Pejavara Swamiji: ಈ ಒಂದು ಕಾರಣಕ್ಕೆ ರಾಮನ ಪ್ರಾಣ ಪ್ರತಿಷ್ಠೆ ಸಮಯದಲ್ಲಿ ಮುಖ ಮುಚ್ಚಿಕೊಂಡ ಪೇಜಾವರ ಶ್ರೀಗಳು

ರಾಮನ ಪ್ರಾಣ ಪ್ರತಿಷ್ಠೆ ಸಮಯದಲ್ಲಿ ಪೇಜಾವರ ಶ್ರೀಗಳು ಮುಖ ಮುಚ್ಚಿಕೊಂಡಿದ್ದು ಯಾಕೆ...?

Pejavara Shri Vishwa Prasanna Tirtha Swamiji: ಕಳೆದ ಕೆಲವು ದಿನಗಳಿಂದ ಎಲ್ಲರ ಬಾಯಲ್ಲೂ ಶ್ರೀರಾಮ ನಾಮಸ್ಮರಣೆ ಕೇಳಿಬರುತ್ತಿದೆ. ಇಡೀ ದೇಶವೇ ಜೈ ಶ್ರೀರಾಮ್ ಘೋಷಣೆಯಲ್ಲಿ ಮುಳಿಗಿಹೋಗಿತ್ತು. ಹಿಂದೂಗಳ ಹಲವು ವರ್ಷದ ಕನಸು ಜನವರಿ 22 ರಂದು ನೆರವೇರಿದೆ. ಕೋಟ್ಯಾಂತರ ಭಕ್ತರು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡಿದ್ದಾರೆ.

ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶ್ರೀರಾಮ ಮಂದಿರವನ್ನು (Ram Mandir Inauguration) ಉದ್ಘಾಟನೆ ಮಾಡಿದ್ದಾರೆ. ಸಿನಿಮಾ ತಾರೆಯರು, ರಾಯಕೀಯ ನಾಯಕರು ಸೇರಿದಂತೆ ವಿವಿಧ ಗಣ್ಯರು ರಾಮನ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದಾರೆ.

Ayodhya Ram Mandir Inauguration Update
Image Credit: Dailyhunt

ರಾಮಲಲ್ಲಾನಿಗೆ ನೈವೇದ್ಯ ಮಾಡುವ ಸಮಯದಲ್ಲಿ ಮುಖ ಮುಚ್ಚಿಕೊಂಡ ಪೇಜಾವರ ಸ್ವಾಮೀಜಿ
ಇನ್ನು ರಾಮನ ಪ್ರಾಣ ಪ್ರತಿಷ್ಠಾಪನಾ ಸಮಯದಲ್ಲಿ ಮೋದಿ ಅವರ ಜೊತೆ Pejavara Shri Vishwa Prasanna Tirtha ಸ್ವಾಮೀಜಿಯವರು ಕೂಡ ಇದ್ದರು. ಇನ್ನು ಪೇಜಾವರ ಸ್ವಾಮೀಜಿಯವರು ರಾಮಲಲ್ಲಾನಿಗೆ ನೈವೇದ್ಯ ಮಾಡುವ ಸಮಯದಲ್ಲಿ ಮುಖವನ್ನು ಮುಚ್ಚಿಕೊಂಡಿರುವುದು ಎಲ್ಲರಿಗು ಅಚ್ಚರಿ ಮೂಡಿಸಿದೆ.

ಸ್ವಾಮೀಜಿಯವರು ಮುಖ ಮುಚ್ಚಿಕೊಂಡಿರಲು ಕಾರಣ ಏನಿರಬಹುದು ಎಂದು ಜನರು ಯೋಚಿಸುತ್ತಿದ್ದಾರೆ. ಇದೀಗ ನಾವು ಈ ಲೇಖನದಲ್ಲಿ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಮುಖ ಮುಚ್ಚಿಕೊಳ್ಳಲು ಹಿಂದಿರುವ ಕಾರಣದ ಬಗ್ಗೆ ತಿಳಿಯೋಣ.

Pejavara Shri Vishwa Prasanna Tirtha Swamiji
Image Credit: Vistaranews

ಸ್ವಾಮೀಜಿಯವರು ಪ್ರಾಣಪ್ರತಿಷ್ಠಾಪನೆಯ ಸಮಯದಲ್ಲಿ ಮುಖಮುಚ್ಚಿಕೊಳ್ಳಲು ಕಾರಣವೇನು..?
ರಾಮಲಲ್ಲಾನಿಗೆ ನೈವೇದ್ಯ ಮಾಡುವ ಸಮಯದಲ್ಲಿ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಒಂದು ಹಂತದಲ್ಲಿ ಮುಖವನ್ನು ಮುಚ್ಚಿಕೊಂಡಿದ್ದರು. ರಾಮಲಲ್ಲಾನಿಗೆ ನೈವೇದ್ಯ ಮಾಡುವ ಸಮಯದಲ್ಲಿ ದೇವರನ್ನು ನೋಡಬಾರದು ಎನ್ನುವ ಶಾಸ್ತ್ರೀಯ ನಿಯಮವಿದೆ. ಪ್ರಧಾನಿ ಮೋದಿ ಅವರು ರಾಮಲಲ್ಲಾನಿಗೆ ಭಕ್ಯ ಮತ್ತು ಫಲಗಳನ್ನು ನೈವೇದ್ಯ ಮಾಡುತ್ತಿದ್ದರು. ಈ ವೇಳೆ ಮೋದಿ ವಾರ ಸಮೀಪವಿದ್ದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ತಮ್ಮ ಅಂಗವಸ್ತ್ರದಲ್ಲಿ ಮುಖ ಮುಚ್ಚಿಕೊಂಡಿದ್ದರು.

Join Nadunudi News WhatsApp Group

Join Nadunudi News WhatsApp Group