Paytm FASTag : ಪೆಟಿಎಂ Fastag ಬಂದ್, Fastag ನಲ್ಲಿ ಇರುವ ಬ್ಯಾಲೆನ್ಸ್ ವರ್ಗಾವಣೆ ಮಾಡುವುದು ಹೇಗೆ…? ಇಲ್ಲಿದೆ ಡೀಟೇಲ್ಸ್.
Fastag ನಲ್ಲಿ ಇರುವ ಬ್ಯಾಲೆನ್ಸ್ ವರ್ಗಾವಣೆ ಮಾಡುದು ಹೇಗೆ...?
Paytm FASTag Account Balance Transfer: ದೇಶದಲ್ಲಿ RBI ಈಗಾಗಲೇ Paytm Payment ಅನ್ನು ಸ್ಥಸ್ಥಗಿತಗೊಳಿಸಿದೆ. ಪೆಟಿಎಂ ಬಳಕೆದಾರರು ಸದ್ಯ ಪೆಟಿಎಂ ಸೇವೆಗಳಿಂದ ವಂಚಿತರಾಗಿದ್ದಾರೆ. ಇನ್ನು RBI ಪೆಟಿಎಂ ವಿರುದ್ಧ ಕ್ರಮ ಕೈಗೊಂಡಾಗಿಂದ ಸಾಕಷ್ಟು ನಿಯಮಗಳು ಬದಲಾಗಿದೆ. ಅದರಲ್ಲೂ ಮುಖ್ಯವಾಗಿ Paytm FASTag ನಲ್ಲಿ ಬಾರಿ ಬದಲಾವಣೆ ಕಂಡುಬಂದಿದೆ.
Paytm FASTag ಬಳಕೆದಾರರಿಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ ಎನ್ನಬಹುದು. ಇನ್ನು ಪೆಟಿಎಂ ಪೇಮೆಂಟ್ ಮೇಲೆ RBI ನಿರ್ಬಂಧ ಹೇರಿದ ಕಾರಣ, ಜನರು ಫಾಸ್ಟ್ ಟ್ಯಾಗ್ ವರ್ಗಾವಣೆ, ಖಾತೆ ನಿಷ್ರಕ್ರಿಯಗೊಳಿಸುವಿಕೆ ಹಾಗೂ ಮರುಪಾವತಿ ಪಡೆಯುವ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಾರೆ. ಇದೀಗ ನಾವು ಈ ಲೇಖನದಲ್ಲಿ ಈ ಮೂರು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
![Paytm FASTag Account Balance Transfer](https://nadunudi.in/wp-content/uploads/2024/02/Paytm-FASTag-Account-Balance-Transfer.png)
Paytm ನ FASTag ಅನ್ನು ತೆಗೆದುಹಾಕುವ ವಿಧಾನ ಹೇಗೆ…?
Paytm ನ ಫಾಸ್ಟ್ಯಾಗ್ ಅನ್ನು ತೆಗೆದುಹಾಕುವ ಮೊದಲು, ನೀವು ಅಧಿಕೃತ ಬ್ಯಾಂಕ್ ನಿಂದ ಹೊಸ ಫಾಸ್ಟ್ಯಾಗ್ ಅನ್ನು ಪಡೆಯಬೇಕಾಗುತ್ತದೆ.
IHMCL 32 ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅಲ್ಲಿ ಬಳಕೆದಾರರು ತಮಗಾಗಿ ಫಾಸ್ಟ್ಯಾಗ್ ಖರೀದಿಸಬಹುದು.
ಹೊಸ ಫಾಸ್ಟ್ಯಾಗ್ ಅನ್ನು ಪಡೆದ ನಂತರ, Paytm ಫಾಸ್ಟ್ಯಾಗ್ ಅನ್ನು ತೆಗೆದುಹಾಕಿ ಮತ್ತು ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಪೇಟಿಎಂನ ಫಾಸ್ಟ್ಯಾಗ್ನಲ್ಲಿ ಕನಿಷ್ಠ 150 ರೂಪಾಯಿ ಮೀಸಲು ಇಡಬೇಕು.
Paytm ನ FASTag ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ…?
ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲು, ನೀವು 18001204210 ಸಂಖ್ಯೆಗೆ ಕರೆ ಮಾಡಬೇಕು.
ಇಲ್ಲಿ ನೀವು ಫಾಸ್ಟ್ಯಾಗ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಇದರ ನಂತರ ನೀವು Paytm ಫಾಸ್ಟ್ಯಾಗ್ ಅನ್ನು ಸ್ವಿಚ್ ಆಫ್ ಮಾಡುವ ಆಯ್ಕೆಯನ್ನು ಪಡೆಯುತ್ತೀರಿ.
Paytm ನ ಅಪ್ಲಿಕೇಶನ್ ನಿಂದ Fastag ಅನ್ನು ಸ್ವಿಚ್ ಆಫ್ ಮಾಡುವ ಮೂಲಕ ನಿಮ್ಮ ಭದ್ರತಾ ಹಣವನ್ನು ಸಹ ನೀವು ಮರಳಿ ಪಡೆಯಬಹುದು.
![Paytm FASTag Latest News](https://nadunudi.in/wp-content/uploads/2024/02/Paytm-FASTag-Latest-News.png)
Fastag ನಲ್ಲಿ ಇರುವ ಬ್ಯಾಲೆನ್ಸ್ ವರ್ಗಾವಣೆ ಮಾಡುದು ಹೇಗೆ…?
ನೀವು ವಾಹನದಿಂದ ಫಾಸ್ಟ್ಯಾಗ್ ಅನ್ನು ತೆಗೆದುಹಾಕಬೇಕು ಮತ್ತು ಅದರ ಹರಿದ ಫೋಟೋವನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ನಿಮ್ಮ ಭದ್ರತಾ ಹಣವನ್ನು Paytm ಪಾವತಿಗಳ ಬ್ಯಾಂಕ್ ವಾಲೆಟ್ ಗೆ ಮರುಪಾವತಿಸಲಾಗುತ್ತದೆ. Paytm ಫಾಸ್ಟ್ಯಾಗ್ ನಿಷ್ಕ್ರಿಯಗೊಳಿಸಿದ ನಂತರ ಭದ್ರತಾ ಹಣವನ್ನು ನಿಮ್ಮ Paytm ಪೇಮೆಂಟ್ಸ್ ಬ್ಯಾಂಕ್ ವ್ಯಾಲೆಟ್ ನಲ್ಲಿ ಠೇವಣಿ ಮಾಡಲಾಗುತ್ತದೆ. Paytm ನಿಂದ ನಿಮಗೆ ಈ ಬಗ್ಗೆ ಸಂದೇಶದ ಮೂಲಕ ತಿಳಿಸಲಾಗುತ್ತದೆ. ಇದರ ನಂತರ ನೀವು ಈ ಮರುಪಾವತಿಯನ್ನು ಬಳಸಬಹುದು ಅಥವಾ ಇಲ್ಲಿಂದ ನಿಮ್ಮ ಬ್ಯಾಂಕ್ ಖಾತೆಗೆ ಅದನ್ನು ವರ್ಗಾಯಿಸಬಹುದು.