Personal Loan Interest: ಬ್ಯಾಂಕ್ ಸಾಲ ಮಾಡಿದವರಿಗೆ ಮತ್ತೆ ಬೇಸರದ ಸುದ್ದಿ, ಸಾಲದ ಬಡ್ಡಿ ದರದಲ್ಲಿ ಮತ್ತೆ ಇಷ್ಟು ಹೆಚ್ಚಳ

Personal Loan ತೆಗೆದುಕೊಳ್ಳುವವರಿಗೆ RBI ಹೊಸ ನಿಯಮ, ಬಡ್ಡಿದರ ಹೆಚ್ಚಳ

Personal Loan Interest Hike: ಹೊಸ ವರ್ಷದ ಆರಂಭದ ಹಿನ್ನಲೆ ಅನೇಕ ರೀತಿಯ ಹಣಕಾಸಿನ ವಹಿವಾಟುಗಳು ಬದಲಾಗಲಿವೆ. ಬ್ಯಾಂಕ್ ನ ವಹಿವಾಟಿಗೆ ಸಂಬಂಧಿಸಿದಂತೆ ಅನೇಕ ಹೊಸ ಹೊಸ ನಿಯಮಗಳನ್ನು RBI ರೂಪಿಸುತ್ತಿದೆ. ದೇಶದ ವಿವಿದ ಬ್ಯಾಂಕ್ ಗಳು ಜನರ ಆರ್ಥಿಕ ಸಮಸ್ಯೆಗೆ ಸಾಲ ಸೌಲಭ್ಯವನ್ನು ನೀಡುವ ಮೂಲಕ ಸಹಾಯವಾಗುತ್ತದೆ.

ಬ್ಯಾಂಕುಗಳು ಗ್ರಾಹಕರಿಗಾಗಿ ವಿವಿಧ ಸಾಲದ ಆಯ್ಕೆಯನ್ನು ನೀಡುತ್ತದೆ. ಸದ್ಯ RBI, Personal Loan ಸಂಬಂಧಿತ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. Personal ಪಡೆಯುವವರಿಗೆ RBI ಹೊಸ ನಿಯಮವನ್ನು ಪರಿಚಯಿಸಿದೆ. ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವ ಪ್ರತಿಯೊಬ್ಬರು ಕೂಡ RBI ಹೊಸ ನಿಯಮವನ್ನು ಅನುಸರಿಸಬೇಕಿದೆ.

Personal Loan Latest Update
Image Credit: Thehindubusinessline

Personal Loan ತೆಗೆದುಕೊಳ್ಳುವವರಿಗೆ RBI ಹೊಸ ನಿಯಮ
RBI ಬ್ಯಾಂಕ್ ಗಳಿಗೆ ಸಾಲಕ್ಕೆ ಸಂಬಂಧಿಸಿದಂತೆ ಹೊಸ ಹೊಸ ನಿಯಮವನ್ನು ವಿದಿಸುತ್ತಿದ್ದಂತೆ, ಬ್ಯಾಂಕ್ ಗಳು RBI ನ ಪ್ರತಿ ನಿಯಮವನ್ನು ತನ್ನ ಸಾಲದ ನಿಯಮದಲ್ಲಿ ಅಳವಡಿಸಿಕೊಳ್ಳುತ್ತಿದೆ. ಸದ್ಯ RBI ಬ್ಯಾಂಕ್ ನೀಡುವ ವೈಯಕ್ತಿಕ ಸಾಲ (Personal Loan) ಸಂಬಂಧಿತ ಮಹತ್ವದ ನಿರ್ಧಾರ ಕೈಗೊಂಡಿದೆ.

RBI ಹೊಸ ನಿಯಮದ ಅನುಸಾರ ಇನ್ನುಮುಂದೆ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವುದು ಕಷ್ಟವಾಗಬಹುದು. RBI ವೈಯಕ್ತಿಕ ಸಾಲಕ್ಕೆ ಸಮಬಂಧಿಸಿದಂತೆ ನಿಯಮವನ್ನು ಕಠಿಣಗೊಳಿಸಿದೆ. ನೀವು ಪರ್ಸನಲ್ ಲೋನ್ ಪಡೆಯುವ ಯೋಜನೆಯಲ್ಲಿದ್ದರೆ RBI ನ ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಉತ್ತಮ.

Personal Loan Interest Hike
Image Credit: Informalnewz

ಹೆಚ್ಚಾಗಲಿದೆ ವೈಯಕ್ತಿಕ ಸಾಲದ ಬಡ್ಡಿದರ
ಪರ್ಸನಲ್ ಲೋನ್ ಅನ್ನು RBI ಭದ್ರತೆ ಇಲ್ಲದೆ ಸಾಲ ಅಂದರೆ Unsecured Loan ಎಂದು ಪರಿಗಣಿಸಿದೆ. ಈ ಕಾರಣಕ್ಕೆ ಬ್ಯಾಂಕುಗಳಿಗೆ ಇರುವ Risk Factor ಪ್ರಮಾಣವನ್ನು ಶೇ. 100 ರಿಂದ ಶೇ. 125 ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಚಿನ್ನ ಮತ್ತು ಚಿನ್ನಾಭರಣದ ಮೇಲಿನ ರಿಸ್ಕ್ ಫ್ಯಾಕ್ಟಾರ್ ಅನ್ನು ಶೇ.100 ರ ಹಾಗೆ ಮುಂದುವರೆಯಲಿದೆ. RBI ಹೊಸ ನಿಯಮ ಗೃಹ ಸಾಲ, ಶಿಕ್ಷಣ ಸಾಲ ಮತ್ತು ವಾಹನ ಸಾಲಕ್ಕೆ ಅನ್ವಯವಾಗುವುದಿಲ್ಲ. ಪರ್ಸನಲ್ ಲೋನ್ ಹೆಚ್ಚಿನ ಸುರಕ್ಷತೆಯನ್ನು ನೀಡದಿರುವ ಕಾರಣ ಬಡ್ಡಿದರವನ್ನು ಹೆಚ್ಚಿಸಲು ನಿರ್ಧರಿಸಿದೆ.

Join Nadunudi News WhatsApp Group

Join Nadunudi News WhatsApp Group