Paytm Update: ಪೆಟಿಎಂ ಬಳಸುವವರಿಗೆ ಹೊಸ ಸೇವೆ ಆರಂಭ

ಜನಪ್ರಿಯ ಆನ್ಲೈನ್ ಅಪ್ಲಿಕೇಶನ್ ಆಗಿರುವ ಪೆಟಿಎಂ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ.ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Pin Recent Payment: ದೇಶದಲ್ಲೆಡೆ ಇದೀಗ ಆನ್ಲೈನ್ ವಹಿವಾಟುಗಳು (Online Payment) ಹೆಚ್ಚುತ್ತಿದೆ. ಗ್ರಾಹಕರಿಗೆ ಸಾಕಷ್ಟು ರೀತಿಯ ಆನ್ಲೈನ್ ಫ್ಲಾಟ್ ಫಾರ್ಮ್ ಗಳ ಮೂಲಕ ಹಣದ ವಹಿವಾಟು ಇದೀಗ ಸುಲಭವಾಗಿದೆ. ಇತ್ತೀಚೆಗಂತೂ ಯುಪಿಐ ಪೇಮೆಂಟ್ ಗಳು ತಮ್ಮ ಸೇವೆಯನ್ನು ವಿಸ್ತರಿಸುತ್ತ ಬಂದಿದೆ. ಬಳಕೆದಾರರಿಗೆ ಹೊಸ ಸೌಲಭ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಇದೀಗ ಜನಪ್ರಿಯ ಆನ್ಲೈನ್ ಅಪ್ಲಿಕೇಶನ್ ಆಗಿರುವ ಪೆಟಿಎಂ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ. ಈ ಫೀಚರ್ ನ ಮೂಲಕ ನಿಮ್ಮ ಪಾವತಿ ಅತ್ಯಂತ ಸುಲಭವಾಗಲಿದೆ. ನೀವು ಪೆಟಿಎಂ (Paytm) ಬಳಕೆದಾರರಾಗಿದ್ದರೆ ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Paytm Update
Image Source: India Today

ಪೆಟಿಎಂ ಬಳಸುವವರಿಗೆ ಹೊಸ ಸೇವೆ ಆರಂಭ
ಪೇಟಿಎಂ ಬಳಕೆದಾರರಿಗೆ ಇದೀಗ “ಪಿನ್ ಇತ್ತೀಚಿನ ಪಾವತಿಗಳು” ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಫೀಚರ್ ಮೂಲಕ ನಿಮ್ಮ ಪಾವತಿಯು ಇನ್ನು ವೇಗವಾಗಲಿದೆ. ಈ ಫೀಚರ್ ನ ಸಹಾಯದಿಂದ ಬಳಕೆದಾರರು ಮರುಕಳುಹಿಸುವ ಪಾವತಿಗಳನ್ನು ಪಿನ್ ಮಾಡಲು ಸಾಧ್ಯವಾಗಲಿದೆ. ನೀವು ಯಾರಿಗೆ ಹೆಚ್ಚಿನ ಪಾವತಿಯನ್ನು ಮಾಡುತ್ತಿರೋ ಅವರ ಪ್ರೊಫೈಲ್ ಅನ್ನು ಪಿನ್ ಮಾಡಿ ಇಟ್ಟುಕೊಳ್ಳಬಹುದಾಗಿದೆ.

ಈ ರೀತಿಯಾಗಿ ಪಿನ್ ಮಾಡಿ ಇಟ್ಟುಕೊಳ್ಳುವುದರಿಂದ ಬಳಕೆದಾರರಿಗೆ ಪ್ರೊಪೈಲ್ ಗಳು ಬೇಗ ಸಿಗಲಿದೆ. ನಿಮ್ಮ ಪೆಟಿಎಂ ಪಾವತಿಯು ಇನ್ನಷ್ಟು ವೇಗವಾಗಲಿದೆ. ಇನ್ನು ನೀವು ಯಾರ ಪ್ರೊಪೈಲ್ ಅನ್ನು ಪಿನ್ ಮಾಡಲು ಬಯಸುತ್ತೀರೋ ಎನ್ನುವುದು ನಿಮ್ಮ ಆಯ್ಕೆಯಲ್ಲಿರುತ್ತದೆ. ಪಿನ್ ಇತ್ತೀಚಿನ ಪಾವತಿ ವೈಶಿಷ್ಟ್ಯದ ಅಡಿಯಲ್ಲಿ ಮೇಲ್ಭಾಗದಲ್ಲಿ ಕೇವಲ 5 ಸಂಪರ್ಕಗಳನ್ನು ಮಾತ್ರ ಪಿನ್ ಮಾಡಿ ಇಡಲು ಸಾಧ್ಯವಾಗುತ್ತದೆ. ನಿಮ್ಮ ಪೆಟಿಎಂ ಅಪ್ಲಿಕೇಶನ್ ಅನ್ನು ನವೀಕರಿಸಿಕೊಂಡು ಪಿನ್ ಆಯ್ಕೆಯನ್ನು ಪಡೆಯಬಹುದು.

Paytm Update
Image Source:Paytm

Join Nadunudi News WhatsApp Group

Join Nadunudi News WhatsApp Group