ ಆಧಾರ್ ಅಪ್ಡೇಟ್ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ UIDAI ಆಧಾರ್ ಕುರಿತಂತೆ ಮಹತ್ವದ ಘೋಷಣೆ ಹೊರಡಿಸಿದೆ.ಹೊಸ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವವರು UIDAI ಹೊಸ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ. ಹೊಸ ಆಧಾರ್ ಕಾರ್ಡ್ ಮಾಡಿಸಲು ಇನ್ನುಮುಂದೆ ಹೊಸ ನಿಯಮ ಅನ್ವಯವಾಗಲಿದೆ. 

ಹೌದು UIDAI ಈಗ ಆಧಾರ್ ಕಾರ್ಡ್ ವೆರಿಫಿಕೇಷನ್ ನಿಯಮದಲ್ಲಿ ಬದಲಾವಣೆ ಮಾಡಿದ್ದು ಬದಲಾದ ನಿಯಮವನ್ನ ಎಲ್ಲರೂ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಹೇಳಬಹುದು. ಹೌದು ಆಧಾರ್ ಕಾರ್ಡ್ ವೆರಿಫಿಕೇಷನ್ ನಿಯಮವನ್ನ ಇನ್ನಷ್ಟು ಬಿಗಿ ಮಾಡಲಾಗಿದ್ದು ಇನ್ನುಮುಂದೆ ಪಾಸ್ಪೋರ್ಟ್ ರೀತಿಯಲ್ಲಿ ಬಿಗಿಯಾಗಿ ಆಧಾರ್ ಕಾರ್ಡ್ ವೆರಿಫಿಕೇಷನ್ ನಡೆಯಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

Passport Verification For Aadhaar
Image Credit: Informal News

ಆಧಾರ್ ಕಾರ್ಡ್ ನಿಯಮ ಬದಲಾವಣೆ
ಈಗಾಗಲೇ UIDAI ಆಧಾರ್ ಗೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ಜಾರಿಗೊಳಿಸಿದೆ. ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ UIDAI ನಿಯಮಾನುಸಾರ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುತ್ತಿದ್ದಾರೆ. ಭಾರತೀಯ ಪ್ರಜೆ ಆದ ಪ್ರತಿಯೊಬ್ಬರೂ ಕೂಡ Aadhaar ಹೊಂದುವುದು ಕಡ್ಡಾಯ.

ಆಧಾರ್ ಕಾರ್ಡ್ ಹೊಂದಲು ವಯಸ್ಸಿನ ಮಿತಿ ಇಲ್ಲ. 18 ವರ್ಷ ಒಳಗಿನ ಮಕ್ಕಳಿಗೆ Bal Aadhaar ಅನ್ನು UIDAI ನೀಡುತ್ತಿದೆ. 18 ವರ್ಷ ಮೇಲ್ಪಟ್ಟವರು Aadhaar Card ಅನ್ನು ಮಾಡಿಸಬೇಕಿದೆ. ಸದ್ಯ UIDAI ಅಂತವರಿಗೆ ಹೊಸ ನಿಯಮವನ್ನು ರೂಪಿಸಿದೆ. ಸದ್ಯ 18 ವರ್ಷ ಮೇಲ್ಪಟ್ಟವರು ಹೊಸ ಆಧಾರ್ ಕಾರ್ಡ್ ಮಾಡುವ ಮುನ್ನ UIDAI ಹೊಸ ನಿಯಮ ತಿಳಿಯುವುದು ಅಗತ್ಯ.

Aadhaar card Latest News
Image Credit: The Times Of India

ಆಧಾರ್ ಕಾರ್ಡಿಗೂ ಬಂತು ಪಾಸ್ಪೋರ್ಟ್ ರೀತಿಯ ವೆರಿಫಿಕೇಷನ್
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) 18 ವರ್ಷದ ನಂತರ ಮೊದಲ ಬಾರಿಗೆ ಆಧಾರ್ ಕಾರ್ಡ್ ಮಾಡಿಸುವವರಿಗೆ ಭೌತಿಕ ಪರಿಶೀಲನೆ ಕಡ್ಡಾಯವೆಂದು ಆದೇಶ ಹೊರಡಿಸಿದೆ. ಮೊದಲ ಬಾರಿಗೆ ಆಧಾರ್ ಕಾರ್ಡ್ ಮಾಡುವ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪಾಸ್‌ ಪೋರ್ಟ್ ಮಾದರಿಯಲ್ಲಿ ಪರಿಶೀಲನೆ ಪ್ರಕ್ರಿಯೆ ಇರುತ್ತದೆ. ಆಧಾರ್ ಕಾರ್ಡ್‌ ಗಾಗಿ ಅರ್ಜಿಯನ್ನು ಸಲ್ಲಿಸಿದ ನಂತರ, ಡೇಟಾ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ ಮತ್ತು ನಂತರ ಸೇವಾ ಪೋರ್ಟಲ್‌ ನಲ್ಲಿ ಪರಿಶೀಲನೆಯನ್ನು ಮಾಡಲಾಗುತ್ತದೆ.

Join Nadunudi News WhatsApp Group

ಆಧಾರ್‌ ಗಾಗಿ ಅರ್ಜಿ ಸಲ್ಲಿಸಿದ 180 ದಿನಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆಧಾರ್ ಕಾರ್ಡ್ ಕೈಸೇರಲಿದೆ. ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಈ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ ಮಾಡಲಾಗುತ್ತದೆ ಎಂದು ಪ್ರಕಟಿಸಿದೆ. 18 ವರ್ಷಗಳ ನಂತರ ತಮ್ಮ ಮೊದಲ ಆಧಾರ್ ಕಾರ್ಡ್ ಅನ್ನು ಬಯಸುವವರಿಗೆ ಪಾಸ್‌ ಪೋರ್ಟ್ ತರಹದ ಪರಿಶೀಲನಾ ವ್ಯವಸ್ಥೆಯು ಜಾರಿಯಲ್ಲಿರುತ್ತದೆ ಎಂದು UIDAI ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಮುಂದೆ ಆಧಾರ್ ಕಾರ್ಡ್ ಗೆ ಭೌತಿಕ ಪರಿಶೀಲನೆ ಕಡ್ಡಾಯವಾಗಲಿದೆ.

Join Nadunudi News WhatsApp Group