Pathaan Movie Collection: ಮೊದಲ ವೀಕೆಂಡ್ ಕಲೆಕ್ಷನ್ ಅಲ್ಲಿ ಕೆಜಿಎಫ್ ಚಿತ್ರವನ್ನು ಹಿಂದಿಕ್ಕಲಿದೆ ಪಠಾಣ್.

Pathaan Movie Collection: ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ ಸಿನಿಮಾ ಜನವರಿ 26 ರಂದು ದೇಶದಾದ್ಯಂತ ರಿಲೀಸ್ ಆಗಿ ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Shah Rukh Khan And Deepika Padukone) ನಟನೆಯ ಪಠಾಣ್ ಸಿನಿಮಾ ನೋಡಿದವರೆಲ್ಲ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪಠಾಣ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದೆ.

Pathan will overtake KGF in the first weekend collection.
Image Source: India Today

 

ಕೆಜಿಎಫ್ ದಾಖಲೆಯನ್ನು ಪುಡಿ ಮಾಡಲಿರುವ ಪಠಾಣ್ ಸಿನಿಮಾ
ಬಾಲಿವುಡ್ ಕಿಂಗ್ ಶಾರುಖ್ ಖಾನ್ (Bollywood King Shah Rukh Khan) ನಟನೆಯ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತದೆ. ಕೆವಲ ಎರಡೇ ದಿನಕ್ಕೆ ಈ ಚಿತ್ರ 123 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದ ಬಾಕ್ಸ್ ಆಫೀಸ್ ನಲ್ಲಿ ಈ ರೀತಿಯ ಅಬ್ಬರದ ಕಲೆಕ್ಷನ್ ಯಾವ ಚಿತ್ರ ಸಹ ಮಾಡಿರಲಿಲ್ಲ. ಶಾರುಖ್ ಖಾನ್ ಪಠಾಣ್ ಚಿತ್ರ ಒಂದೊಂದೇ ದಾಖಲೆಯನ್ನು ಪುಡಿ ಮಾಡುತ್ತಿದೆ.

ಮೊದಲ ಹಾಗು ಎರಡನೇ ದಿನದ ಕಲೆಕ್ಷನ್ ವಿಚಾರದಲ್ಲಿ ಕೆಜಿಎಫ್ 2 (KGF 2) ಹಿಂದಿ ವರ್ಷನ್ ಮಾಡಿದ ದಾಖಲೆಯನ್ನು ಈ ಸಿನಿಮಾ ಮುರಿದಿದೆ. ಈಗ ಮೊದಲ ವೀಕೆಂಡ್ ಕಲೆಕ್ಷನ್ ಅಲ್ಲಿಯೂ ಕೆಜಿಎಫ್ 2 (ಹಿಂದಿ) ದಾಖಲೆಯನ್ನು ಪಠಾಣ್ ಸಿನಿಮಾ ಪುಡಿ ಮಾಡುವ ಸಾಧ್ಯತೆ ಇದೆ.

Pathan will overtake KGF in the first weekend collection.
Image Source: Times Of India

ಎರಡು ದಿನಗಳಲ್ಲಿ 123 ಕೋಟಿ ಗಳಿಕೆ ಮಾಡಿರುವ ಪಠಾಣ್
ಕೆಜಿಎಫ್ 2 ಸಿನಿಮಾ ಕಳೆದ ಏಪ್ರಿಲ್ 14 ರಂದು ರಿಲೀಸ್ ಆಗಿತ್ತು. ಈ ಚಿತ್ರ ಹಿಂದೆ ನಾಲ್ಕು ದಿನಗಳಲ್ಲಿ 190 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಪಠಾಣ್ ಚಿತ್ರ ಎರಡು ದಿನಕ್ಕೆ 123 ಕೋಟಿ ಗಳಿಕೆ ಮಾಡಿದೆ. ಜನವರಿ 27 ಕ್ಕೆ ಈ ಸಿನಿಮಾ 30 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗುತ್ತಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 150 ಕೋಟಿ ರೂಪಾಯಿ ದಾಟಿದೆ.

Join Nadunudi News WhatsApp Group

ಶನಿವಾರ ಜನವರಿ 28 ಹಾಗೂ ಭಾನುವಾರ ಜನವರಿ 29 ಕೂಡ ಸಿನಿಮಾ ಅಬ್ಬರಿಸುವ ಸೂಚನೆ ಸಿಕ್ಕಿದೆ. ಈ ಮೂಲಕ ಮೊದಲ ವಾರಾಂತ್ಯಕ್ಕೆ ಸಿನಿಮಾದ ಒಟ್ಟಾರೆ ಕಲೆಕ್ಷನ್ 250 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಈ ಮೂಲಕ ಕೆಜಿಎಫ್ 2 ಹಿಂದಿಯಲ್ಲಿ ಮಾಡಿದ ದಾಖಲೆಯನ್ನು ಪಠಾಣ್​ ಬ್ರೇಕ್ ಮಾಡಲಿದೆ.

Pathan will overtake KGF in the first weekend collection.
Image Source: India Today

Join Nadunudi News WhatsApp Group