RBI Rule: ಬ್ಯಾಂಕ್ ಸಾಲ ಮಾಡಿದವರಿಗೆ ಮತ್ತು ಕ್ರೆಡಿಟ್ ಕಾರ್ಡ್ ಇದ್ದವರಿಗೆ RBI ನಿಂದ ಹೊಸ ನಿಯಮ.

ವೈಯಕ್ತಿಕ ಹಾಗೂ ಕ್ರೆಡಿಟ್ ಕಾರ್ಡ್ ಮೇಲಿನ ಸಾಲದ ನಿಯಮವನ್ನು ಬದಲಿಸಲು ನಿರ್ಧರಿಸಿದ rbi.

Personal Loan And Credit Card loan: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚಿನ ದಿನಗಳಲ್ಲಿಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಬ್ಯಾಂಕ್ ಗ್ರಾಹಕರ ಸುರಕ್ಷತೆಗಾಗಿ ಆರ್ ಬಿಐ ಹೊಸ ನಿಯಮಗಳನ್ನು ಬಿಡುಗಡೆ ಮಾಡುತ್ತಿದೆ. ಇನ್ನು ಹೊಸ ಹಣಕಾಸು ವರ್ಷದ ಪ್ರಾರಂಭದಿಂದ ಅನೇಕ ನಿಯಮಗಳನ್ನು ಬದಲಿಸಲಾಗಿದೆ.

ಇನ್ನು ನಿಯಮಗಳ ಬದಲಾವಣೆಯ ಜೊತೆಗೆ ಆರ್ ಬಿಐ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಇದೀಗ ಆರ್ ಬಿಐ ಸಾಲದ ನಿಯಮವನ್ನು ಬದಲಿಸಿದೆ. ಆರ್ ಬಿಐ ಯಾವ ಯಾವ ಸಾಲದ ನಿಯಮವನ್ನು ಬದಲಿಸಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Personal Loan And Credit Card loan
Image Credit: Rightsofemployees

ಬ್ಯಾಂಕ್ ಸಾಲ ಮಾಡಿದವರಿಗೆ ಮತ್ತು ಕ್ರೆಡಿಟ್ ಕಾರ್ಡ್ ಹೊಸ ನಿಯಮ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲದ ನಿಯಮಗಳನ್ನು ಬದಲಿಸಲು ನಿರ್ಧರಿಸಿದೆ. ಅಸುರಕ್ಷಿತ ಚಿಲ್ಲರೆ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಸಾಲಗಳನ್ನು ನೀಡುವ ಮೊದಲು ಗ್ರಾಹಕರ ಹಿನ್ನಲೆ ಪರಿಶೀಲಯೆಯನ್ನು ಇನ್ನಷ್ಟು ಬಿಗಿಗೊಳಿಸುವಂತೆ ಆರ್ ಬಿಐ ಹೇಳಿಕೆ ನೀಡಿದೆ. ಅಸುರಕ್ಷಿತ ಸಾಲಗಳಲ್ಲಿ ಬ್ಯಾಂಕ್ ಗಳು ಏನನ್ನು ವಾಗ್ದಾನ ಮಾಡಲಾಗುವುದಿಲ್ಲ ಎಂದು ಹೇಳಿದೆ.

ಕ್ರೆಡಿಟ್ ಕಾರ್ಡ್ ಸಾಲ ಮತ್ತು ವೈಯಕ್ತಿಕ ಸಾಲದಲ್ಲಿ ಬದಲಾವಣೆ
ಆರ್ ಬಿಐ ಕ್ರೆಡಿಟ್ ಕಾರ್ಡ್ ಸಾಲ ಮತ್ತು ವೈಯಕ್ತಿಕ ಸಾಲದಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಕ್ರೆಡಿಟ್ ಕಾರ್ಡ್ ಗಳು ಹಾಗೂ ವೈಯಕ್ತಿಕ ಸಾಲಗಳ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ.

Personal Loan And Credit Card loan
Image Credit: tatacapital

ಇನ್ನು 2022ರಲ್ಲಿ ವೈಯಕ್ತಿಕ ಸಾಲ ಪಡೆಯುವವರ ಸಂಖ್ಯೆ 7.8 ಕೋಟಿಯಿಂದ 9.9 ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ ಕ್ರೆಡಿಟ್ ಕಾರ್ಡ್‌ಗಳಿಂದ ಸಾಲ ಪಡೆಯುವವರ ಸಂಖ್ಯೆಯೂ ಶೇ.28ರಷ್ಟು ಏರಿಕೆಯಾಗಿ 1.7 ಲಕ್ಷ ಕೋಟಿ ರೂ. ಮೊದಲು ಇದು 1.3 ಲಕ್ಷ ಕೋಟಿ ಆಗಿತ್ತು.

Join Nadunudi News WhatsApp Group

ಇನ್ನು ಫೆಬ್ರವರಿಯಲ್ಲಿ ವೈಯಕ್ತಿಕ ಸಾಲವು 33 ಲಕ್ಷ ಕೋಟಿಯಿಂದ 40 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅದರಲ್ಲಿ 20 .4 % ಹೆಚ್ಚಳ ಕಂಡುಬಂದಿದೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಬಡ್ಡಿದರಗಳ ನಡುವೆ ಅಸುರಕ್ಷಿತ ಸಾಲದ ಬೆಳವಣಿಗೆ ಕಳವಳದ ವಿಷಯವಾಗಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ. ಇನ್ನು ಮುಂದಿನ ದಿನಗಳಲ್ಲಿ ಆರ್ ಬಿಐ ಕ್ರೆಡಿಟ್ ಕಾರ್ಡ್ ಸಾಲ ಮತ್ತು ವೈಯಕ್ತಿಕ ಸಾಲದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.

Join Nadunudi News WhatsApp Group