Paytm News: ಪೆಟಿಎಂ ಪೇಮೆಂಟ್ ಬ್ಯಾಂಕ್ ನ ಬ್ಯಾಕಿಂಗ್ ಲೈಸೆನ್ಸ್ ರದ್ದು, ಸಂಕಷ್ಟದಲ್ಲಿ ಪೆಟಿಎಂ ಗ್ರಾಹಕರು

ಪೆಟಿಎಂ ಪೇಮೆಂಟ್ ಬ್ಯಾಂಕ್ ಅನ್ನು ನಿರ್ಬಂಧಿಸಲು ಕಾರಣವೇನು..?

Paytm Payment Bank Licence Cancelled: ಜನವರಿ 31 2024 ರಂದು ರಿಸರ್ವ್ ಬ್ಯಾಂಕ್ Paytm Payment ನ ವಿರುದ್ಧ ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು. ಫೆಬ್ರವರಿ 29, 2024 ರಿಂದ ಜಾರಿಗೆ ಬರಬೇಕಿದ್ದ Paytm ನ ಬ್ಯಾಂಕಿಂಗ್ ಸೇವೆಯನ್ನು ಸ್ಥಗಿತಗೊಳಿಸಲು ಆದೇಶವನ್ನು ಹೊರಡಿಸಿತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಲ್ಲಿನ ವಹಿವಾಟು, ಪೇಟಿಎಂ ವಾಲೆಟ್, ಫಾಸ್ಟ್‌ಟ್ಯಾಗ್ ಮತ್ತು ಟಾಪ್‌ ಅಪ್‌ ನಂತಹ ಸೇವೆಗಳನ್ನು ನಿಲ್ಲಿಸಲು RBI ಆದೇಶಿಸಿರುವುದು ಎಲ್ಲರಿಗು ತಿಳಿದೇ ಇದೆ.

ಮಾರ್ಚ್ 15, 2024 ರ ನಂತರ, ಗ್ರಾಹಕರ ಖಾತೆಗಳು, ಪ್ರಿಪೇಯ್ಡ್, ವ್ಯಾಲೆಟ್, ಫಾಸ್ಟ್ಯಾಗ್, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ನಂತಹ ಎಲ್ಲಾ ಸೇವೆಗಳನ್ನು ಮುಚ್ಚಲಾಗುತ್ತದೆ. ಸದ್ಯ Paytm Payment Bank ಗೆ ಸಂಬಂಧಿಸಿದಂತೆ RBI ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Paytm Payment Bank Licence Cancelled
Image Credit: Good Returns

ಪೆಟಿಎಂ ಪೇಮೆಂಟ್ ಬ್ಯಾಂಕ್ ನ ಬ್ಯಾಕಿಂಗ್ ಲೈಸೆನ್ಸ್ ರದ್ದು
Paytm Payment Bank ಗೆ ನೀಡಿರುವ ಬ್ಯಾಂಕಿಂಗ್ ಪರವಾನಗಿಯನ್ನು RBI ಹಿಂಪಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. Paytm Payment Bank ನ ದೈನಂದಿನ ಕಾರ್ಯಾಚರಣೆಗಳನ್ನು ನೋಡಿಕೊಳ್ಳಲು RBI ನಿಂದ ನಿರ್ವಾಹಕರನ್ನು ನೇಮಿಸಬಹುದು ಎಂದು ಹೇಳಲಾಗುತ್ತದೆ. ಕಳೆದ 20 ವರ್ಷಗಳಲ್ಲಿ ಯಾವುದೇ ಬ್ಯಾಂಕಿನ ಪರವಾನಗಿ ರದ್ದು ಮಾಡಿಲ್ಲ. ಒಂದು ವೇಳೆ Paytm Payment Bank ಪರವಾನಗಿ ರದ್ದಾದರೆ 20 ವರ್ಷಗಳ ನಂತರ ಮೊದಲು ರದ್ದಾಗುವ ಬ್ಯಾಂಕ್ ಇದಾಗಲಿದೆ.

RBI About Paytm Payment Bank
Image Credit: Good Returns

ಪೆಟಿಎಂ ಪೇಮೆಂಟ್ ಬ್ಯಾಂಕ್ ಅನ್ನು ನಿರ್ಬಂಧಿಸಲು ಕಾರಣವೇನು..?
ಬ್ಯಾಂಕ್ ತನ್ನ ಗ್ರಾಹಕರಿಗೆ ಖಾತೆಗಳನ್ನು ನೀಡುವಾಗ ಸರಿಯಾದ KYC ಅನ್ನು ಪಡೆದಿಲ್ಲ ಎಂಬುದು ಪ್ರಮುಖ ಆರೋಪವಾಗಿದೆ. ಪೇಮೆಂಟ್ಸ್ ಬ್ಯಾಂಕ್ ಮತ್ತು One97 ಕಮ್ಯುನಿಕೇಷನ್ಸ್‌ ನ ಇತರ ಘಟಕಗಳ ನಡುವೆ ಒಪ್ಪಂದವಿದೆ. ಬ್ಯಾಂಕಿಂಗ್ ನಿಯಮಗಳ ಪ್ರಕಾರ ಪೇಮೆಂಟ್ಸ್ ಬ್ಯಾಂಕ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮತ್ತೊಂದು ಪ್ರಮುಖ ಆರೋಪವೆಂದರೆ, ಪೇಟಿಎಂ ಮತ್ತು ಪೇಮೆಂಟ್ಸ್ ಬ್ಯಾಂಕ್ ಎರಡೂ ಒಂದೇ ಮುಖ್ಯಸ್ಥರನ್ನು ಹೊಂದಿವೆ. ಈ ಕಾರಣಕ್ಕಾಗಿ, RBI ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಲು ಮುಂದಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

Join Nadunudi News WhatsApp Group

Join Nadunudi News WhatsApp Group