Pavithra Gowda Daughter: ಪವಿತ್ರಾ ಗೌಡ ಮಗಳು ದರ್ಶನ್ ಪುತ್ರಿನಾ…? ಸ್ಪಷ್ಟನೆ ನೀಡಿದ ಪವಿತ್ರಾ ಗೌಡ

ಪವಿತ್ರ ಅವರ ಮಗಳು ದರ್ಶನ್ ಅವರ ಮಗಳಾ..? ಪೋಸ್ಟ್ ಮೂಲಕ ಉತ್ತರ ನೀಡಿದ ಪವಿತ್ರ ಗೌಡ

Pavithra Gowda Instagram Post: ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ಹಾಗೂ ಪವಿತ್ರ ಗೌಡ ಅವರ ನಡುವೆ ಜೋರಾಗಿಯೇ ವಾದ ನಡೆಯುತ್ತಿದೆ. ಇಬ್ಬರು ಕೂಡ ಪೋಸ್ಟ್ ಹಂಚಿಕೊಳ್ಳುತ್ತ ವಾದ ನಡುಸುತ್ತಿದ್ದಾರೆ. ನಿಜಕ್ಕೂ ದರ್ಶನ್ (Darshan) ಅವರು ಎರಡನೇ ಮದುವೆ ಆಗಿದ್ದಾರಾ..? ಎನ್ನುವ ಬಗ್ಗೆ ಈವರೆಗೂ ಸ್ಪಷ್ಟನೆ ಸಿಕ್ಕಿಲ್ಲ.

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು pavitra ಗೌಡ ಅವರಿಗೆ ಕಾನೂನು ಬೆದರಿಕೆ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಪವಿತ್ರ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ದರ್ಶನ್ ಹಾಗೂ ಅವರ ನಡುವಿನ ಸಂಬಂಧದ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ಪವಿತ್ರ ಅವರ ಮಗಳು ದರ್ಶನ್ ಅವರ ಮಗಳ..? ಅಥವಾ ಅವರ ಮೊದಲ ಗಂಡ ಸಂಜಯ್ ಅವರ ಮಗಳ..? ಎನ್ನುವ ಬಗ್ಗೆ ಪೋಸ್ಟ್ ಮೂಲಕ ಪವಿತ್ರ ಗೌಡ ಉತ್ತರ ನೀಡಿದ್ದಾರೆ.

Pavithra Gowda Daughter
Image Credit: Filmibeat

ಪವಿತ್ರಾ ಗೌಡ ಮಗಳು ದರ್ಶನ್ ಪುತ್ರಿನಾ…?
ನಾನು ಪವಿತ್ರಾ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಮತ್ತು ನಂತರ ಖುಷಿ ಗೌಡ ಜನಿಸಿದಳು. ನಮ್ಮ ಜೀವನದಲ್ಲಿನ ಸಮಸ್ಯೆಯಿಂದ ನಾನು ಸಂಜಯ್‌ ನಿಂದ ವಿಚ್ಛೇದನ ಪಡೆದೆ. ಖುಷಿ ಗೌಡ ದರ್ಶನ್ ಶ್ರೀನಿವಾಸ ಅವರ ಮಗಳೆಂದು ಇದುವರೆಗೂ ನಾನು ಎಲ್ಲಿಯೂ ಹೇಳಿಲ್ಲ. ದರ್ಶನ್ ಶ್ರೀನಿವಾಸ ಮತ್ತು ನಾನು ಕಳೆದ 10 ವರ್ಷಗಳಿಂದ ಒಟ್ಟಿಗೆ ಇದ್ದೇವೆ. ದಯವಿಟ್ಟು ಗಮನಿಸಿ “ಯಾವುದೇ ವೈಯಕ್ತಿಕ ಅಗತ್ಯಗಳಿಗೆ ಮತ್ತು ಕೆಲಸಕ್ಕೆ ನಾನು ಅವನೊಂದಿಗೆ ಇಲ್ಲ”.

ಇದು 10 ವರ್ಷಗಳ ಶುದ್ಧ ಪ್ರೀತಿ ಮತ್ತು ಕಾಳಜಿ, ಇದು ವಿಜಯಲಕ್ಷ್ಮಿಗೂ ಮೊದಲೇ ತಿಳಿದಿರುವ ವಿಷಯ. ಈ ವಿಚಾರವಾಗಿ ವಿಜಯಲಕ್ಷ್ಮಿ ಅವರು ನನಗೆ ಹಲವು ಬಾರಿ ಕರೆ ಮಾಡಿ ಮಾತನಾಡಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು. (ಸಮಯ ಬಂದಾಗ ನಾನು ಅದರ ಕೆಲವು ದಾಖಲೆಗಳನ್ನು ಮತ್ತು ನನ್ನ ವಿಚ್ಛೇದನ ಪತ್ರಗಳನ್ನು ಹಂಚಿಕೊಳ್ಳುತ್ತೇನೆ). ಈಗ ವಿಜಯಲಕ್ಷ್ಮಿಯವರು ನನ್ನ ವಿರುದ್ಧ ಪೋಸ್ಟ್ ಮಾಡುತ್ತಿರುವುದು ಬೇಸರ ತಂದಿದೆ.

Join Nadunudi News WhatsApp Group

ವಿಜಯಲಕ್ಷ್ಮಿ ದರ್ಶನ್ ಗೆ ಎಚ್ಚರಿಕೆ ನೀಡಿದ ಪವಿತ್ರ ಗೌಡ
ವಿಜಯಲಕ್ಷ್ಮಿ ದರ್ಶನ್ ಎಂಬ ಇನ್‌ ಸ್ಟಾಗ್ರಾಮ್ ಪೋಸ್ಟ್‌ ನಲ್ಲಿ ನನ್ನ ಮತ್ತು ನನ್ನ ಮಗಳು ಖುಷಿ ಗೌಡ ಮೇಲೆ ಅನೇಕರು ನಿಂದಿಸುತ್ತಿರುವುದು ನನಗೆ ಮಾನಸಿಕ ನೋವನ್ನುಂಟು ಮಾಡಿದೆ. ನನ್ನ ಜೀವನದ ಹಳೆಯ ವಿಚಾರಗಳನ್ನು ಮತ್ತು ನನ್ನ ಖಾಸಗಿ ಫೋಟೋಗಳನ್ನು ಪೋಸ್ಟ್ ಮಾಡುವ ಹಕ್ಕು ಯಾರಿಗೂ ಇಲ್ಲ. ನನಗೂ ಕಾನೂನು ಕ್ರಮ ಕೈಗೊಳ್ಳುವ ಹಕ್ಕಿದೆ. ಆದರೆ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರವಿರಲಿ, ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದರಬೇಕೆಂದು ನಿಶ್ಚಯಿಸಿದ್ದೇನೆ ಎಂದು ಪವಿತ್ರ ಗೌಡ ಅವರು ಇನ್ಸ್ಟಾಗ್ರಾಮ್ ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಟ್ಯಾಗ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

Join Nadunudi News WhatsApp Group