Pejavara Shree: ಅಯೋದ್ಯೆಯಲ್ಲಿ BJP ಸೋತಿದ್ದು ಯಾಕೆ…? ಅಸಲಿ ಕಾರಣ ತಿಳಿಸಿದ ಪೇಜಾವರ ಶ್ರೀಗಳು

ಅಯೋದ್ಯೆಯಲ್ಲಿ BJP ಸೋಲಿನ ಅಸಲಿ ಕಾರಣ ತಿಳಿಸಿದ ಪೇಜಾವರ ಶ್ರೀಗಳು

Pejavara Shree About Lok Sabha Election Result: ಸದ್ಯ ಲೋಕಸಭಾ ಚುನಾವಣೆಯಲ್ಲಿ ರಾಮನಾಗರಿ ಅಯೋದ್ಯೆಯಲ್ಲಿ BJP ಪಕ್ಷ ಸೋಲನ್ನು ಕಂಡಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ರಾಮನ ಅಯೋದ್ಯೆ ನಿರ್ಮಾಣಕ್ಕೆ ಕಾರಣವಾದ ಮೋದಿ ಸರಕಾರಕ್ಕೆ ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಸದ್ಯ ಹಲವು ಪ್ರದೇಶದಲ್ಲಿ ಮುನ್ನಡೆ ಕಂಡ BJP ಉತ್ತರ ಪ್ರದೇಶದಲ್ಲಿ ಸೋಲನ್ನು ಅನುಭವಿಸಲು ಕಾರಣವೇನು…? ಈ ಬಗ್ಗೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Pejavara Shree About Lok Sabha Election Result
Image Credit: NDTV

ಅಯೋದ್ಯೆಯಲ್ಲಿ BJP ಸೋಲಿನ ಅಸಲಿ ಕಾರಣ ತಿಳಿಸಿದ ಪೇಜಾವರ ಶ್ರೀಗಳು
ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ನಂತರದ ಎಲ್ಲಾ ಪೂಜಾ ಕಾರ್ಯಗಳನ್ನು ನೆಡೆಸಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಅಯೋದ್ಯೆಯಲ್ಲಿ BJP ಸೋಲಿನ ಅಸಲಿ ಕಾರಣವನ್ನ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ. ” ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ BJP ಎಡವಿರಬಹುದು ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲ್ಲು ಸಿಂಗ್ ಅವರನ್ನು 54,567 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅಯೋಧ್ಯೆಯಲ್ಲಿನ ಸೋಲು ಬಿಜೆಪಿಯ ಕಾರ್ಯಕರ್ತರು ಮತ್ತು ಮುಖಂಡರಿಗೆ ತೀವ್ರ ನೋವನ್ನುಂಟುಮಾಡಿದೆ.

” ಶ್ರೀ ರಾಮಚಂದ್ರನನ್ನು ತಂದವರು ನಾವೇ ಎಂದು BJP ನಾಯಕರು ಸುಳ್ಳು ಹೇಳಿಕೊಂಡು, ಶ್ರೀ ರಾಮನ ವಿಚಾರದಲ್ಲಿ ವ್ಯಾಪಾರ ಮಾಡೋಕೆ ಹೊರಟ್ಟಿದ್ದೇ ಸೋಲಿಗೆ ಕಾರಣ ಎಂದು ವಿಜೇತ ಅಭ್ಯರ್ಥಿ ಲೇವಡಿ ಮಾಡಿದ್ದರು”. “ಈ ಹಿಂದೆ 2 ಬಾರಿ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ಅವರು ನಮ್ಮ ಭಾರತ ದೇಶದ ಗೌರವವನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿದ್ದಾರೆ. ಪ್ರಜೆಗಳು ಸುಖವಾಗಿ ಬದುಕುವ ರೀತಿಯಲ್ಲಿ ರಾಮರಾಜ್ಯ ಸ್ಥಾಪನೆ ಆಗಬೇಕಾಗಿದೆ. ಎಲ್ಲರ ಹಿತವನ್ನು ಬಯಸುವ ಸರ್ಕಾರ ಬರಲಿ ಎನ್ನುವುದು ನಮ್ಮ ಆಶಯ ” ಎಂದು ಉಡುಪಿ ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.

Pejavara Shree Latest News
Image Credit: Deccanherald

ನರೇಂದ್ರ ಮೋದಿ ಸರ್ಕಾರದ ಸಾಧನೆ ತೃಪ್ತಿ ತಂದಿದೆಯೇ…?
ತೃಪ್ತಿ ಎನ್ನುವುದು ಯಾರಿಗೂ ಬರಲು ಸಾಧ್ಯವಿಲ್ಲ. ಯಾಕೆಂದರೆ ಆಶೋತ್ತರಗಳಿಗೆ ಕೊನೆಯೇ ಇಲ್ಲ, ಆದರೆ ಸಮಾಧಾನ ಎನ್ನುವುದು ಇದೆ ಎಂದು ಶ್ರೀಗಳು ಹೇಳಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಯೂ ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಮೋದಿಯವರು ಹೇಳಿದ್ದಾರೆ. ಎಲ್ಲರ ಹಿತವನ್ನು ಬಯಸುವ ಸರ್ಕಾರ ಅವರಿಂದ ಬರಲಿ ಎಂದು ಶ್ರೀಗಳು ಹೇಳಿದ್ದಾರೆ.

Join Nadunudi News WhatsApp Group

Ayodhya Lok Sabha Election Result
Image Credit: Republic Bharat

Join Nadunudi News WhatsApp Group